ಇವತ್ತು 11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ.. ವಿಶಾಖಪಟ್ಟಣಂನಲ್ಲಿ ಪ್ರಧಾನಿ ಮೋದಿ ಭಾಗಿ | VIDEO

author-image
Ganesh
Updated On
ಇವತ್ತು 11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ.. ವಿಶಾಖಪಟ್ಟಣಂನಲ್ಲಿ ಪ್ರಧಾನಿ ಮೋದಿ ಭಾಗಿ | VIDEO
Advertisment
  • ಆರ್‌ಕೆ ಬೀಚ್‌ನಿಂದ ಭೀಮಿಲಿ ಬೀಚ್‌ವರೆಗೆ ಬೃಹತ್​​​ ಯೋಗ ಮೇಳ
  • ಉಜ್ಜೈನಿಯ ಶಿಪ್ರಾ ನದಿಯಲ್ಲಿ ವಿದ್ಯಾರ್ಥಿಗಳು ಜಲಯೋಗ
  • ವಿಶ್ವದಾದ್ಯಂತ ಅದ್ಧೂರಿಯಾಗಿ ಯೋಗ ದಿನಾಚರಣೆ ಆಚರಣೆ

ಇಂದು ಅಂತರಾಷ್ಟ್ರೀಯ ಯೋಗ ದಿನ. ಭಾರತ ಮಾತ್ರವಲ್ಲದೇ ಇಡೀ ವಿಶ್ವದಾದ್ಯಂತ ಬಹಳ ಅದ್ಧೂರಿಯಾಗಿ ಯೋಗ ದಿನಾಚರಣೆ ಆಚರಣೆ ಮಾಡಲಾಗ್ತಿದೆ. ಇದ್ರ ಪ್ರಯುಕ್ತ ಆಂಧ್ರ ಪ್ರದೇಶದ ವಿಶಾಖಪಟ್ಟಣಂನ ಭೋಗಪುರಂನಲ್ಲಿ ಆಯೋಜಿಸಿದ್ದ ಬೃಹತ್ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಕೂಡ ಭಾಗಿಯಾಗಿದ್ದಾರೆ.

ಸುಮಾರು 3.19 ಲಕ್ಷ ಜನ್ರು ಏಕಾಕಾಲಕ್ಕೆ ಯೋಗ ಮಾಡ್ತಿದ್ದು, ಸುಮಾರು 25 ಸಾವಿರ ವಿದ್ಯಾರ್ಥಿಗಳು 108 ನಿಮಿಷಗಳ ಕಾಲ ಸೂರ್ಯ ನಮಸ್ಕಾರ ಮಾಡಿ ಗಮನ ಸೆಳೆದಿದ್ರು. ಜೊತೆಗೆ ಈ ಅರ್ಥ ಪೂರ್ಣ ಕಾರ್ಯಕ್ರಮ ಹಲವು ದಾಖಲೆಗಳಿಗೆ ಸಾಕ್ಷಿಯಾಗಿದೆ.

ಇದನ್ನೂ ಓದಿ: ಐಬ್ರೋ ಶೇಪ್ ಮಾಡಿಸೋ ಮಹಿಳೆಯರೇ ಎಚ್ಚರ.. ವೈದ್ಯರಿಂದ ಶಾಕಿಂಗ್ ಅಂಶ ಬೆಳಕಿಗೆ!

ಅಂತರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಮಧ್ಯಪ್ರದೇಶದ ಉಜ್ಜೈನಿಯ ಶಿಪ್ರಾ ನದಿಯಲ್ಲಿ ವಿದ್ಯಾರ್ಥಿಗಳು ಜಲಯೋಗ ಮಾಡಿ ಗಮನ ಸೆಳೆದಿದ್ದಾರೆ.

ಬರೀ ಭಾರತ ಮಾತ್ರವಲ್ಲ ಪ್ರಪಂಚದ ಬೇರೆ ಬೇರೆ ಭಾಗಗಳಲ್ಲೂ ಯೋಗ ದಿನ ಆಚರಣೆ ಮಾಡಲಾಗ್ತಿದೆ. ಅದೇ ರೀತಿ ಕೊಲಂಬಿಯಾದ ನೈವಾದಲ್ಲೂ ಅಂತರಾಷ್ಟ್ರೀಯ ಯೋಗ ದಿನ ಆಚರಣೆ ಮಾಡಲಾಗಿದೆ. ಯೋಗ ಆಸ್ತಕರು ಹಾಗೂ ಲೋಕಲ್ ಕಮ್ಯೂನಿಟಿ ನಿವಾಸಿಗಳು ಸೇರಿದಂತ ಅನೇಕರು, ಪ್ರಾಣಾಯಾಮ, ಹಾಡು ಡ್ಯಾನ್ಸ್​ ಮಾಡೋ ಮೂಲಕ ಯೋಗ ದಿನವನ್ನ ಆಚರಣೆ ಮಾಡಿದ್ದಾರೆ.

ಇದನ್ನೂ ಓದಿ: 100 ಪ್ರಯಾಣಿಕರಿದ್ದ ಏರ್​ ಇಂಡಿಯಾ ವಿಮಾನಕ್ಕೆ ಪಕ್ಷಿ ಡಿಕ್ಕಿ.. 9 ವಿಮಾನಗಳ ಹಾರಟ ರದ್ದು!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment