/newsfirstlive-kannada/media/post_attachments/wp-content/uploads/2025/03/RCB-vs-KKR.jpg)
ಇಂಡಿಯನ್​ ಪ್ರೀಮಿಯರ್​​ ಲೀಗ್​ ಮೆಗಾ ಟೂರ್ನಿ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ. ಸೀಸನ್​ 18ರ ಓಪನಿಂಗ್​ ಮ್ಯಾಚ್​ಗೆ ಭಾರತದ ಕ್ರಿಕೆಟ್​ ಕಾಶಿ ಈಡನ್​ ಗಾರ್ಡನ್ಸ್​ ಸಜ್ಜಾಗಿದೆ. ಸಿಟಿ ಆಫ್​ ಜಾಯ್​​ ಕೊಲ್ಕತ್ತಾದಲ್ಲಿ ಐಪಿಎಲ್​ ಲೋಕದ ಮದಗಜಗಳ ಕಾಳಗ ನಡೆಯಲಿದೆ. RCB V/S KKR ಕದನ ಕ್ರಿಕೆಟ್​​ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.
ಕ್ರಿಕೆಟ್​​ ಜಗತ್ತು ತುದಿಗಾಲಲ್ಲಿ ನಿಂತು ಕಾಯ್ತಿದ್ದ ದಿನ ಬಂದೇ ಬಿಡ್ತು. ವಿಶ್ವದ ಶ್ರೀಮಂತ ಕ್ರಿಕೆಟ್​ ಲೀಗ್​ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ. ಒಂದು ಪ್ರತಿಷ್ಟಿತ ಟ್ರೋಫಿಗಾಗಿ ಇಂದಿನಿಂದ 10 ತಂಡಗಳು ಬ್ಯಾಟಲ್​ಫೀಲ್ಡ್​ನಲ್ಲಿ ಫೈಟ್​​ ನಡೆಸಲಿದೆ. 75 ಪಂದ್ಯಗಳಿಗೆ 18ನೇ ಸೀಸನ್​ನ ಐಪಿಎಲ್​ ಸಾಕ್ಷಿಯಾಗಲಿದ್ದು, 65 ದಿನಗಳ ಕಾಲ ಕ್ರಿಕೆಟ್​ ಫ್ಯಾನ್ಸ್​ಗೆ ಫುಲ್​ ಟ್ರೀಟ್​ ಕಾದಿದೆ.
ಸೂಪರ್​​ ಶನಿವಾರ.. ಬ್ಲಾಕ್​ ಬಸ್ಟರ್​ ಪಂದ್ಯ
ಈ ಸೀಸನ್​ ಐಪಿಎಲ್​ನ ಮೊದಲ ಪಂದ್ಯದಲ್ಲೇ ಕ್ರಿಕೆಟ್​ ಅಭಿಮಾನಿಗಳಿಗೆ ಭರ್ಜರಿ ಎಂಟರ್​​ಟೈನ್​ಮೆಂಟ್​​ ಕಾದಿದೆ. ಕಲರ್​ಫುಲ್​ ಲೀಗ್​​ನ ಉದ್ಘಾಟನಾ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್​​ ರೈಡರ್ಸ್​ ತಂಡಗಳು ಮುಖಾಮುಖಿಯಾಗ್ತಿವೆ. ಬ್ಲಾಕ್​ ಬಸ್ಟರ್​​ ಪಂದ್ಯಕ್ಕೆ ಭಾರತದ ಕ್ರಿಕೆಟ್​ ಕಾಶಿ ಈಡನ್​​ ಗಾರ್ಡನ್ಸ್​ ವೇದಿಕೆಯಾಗ್ತಿದೆ.
/newsfirstlive-kannada/media/post_attachments/wp-content/uploads/2025/03/RCB-vs-KKR-1.jpg)
ಪ್ರತಿ ವರ್ಷದಂತೆ ಈ ಸಲವೂ ಐಪಿಎಲ್ ಆಯೋಜಕರು ಉದ್ಘಾಟನಾ ಸಮಾರಂಭ ನಡೆಸ್ತಿದ್ದಾರೆ. ಉದ್ದೂರಿ ಕಾರ್ಯಕ್ರಮದಲ್ಲಿ ಯಾವೆಲ್ಲ ಸೆಲೆಬ್ರಿಟಿಗಳು ಪ್ರದರ್ಶನ ನೀಡಲಿದ್ದಾರೆ ಅನ್ನೋದು ಬಹಿರಂಗ ಆಗಿದೆ. ಬಿಸಿಸಿಐ ದೇಶ ಮತ್ತು ವಿದೇಶಗಳಿಂದ ಸ್ಟಾರ್ ಕಲಾವಿದರ ಆಹ್ವಾನಿಸುತ್ತದೆ. ಅಂತೆಯೇ ಈ ಬಾರಿ ಬಾಲಿವುಡ್ ತಾರೆ ನಟಿ ದಿಶಾ ಪಟಾನಿ (Disha Patani) ಪ್ರಸಿದ್ಧ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್ (Shreya Ghoshal) ಮತ್ತು ಪಂಜಾಬಿ ಗಾಯಕ ಕರಣ್ ಔಜ್ಲಾ (Karan Aujla) ಪ್ರದರ್ಶನ ನೀಡಲಿದ್ದಾರೆ. ಇವರ ಜೊತೆ ಇನ್ನೂ ಅನೇಕ ಸ್ಟಾರ್ ಸೆಲೆಬ್ರಿಟಿಗಳು ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: ವಿಶ್ವ ಜಲ ದಿನ: ಭಾರತದಲ್ಲಿ ಹೆಚ್ಚಾಗುತ್ತಿದೆ ನೀರಿನ ಸಮಸ್ಯೆ.. ಏನು ಮಾಡಬೇಕು? ಇಲ್ಲಿದೆ ವಿಶೇಷ ಮಾಹಿತಿ!
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us