Advertisment

ಇರೋದು ಒಂದೇ ಚಾನ್ಸ್​.. ಕ್ಯಾಪ್ಟನ್ ತಲೆಯಲ್ಲಿ ಹೊಸ ತಂತ್ರ.. ಆದರೂ ಕಾಡಿವೆ ಐದು ಪ್ರಶ್ನೆಗಳು..!

author-image
Ganesh
Updated On
ಇರೋದು ಒಂದೇ ಚಾನ್ಸ್​.. ಕ್ಯಾಪ್ಟನ್ ತಲೆಯಲ್ಲಿ ಹೊಸ ತಂತ್ರ.. ಆದರೂ ಕಾಡಿವೆ ಐದು ಪ್ರಶ್ನೆಗಳು..!
Advertisment
  • ಟೀಮ್ ಇಂಡಿಯಾಗೆ 'ಮಾಡು ಇಲ್ಲವೇ ಮಡಿ' ಪಂದ್ಯ
  • ಕ್ಯಾಪ್ಟನ್ ರೋಹಿತ್ ಶರ್ಮಾ​​​ ಮಾಡಿದ ತಂತ್ರವೇನು..?
  • ಗೆದ್ರೆ ಸರಣಿ ಸಮಬಲ..! ಸೋತ್ರೆ ಮಾನ ಹರಾಜು..!

ಕೊಲಂಬೋ ಪ್ರೇಮದಾಸ ಸ್ಟೇಡಿಯಂನಲ್ಲಿ ಭಾರತ ಹಾಗೂ ಶ್ರೀಲಂಕಾ ತಂಡಗಳು ಮತ್ತೆ ಮುಖಾಮುಖಿ ಆಗ್ತಿವೆ. ಇಂದು ನಡೆಯೋ 3ನೇ ಏಕದಿನ ಪಂದ್ಯ ಉಭಯ ತಂಡಕ್ಕೂ ವೆರಿ ಇಂಪಾರ್ಟೆಂಟ್​. ಲಂಕಾ ಸರಣಿ ಗೆಲುವಿಗೆ ಹವಣಿಸ್ತಿದ್ರೆ, ರೋಹಿತ್​ ಶರ್ಮಾ ಪಡೆ ಸಮಬಲಕ್ಕೆ ಕಾತರಿಸುತ್ತಿದೆ. ಇಂದಾದರೂ ಟೀಮ್ ಇಂಡಿಯಾ ಬ್ಯಾಟಿಂಗ್​​ ವೈಫಲ್ಯ ಮೆಟ್ಟಿ ನಿಲ್ಲುತ್ತಾ? ಲಂಕಾ ದಹನಕ್ಕೆ ಭಾರತದ ಸ್ಟ್ರಾಟಜಿ ಏನು?

Advertisment

ಟೀಮ್ ಇಂಡಿಯಾಗೆ ಡು ಆರ್​ ಡೈ ಮ್ಯಾಚ್!​
3ನೇ ಹಾಗೂ ಅಂತಿಮ ಏಕದಿನ ಕಾದಾಟಕ್ಕೆ ಉಭಯ ತಂಡಗಳು ಸಜ್ಜಾಗಿವೆ. ಇರೋದು ಒಂದೇ ಒಂದು ಚಾನ್ಸ್​​​. ಟೀಮ್ ಇಂಡಿಯಾ ಸರಣಿ ಸೋಲಿನ ಮುಖಭಂಗದಿಂದ ಪಾರಾಗಲು ಇಂದು ಸಿಂಹಳೀಯರನ್ನ ಬೇಟೆಯಾಡಲೇಬೇಕಿದೆ. ರೋಹಿತ್ ಪಡೆಗಿದು ಡು ಆರ್ ಡೈ ಬ್ಯಾಟಲ್​​. ಗೆದ್ದರೆ ಸರಣಿ ಸಮಬಲಕ್ಕೆ ಅವಕಾಶವಿದೆ. 1-0 ಮುನ್ನಡೆಯಲ್ಲಿರೋ ಆತಿಥೇಯ ಲಂಕಾ ಭಾರತೀಯ ಹುಲಿಗಳನ್ನ ಬೇಟೆಯಾಡಿ ಸರಣಿ ಗೆಲ್ಲಲು ಹಾತೊರೆಯುತ್ತಿದೆ. ಹೀಗಾಗಿ ಫೈನಲ್ ವಾರ್​​ ತೀವ್ರ ಕುತೂಹಲ ಕೆರಳಿಸಿದೆ.

ಇದನ್ನೂ ಓದಿ:ವಿನೇಶ್ ಫೋಗಟ್ ಗೆಲುವಿನ ಬಗ್ಗೆ ಕಂಗನಾ ರಣಾವತ್ ವ್ಯಂಗ್ಯ; ರೊಚ್ಚಿಗೆದ್ದ ಜನ..!

publive-image

ರೋಹಿತ್​ಗೆ ಹೆಗಲು ಕೊಡ್ತಾರಾ ಅತಿರಥರು?
ಇಡೀ ಸರಣಿಯಲ್ಲಿ ಕ್ಯಾಪ್ಟನ್​​​​ ರೋಹಿತ್​​​ ಒನ್​​​ಮ್ಯಾನ್​​ ಆರ್ಮಿಯಂತೆ ಹೋರಾಡ್ತಿದ್ದಾರೆ. ಇವರಿಗೆ ಉಳಿದವರಿಂದ ಸಾಥ್​ ಸಿಗ್ತಿಲ್ಲ. ಇದು ತಂಡದ ಹಿನ್ನಡೆಗೆ ಕಾರಣವಾಗಿದೆ. ಇಂದು ಭಾರತ ತಂಡ ಗೆಲುವಿನ ಟ್ರ್ಯಾಕ್​ಗೆ ಮರಳಬೇಕಾದ್ರೆ, ನಾಲ್ವರು ಅತಿರಥ ಮಹಾರಥರು ಕಮ್​ ಬ್ಯಾಕ್ ಮಾಡಲೇಬೇಕಿದೆ. ಹಾಗಾದಲ್ಲಿ ಮಾತ್ರ ಲಂಕಾದ ಸರಣಿ ಗೆಲುವಿನ ಕನಸನ್ನ ನುಚ್ಚು ನೂರಾಗಿಸಬಹುದು.

Advertisment

ಕೆರಳಿ ನಿಂತು ಆಪ್ತರಕ್ಷಕ ಆಗ್ತಾರಾ ಕಿಂಗ್ ಕೊಹ್ಲಿ?
ಕಿಂಗ್ ಕೊಹ್ಲಿ.. ಈ ಬ್ಯಾಟಿಂಗ್​​​ ಮಾಂತ್ರಿಕನ ಬ್ಯಾಟ್​​ ಪ್ರಸಕ್ತ ಸರಣಿಯಲ್ಲಿ ಸೌಂಡ್​ ಮಾಡ್ತಿಲ್ಲ. ಆಡಿದ ಎರಡು ಇನ್ನಿಂಗ್ಸ್​​​​​ನಲ್ಲಿ ಬರೀ 38 ರನ್ ಗಳಿಸಿ ಟೀಕೆ ಎದುರಿಸ್ತಿದ್ದಾರೆ. ಭಾರತ ತಂಡ ಸಂಕಷ್ಟದಲ್ಲಿದೆ. ಕೊಹ್ಲಿ ಡಿಸೈಡಿಂಗ್ ಮ್ಯಾಚ್​ ಸ್ಪೆಶಲಿಸ್ಟ್ ಅನ್ನೋ ಮಾತಿದೆ. ಹೀಗಾಗಿ ಇಂದು ಕೊಹ್ಲಿ ಮೇಲೆ ಅಪಾರ ನಿರೀಕ್ಷೆಗಳಿವೆ. ತಪ್ಪುಗಳ ಕಡೆ ವರ್ಕೌಟ್​ ಮಾಡಿದ್ರೆ ಲಂಕಾ ಉಡೀಸ್ ಆಗೋದು ಗ್ಯಾರಂಟಿ.

ರಾಹುಲ್ ರಾರಾಜಿಸಿದ್ರೆ ತಂಡದ ಹಣೆಬರಹವೇ ಬದಲು
ಕನ್ನಡಿಗ ಕೆಎಲ್ ರಾಹುಲ್​​​ ಆರಂಭಿಕ ಎರಡು ಪಂದ್ಯಗಳಲ್ಲಿ ಬಿಗ್​ ಇನ್ನಿಂಗ್ಸ್​ ಕಟ್ಟಿಲ್ಲ. ಆದ್ರೆ ಯಾವುದೇ ಕ್ಷಣದಲ್ಲೂ ಬೌನ್ಸ್​ಬ್ಯಾಕ್ ಮಾಡುವ ಕೆಪಾಸಿಟಿ ಅವರಿಗಿದೆ. ಈ ಹಿಂದೆ ಅನೇಕ ಬಾರಿ ಅದನ್ನ ಪ್ರೂವ್ ಮಾಡಿದ್ದಾರೆ. ಹೆಡ್​ಕೋಚ್​​​​ ಗಂಭೀರ್​​​​ ಸ್ಲಾಟ್​ ಬದಲಿಸದೇ 4 ಅಥವಾ​​ 5ನೇ ಕ್ರಮಾಂಕದಲ್ಲಿ ಆಡಿಸಿದ್ದೆ ಆದ್ರೆ ತಂಡದ ಹಣೆಬರಹವನ್ನ ಬದಲಿಸಬಲ್ಲರು.

ಇದನ್ನೂ ಓದಿ:IND vs SL: ಪ್ರತಿಷ್ಠೆಯ ಪ್ರಶ್ನೆ.. ಕೋಚ್ ಗಂಭೀರ್ ಇವತ್ತು ಈ ಆಟಗಾರರಿಗೆ ಕೊಕ್ ಕೊಡಲಿದ್ದಾರೆ..

Advertisment

ಲಂಕಾ ಬೌಲರ್​ಗಳನ್ನ ಗಿರಗಿಟ್ಲಿ ಆಡಿಸ್ತಾರಾ ಗಿಲ್
ಆರಂಭಿಕನಾಗಿ ಯಂಗ್​ಬ್ಯಾಟರ್​ ಶುಭ್​​ಮನ್ ಗಿಲ್​​ ಸೈಲೆಂಟಾಗಿದ್ದಾರೆ. 25ರ ಎವರೇಜ್​ನಲ್ಲಿ 51 ರನ್ ಗಳಿಸಿ ಟೀಕಾಕಾರಿಗೆ ಆಹಾರವಾಗಿದ್ದಾರೆ. ಟ್ರೋಲಿಗರಿಗೆ ಆನ್ಸರ್​ ಕೊಡಲು ಇರೋದೊಂದೇ ದಾರಿ ಕಮ್​ಬ್ಯಾಕ್​​. ಕೊಲಂಬೋದಲ್ಲಿ ಬಿಗ್ ಇನ್ನಿಂಗ್ಸ್ ಕಟ್ಟಿದ್ರೆ ಲಂಕಾ ಬೌಲರ್​ಗಳನ್ನ ಗಿರಗಿಟ್ಲಿ ಆಡಿಸಬಹುದು.

ಭಾರತಕ್ಕೆ 'ಶ್ರೇಯ' ತಂದುಕೊಡ್ತಾರಾ ಶ್ರೇಯಸ್ ಅಯ್ಯರ್​​
ಮೊದಲೆರಡು ಪಂದ್ಯಗಳಲ್ಲಿ ಶ್ರೇಯಸ್​ ಅಯ್ಯರ್ ಬ್ಯಾಟ್​​ ಘರ್ಜಿಸಿಲ್ಲ. ಇಂದು ಅವರ ರನ್​​​ ಸರಮಾಲೆ ಕಟ್ಟುವ ಸಾಧ್ಯತೆ ದಟ್ಟವಾಗಿದೆ. ಯಾಕಂದ್ರೆ ಶ್ರೇಯಸ್​ ಕ್ವಿಕ್​​ ಲರ್ನರ್​​. ಅಲ್ಲದೇ ಭಾರತಕ್ಕಿದು ಅಳಿವು ಉಳಿವಿನ ಪ್ರಶ್ನೆಯಾಗಿದೆ. ಹಾಗಾಗಿ ಸ್ಟಾರ್ ಬ್ಯಾಟರ್​ ಲಂಕಾ ಮೇಲೆ ಸವಾರಿ ಮಾಡಿದ್ರು ಆಶ್ವರ್ಯವೇನಿಲ್ಲ.

ಇದನ್ನೂ ಓದಿ:ಟೀಮ್​ ಇಂಡಿಯಾ ಮೂವರು ಸ್ಟಾರ್​ ಆಟಗಾರರಿಗೆ ಬಿಗ್​ ಶಾಕ್​​.. 3ನೇ ಏಕದಿನ ಪಂದ್ಯದಿಂದ ಔಟ್​​!

Advertisment

ಇವರಷ್ಟೇ ಅಲ್ಲದೇ ಉಳಿದವರು ಸಹ ಜವಾಬ್ದಾರಿಯನ್ನ ಸಮರ್ಥವಾಗಿ ನಿಭಾಯಿಸಬೇಕಿದೆ. ಹಾಗಾದ್ದಲ್ಲಿ ಮಾತ್ರ ಅಂತಿಮ ಪಂದ್ಯ ಗೆದ್ದು, ಸರಣಿ ಸಮಬಲದೊಂದಿಗೆ ಗುಡ್​ಬೈ ಹೇಳಬಹುದು. ಇಲ್ಲವಾದ್ರೆ ಸರಣಿ ಸೋತು, ವಿಶ್ವದ ಎದುರು ತಲೆ ತಗ್ಗಿಸಬೇಕಾಗುತ್ತೆ. ಅದಕ್ಕೆ ಅವಕಾಶ ಕೊಡದಿರಲಿ ಎಂಬುದೇ ಎಲ್ಲಾ ಅಭಿಮಾನಿಗಳ ಪ್ರಾರ್ಥನೆಯಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment