ಇಂದು ರಾಯಲ್ ಚಾಲೆಂಜರ್ಸ್ಗೆ ರಾಜಸ್ಥಾನ್ ಸವಾಲ್
ಜೈಪುರಲ್ಲಿ ರಾಜಸ್ಥಾನ್ಗೆ ನೀಡುತ್ತಾ ಆರ್ಸಿಬಿ ಚಮಕ್..?
ಡಬಲ್ ಜೋಡೆತ್ತು... ಇವರಿಗೆ ಸಾಟಿನಾ ಆರ್ಸಿಬಿ..?
ರಾಯಲ್ ಚಾಲೆಂಜರ್ಸ್ ವರ್ಸಸ್ ರಾಜಸ್ಥಾನ್ ರಾಯಲ್ಸ್ ಫೈಟ್ಗೆ ಕೌಂಟ್ಡೌನ್ ಶುರುವಾಗಿದೆ. ಸದ್ಯ 4ರಲ್ಲಿ 3 ಸೋಲುಂಡ ಆರ್ಸಿಬಿ ಅತಂತ್ರಕ್ಕೂ ಸಿಲುಕಿದೆ. ಗೆಲುವಿನ ಆತ್ಮವಿಶ್ವಾಸದಲ್ಲಿ ಜೈಪುರಕ್ಕೆ ಬಂದಿರುವ ಆರ್ಸಿಬಿಯ, ಕನಸು ನನಸಾಗುವುದು ಮಾತ್ರ. ಸುಲಭವಾಗಿಲ್ಲ.
ಹೊಸ ಸವಾಲಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಜ್ಜಾಗಿದೆ. ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂ ರಾಯಲ್ ಚಾಲೆಂಜರ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಿನ ಮೆಗಾ ಫೈಟ್ಗೆ ವೇದಿಯಾಗಿದ್ದು, ಸೋಲಿಲ್ಲದ ಸರದಾರನಾಗಿ ಮುನ್ನಗ್ಗುತ್ತಿರುವ ರಾಜಸ್ಥಾನ್ ರಾಯಲ್ಸ್, ತನ್ನ ತವರಿನ ಅಂಗಳದಲ್ಲೇ ಬ್ರೇಕ್ ಹಾಕುವ ಲೆಕ್ಕಚಾರದಲ್ಲಿ ಆರ್ಸಿಬಿ ರಣತಂತ್ರ ರೂಪಿಸಿದೆ. ಆದ್ರೆ, ಜೈಪುರಲ್ಲಿ ರಾಜಸ್ಥಾನ್ ರಾಯಲ್ಸ್ಗೆ ಚಮಕ್ ನೀಡೋದು ಸುಲಭದ ಮಾತಲ್ಲ. ಇದಕ್ಕೆ ಕಾರಣ ನಾಲ್ವರು.
ಇದನ್ನೂ ಓದಿ: ಫೀಲ್ಡಿಂಗ್ಗೆ ಅಡ್ಡಿಪಡಿಸಿದ ಜಡೇಜಾ; ರನೌಟ್ಗೆ ಅಪೀಲ್ ಮಾಡದೇ ವಿವಾದಕ್ಕೆ ಸಿಲುಕಿಕೊಂಡ ಕಮ್ಮಿನ್ಸ್..!
ಹೌದು! ರಾಜಸ್ತಾನ ರಾಯಲ್ಸ್ ಎದುರು ಆರ್ಸಿಬಿ ಗೆಲ್ಲಬೇಕಾದ್ರೆ, ರಾಜಸ್ಥಾನ್ ರಾಯಲ್ಸ್ ತಂಡದಲ್ಲಿನ ಡಬಲ್ ಜೋಡೆತ್ತಿನ ಎದುರು ಮೇಲುಗೈ ಸಾಧಿಸಿದರಷ್ಟೇ ಸಾಧ್ಯ. ಇಲ್ಲ ಜೈಪುರದಲ್ಲೂ ರಾಯಲ್ ಚಾಲೆಂಜರ್ಸ್ಗೆ ಸೋಲು ಕಟ್ಟಿಟ್ಟ ಬುತ್ತಿ.
ಟಾಪ್ ಆರ್ಡರ್ ಬ್ಯಾಟರ್ಗಳೇ ಫೈರಿ ಪೇಸರ್ಗಳ ಟಾರ್ಗೆಟ್
ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಮೊದಲ ಸವಾಲೇ ಲೆಫ್ಟಿ ಫೇಸರ್ಗಳಾದ ಟ್ರೆಂಟ್ ಬೋಲ್ಟ್ ಆ್ಯಂಡ್ ನಾಂದ್ರೆ ಬರ್ಗರ್.. ಪವರ್ ಪ್ಲೇನಲ್ಲಿ ಪವರ್ ಫುಲ್ ಸ್ಪೆಲ್ ನಡೆಸೋ ಈ ಜೋಡಿ, ಘಟನಾಘಟಿ ಬೌಲರ್ಗಳ ನಿದ್ದೆ ಗೆಡಿಸೋದ್ರಲ್ಲಿ ಅನುಮಾನ ಇಲ್ಲ. 145ರ ವೇಗದಲ್ಲಿ ಚೆಂಡನ್ನ ಎಸೆಯಬಲ್ಲ ಇವರು, ಸ್ವಿಂಗ್, ಯಾರ್ಕರ್ ಎಸೆಯುವಲ್ಲಿ ನಿಸ್ಸೀಮರು.
ಅಷ್ಟೇ ಅಲ್ಲ, ರಾಜಸ್ಥಾನ್ ರಾಯಲ್ಸ್ ಪರ ವಿಕೆಟ್ ಟೇಕರ್ಗಳಾಗಿ ಮೆರೆದಾಡ್ತಿರುವ ಇವರು, ಮ್ಯಾಚ್ ವಿನ್ನರ್ ಬೌಲರ್ಗಳು ಆಗಿದ್ದಾರೆ. ಎದುರಾಳಿ ತಂಡದ ಟಾಪ್ ಆರ್ಡರ್ ಬ್ಯಾಟರ್ಗಳನ್ನೇ ಟಾರ್ಗೆಟ್ ಮಾಡುವ ಇವರಿಗೆ, ಘಟಾನುಘಟಿ ಬ್ಯಾಟರ್ಗಳ ವಿಕೆಟ್ ಬೇಟೆಯಾಡುವುದು ಕಷ್ಟದ ಮಾತಲ್ಲ. ಹೀಗಾಗಿ ಮೊದಲ 6 ಓವರ್ಗಳಲ್ಲಿ ಆರ್ಸಿಬಿಯ ಟಾಪ್ ಆರ್ಡರ್ ಎದೆಯೊಡ್ಡಿ ನಿಲ್ಲಬೇಕಿದೆ. ಅಕಸ್ಮಾತ್ ಇವರಿಬ್ಬರ ಸುಂಟರಗಾಳಿಗೆ ಸಿಕ್ಕರೆ, ಜೈಪುರದಲ್ಲೂ ಆರ್ಸಿಬಿ ಉಡೀಸ್ ಗ್ಯಾರಂಟಿ.
ಇಬ್ಬರನ್ನ ಎದುರಿಸೋದೆ ಬಿಗ್ ಚಾಲೆಂಜ್..!
ಪವರ್ ಪ್ಲೇನಲ್ಲಿ ಎಡಗೈ ವೇಗಿಗಳ ಕಾಟ ಎದುರಿಸಲಿರುವ ಆರ್ಸಿಬಿಗೆ, ಮಿಡಲ್ ಓವರ್ಗಳಲ್ಲಿ ಎದುರಾಗುವ ಸವಾಲೇ ಆಫ್ ಸ್ಪಿನ್ನರ್ ಆರ್.ಅಶ್ವಿನ್ ಹಾಗೂ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಲ್.. ಮಿಡಲ್ ಓವರ್ಗಳಲ್ಲಿ ಜಾದು ಮಾಡೋ ಇವರು, ಆರ್ಆರ್ ತಂಡದ ಗೇಮ್ ಚೇಂಜರ್ಗಳಾಗಿದ್ದಾರೆ. ಹೀಗಾಗಿ ಮಿಡಲ್ ಓವರ್ಗಳಲ್ಲಿ ಆರ್ಸಿಬಿ ಪಾಲಿಗೆ ವಿಲನ್ಸ್ ಆದರೂ ಅಚ್ಚರಿ ಇಲ್ಲ.
ಈ ಡಬಲ್ ಜೋಡೆತ್ತು ಮಾತ್ರವೇ ಅಲ್ಲ.. ಮತ್ತೊಂದೆಡೆ ಐಪಿಎಲ್ನಲ್ಲಿ ಅತಿ ಹೆಚ್ಚು ಬಾರಿ ಕಿಂಗ್ ಕೊಹ್ಲಿ, ವಿಕೆಟ್ ಬೇಟೆಯಾಡಿರೋ ಸ್ವಿಂಗ್ ಮಾಸ್ಟರ್ ಸಂದೀಪ್ ಶರ್ಮಾ ಕಾಟವೂ ತಪ್ಪಿದ್ದಲ್ಲ. ಹೀಗಾಗಿ ಇವರಿಗೆ ಟಕ್ಕರ್ ನೀಡುವಂತ ಕ್ಲಾಸ್ ಬ್ಯಾಟಿಂಗ್ ಆರ್ಸಿಬಿ ಬ್ಯಾಟ್ಸ್ಮನ್ಗಳಿಂದ ಬರಬೇಕಿದೆ.
ಇದನ್ನೂ ಓದಿ: ಮಂಗನ ದಾಳಿಯಿಂದ 15 ತಿಂಗಳದ ಮಗು ಕಾಪಾಡಲು Alexaಗೆ ಬೇಡಿಕೊಂಡ ಬಾಲಕಿ; ಆಮೇಲೆ ಏನಾಯ್ತು ಅಂದರೆ..
ಇಂದಿನ ಪಂದ್ಯದ ಬ್ಯಾಟಲ್ ಅಂದ್ರೆ, ಅದು ಆರ್ಸಿಬಿಯ ಬ್ಯಾಟಿಂಗ್ ವರ್ಸಸ್ ಆರ್ಆರ್ ಬೌಲಿಂಗ್. ಆದ್ರೆ, ಈ ವರ್ಲ್ಡ್ ಕ್ಲಾಸ್ ಬೌಲರ್ಗಳ ಎದುರು ಘರ್ಜಿಸಬೇಕಾದ್ರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟಾಪ್ ಆರ್ಡರ್ ಮೈಕೊಡವಿ ನಿಲ್ಲಬೇಕು. ಪ್ರಮುಖವಾಗಿ ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿ, ಮ್ಯಾಕ್ಸ್ವೆಲ್, ಕ್ಯಾಮರೂನ್ ಗ್ರೀನ್ ಹೆಸರಿಗೆ ತಕ್ಕಂತ ಆಟವಾಡಬೇಕಿದೆ. ಇಲ್ಲ.! ಇಂದು ಮತ್ತೊಂದು ಸೋಲು ಅನುಭವಿಸೋದ್ರಲ್ಲಿ ಅನುಮಾನ ಇಲ್ಲ.
ವಿಶೇಷ ವರದಿ: ಸಂತೋಷ್
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್