/newsfirstlive-kannada/media/post_attachments/wp-content/uploads/2025/03/RCB-vs-KKR-2.jpg)
ಸೀಸನ್​ 18ರ ಓಪನಿಂಗ್​ ಮ್ಯಾಚ್​ಗೆ ಭಾರತದ ಕ್ರಿಕೆಟ್​ ಕಾಶಿ ಈಡನ್​ ಗಾರ್ಡನ್ಸ್​ ಸಜ್ಜಾಗಿದೆ. ಐಪಿಎಲ್​ನ ಮೊದಲ ಪಂದ್ಯದಲ್ಲೇ ಕ್ರಿಕೆಟ್​ ಅಭಿಮಾನಿಗಳಿಗೆ ಭರ್ಜರಿ ಎಂಟರ್​​ಟೈನ್​ಮೆಂಟ್​​ ಕಾದಿದೆ. ಕಲರ್​ಫುಲ್​ ಲೀಗ್​​ನ ಉದ್ಘಾಟನಾ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್​​ ರೈಡರ್ಸ್​ ತಂಡಗಳು ಮುಖಾಮುಖಿಯಾಗ್ತಿವೆ. ಬ್ಲಾಕ್​ ಬಸ್ಟರ್​​ ಪಂದ್ಯಕ್ಕೆ ಭಾರತದ ಕ್ರಿಕೆಟ್​ ಕಾಶಿ ಈಡನ್​​ ಗಾರ್ಡನ್ಸ್​ ವೇದಿಕೆಯಾಗ್ತಿದೆ.
ಹೊಸ ಸೀಸನ್​, ಹೊಸ ನಾಯಕ
ಹಿಂದಿದ್ದ ಆರ್​​ಸಿಬಿಗೂ ಈಗಿರೋ ಆರ್​​ಸಿಬಿಗೂ ಅಜಗಜಾಂತರ ವ್ಯತ್ಯಾಸವಿದೆ. ಹೊಸ ಸೀಸನ್​, ಹೊಸ ತಂಡ, ಹೊಸ ನಾಯಕನ ಬಲ ತಂಡಕ್ಕಿದೆ. ಇದೀಗ ಹೊಸ ಹುರುಪಿನೊಂದಿಗೆ ಹೊಸ ಸೀಸನ್​​ ಆರಂಭಿಸಲು ರೆಡ್​​ ಆರ್ಮಿ ರೆಡಿಯಾಗಿದೆ. ಭರ್ಜರಿ ತಯಾರಿ ನಡೆಸಿರೋ ಆರ್​ಸಿಬಿ, ರಾಜ ರಜತ್​​​ ಪಟಿದಾರ್​ ನಾಯಕತ್ವದಲ್ಲಿ ಯುದ್ಧ ಭೂಮಿಗೆ ಇಳಿಯಲು ರೆಡಿಯಾಗಿದೆ.
/newsfirstlive-kannada/media/post_attachments/wp-content/uploads/2025/03/KOHLI_Unbox.jpg)
RCBಗಿದು ಸೇಡಿನ ಸಮರ.. ಜಯದ ಆರಂಭಕ್ಕೆ ಪಣ
ಹೊಸ ಸೀಸನ್​​ ಬಂದಿದ್ರೂ ಹಳೆಯ ನೋವು ಇಂದಿಗೂ ತಂಡವನ್ನ ಕಾಡ್ತಿದೆ. ಕೆಕೆಆರ್​​​ ಎದುರು ಕಳೆದ ಸೀಸನ್​ನಲ್ಲಿ ಅನುಭವಿಸಿದ ಎರಡೂ ಸೋಲುಗಳು ತಂಡವನ್ನ ಕಾಡ್ತಿವೆ. ಆ ಸೋಲಿಗೆ ಲೆಕ್ಕಾ ಚುಕ್ತಾ ಮಾಡಲು ಈ ಸೀಸನ್​ನಲ್ಲಿ ಟೈಮ್​ ಬಂದಿದೆ. ಬ್ಯಾಟಿಂಗ್​, ಬೌಲಿಂಗ್​​ ಎರಡೂ ವಿಭಾಗದಲ್ಲಿ ಆರ್​​ಸಿಬಿ ಈ ಹಿಂದಿಗಿಂತ ಬ್ಯಾಲೆನ್ಸ್​​ಡ್​ ಆಗಿ ಕಾಣ್ತಿದೆ. ಕೊಹ್ಲಿಯಂತಹ ಅನುಭವಿ ಬ್ಯಾಟರ್​ ಜೊತೆಗೆ ಬಿಗ್​ ಹಿಟ್ಟರ್​ಗಳ ಬಲ ತಂಡಕ್ಕಿದೆ. ವಿಶ್ವ ಶ್ರೇಷ್ಠ ಪೇಸ್​ ಅಟ್ಯಾಕ್​ ತಂಡದಲ್ಲಿದೆ. ಸ್ಪಿನ್​ ವಿಭಾಗದಲ್ಲಿ ಕಾನ್ಫಿಡೆನ್ಸ್​ ಇಲ್ಲ ಅನ್ನೋದು ಬಿಟ್ರೆ, ಆರ್​​ಸಿಬಿ ತಂಡ ಈ ಬಾರಿ ಆನ್​ಪೇಪರ್​​ ಸಖತ್​ ಸ್ಟ್ರಾಂಗ್​ ಆಗಿ ಗುರುತಿಸಿಕೊಂಡಿದೆ.
ಮೊದಲ ಪಂದ್ಯಕ್ಕೆ ಕಿಂಗ್​ ಕೊಹ್ಲಿ ಕಠಿಣ ಅಭ್ಯಾಸ
ಗುರುವಾರವೇ ಕೊಲ್ಕತ್ತಾ ತಲುಪಿದ ಆರ್​​ಸಿಬಿ ತಂಡ ಈಡನ್​​ ಗಾರ್ಡನ್ಸ್​ನಲ್ಲಿ ಭರ್ಜರಿ ಅಭ್ಯಾಸ ನಡೆಸಿದೆ. ಅದ್ರಲ್ಲೂ ಮುಖ್ಯವಾಗಿ ವಿರಾಟ್​​ ಕೊಹ್ಲಿ ಪ್ರಾಕ್ಟಿಸ್​ ಸೆಷನ್​ನ ಸೆಂಟರ್​ ಆಫ್​ ಅಟ್ರಾಕ್ಷನ್​ ಆಗಿ ಕಾಣಿಸಿ ಕೊಂಡಿದ್ದಾರೆ. ಸುದೀರ್ಘ ಕಾಲ ಅಭ್ಯಾಸ ನಡೆಸಿದ ಕೊಹ್ಲಿ, ಭುವನೇಶ್ವರ್​ ಕುಮಾರ್​, ಜೋಶ್​ ಹೇಝಲ್​ವುಡ್​ ಎಸೆತಗಳನ್ನ ಹೆಚ್ಚು ಎದುರುಸಿದ್ದಾರೆ. ಆರಂಭದಲ್ಲಿ ತಡವರಿಸಿದ್ರೂ ಕೂಡ ಕೆಲ ಹೊತ್ತಲ್ಲೇ ರಿಧಮ್​​ ಕಂಡು ಕೊಂಡು ನೆಟ್ಸ್​ನಲ್ಲಿ ಅಬ್ಬರಿಸಿದ್ದಾರೆ.
ಇದನ್ನೂ ಓದಿ: ಒಂದು ಟ್ರೋಫಿ, 10 ಟೀಂ; ಉದ್ಘಾಟನಾ ಪಂದ್ಯದಲ್ಲಿ ಆರ್​ಸಿಬಿ..!
ಹೊಸ ‘ರಾಜ’ ರಜತ್​ಗೆ ಸೆಲೆಕ್ಷನ್​ ಸವಾಲು
ಮೊದಲ ಪಂದ್ಯಕ್ಕೂ ಮುನ್ನ ರಜತ್​ ಪಟಿದಾರ್​ಗೆ ಸೆಲೆಕ್ಷನ್​ ಸವಾಲು ಎದುರಾಗಿದೆ. ಇಂಡಿಯನ್​ ಪ್ಲೇಯರ್​​ಗಳ ಆಯ್ಕೆ ದೊಡ್ಡ ಸಮಸ್ಯೆ ಅನಿಸಿಲ್ಲ. ಪ್ಲೇಯಿಂಗ್​ ಇವೆಲೆನ್​ನಲ್ಲಿ ಸ್ಥಾನ ಪಡೆಯೋ ನಾಲ್ವರು ವಿದೇಶಿ ಪ್ಲೇಯರ್ಸ್​​ ಯಾರು ಅನ್ನೋದು ಪ್ರಶ್ನೆಯಾಗಿದೆ. ಫಿಲ್​ ಸಾಲ್ಟ್​, ಲಯಾಮ್​ ಲಿವಿಂಗ್​ಸ್ಟೋನ್, ಜೋಶ್​ ಹೇಜಲ್ವುಡ್​​​ ಮೊದಲ 3 ಆಯ್ಕೆಯಾಗಿದ್ದಾರೆ. ಇನ್ನೊಂದು ಸ್ಥಾನಕ್ಕೆ ಟಿಮ್ ಡೇವಿಡ್​, ರೊಮಾರಿಯೋ ಶೆಫರ್ಡ್​, ಜೇಕಬ್​ ಬೆತೆಲ್​ ನಡುವೆ ಫೈಟ್​ ಇದೆ. ಕ್ಯಾಪ್ಟನ್​​ ಚಾಯ್ಸ್​ ಯಾರು ಅನ್ನೋದು ಕುತೂಹಲ ಮೂಡಿಸಿದೆ.
KKR ಬಲಿಷ್ಠ
ಮೆಗಾ ಹರಾಜಿನಲ್ಲಿ ಎಲ್ಲಾ ಚೆಲ್ಲಾಪಿಲ್ಲಿಯಾಗಿದ್ರೂ ಕೆಕೆಆರ್​ ತಂಡ ಕೋರ್​ ಟೀಮ್​ನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅನುಭವಿ ಅಜಿಂಕ್ಯಾ ರಹಾನೆ ಪಟ್ಟ ಕಟ್ಟಿರುವ ಕೆಕೆಆರ್​ ಚಾಂಪಿಯನ್​ ಪಟ್ಟವನ್ನ ಡಿಫೆಂಡ್​ ಮಾಡಿಕೊಳ್ಳೋ ಗುರಿಯೊಂದಿಗೆ ಕಣಕ್ಕಿಳಿಯುತ್ತಿದೆ. ಟಾಪ್​ ಆರ್ಡರ್​​, ಮಿಡಲ್​ ಆರ್ಡರ್​​, ಲೋವರ್​ ಆರ್ಡರ್​​. ಪರ್ಫೆಕ್ಟ್​ ಬ್ಯಾಟಿಂಗ್​ ಲೈನ್​ ಅಪ್​ ತಂಡದಲ್ಲಿದೆ. ಬ್ಯಾಟಿಂಗ್​ನಲ್ಲಿ ಬಿಗ್​​ ಮ್ಯಾಚ್​​ ವಿನ್ನರ್​​ಗಳ ಬಲವಿದ್ದು, ಬೌಲಿಂಗ್​ನಲ್ಲೂ ಕೆಕೆಆರ್​ ಸ್ಟ್ರಾಂಗ್​ ಅನಿಸಿಕೊಂಡಿದೆ. ಸ್ಪಿನ್​ ಹಾಗೂ ಪೇಸ್​​ ಎರಡೂ ವಿಭಾಗದಲ್ಲಿ ಪ್ರೂವನ್​​ ಆಟಗಾರರಿದ್ದಾರೆ. ಹೀಗಾಗಿ ಕೆಕೆಆರ್​​ನ ಸೋಲಿಸೋದು ಸುಲಭದ ಟಾಸ್ಕ್​ ಅಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us