ಬೆಂಗಳೂರಲ್ಲೇ ಇವತ್ತು RCB ಮ್ಯಾಚ್​.. ಫ್ಯಾನ್ಸ್ ತಿಳಿದುಕೊಳ್ಳಲೇಬೇಕಾದ ವಿಷಯಗಳು ಇಲ್ಲಿವೆ

author-image
Ganesh
Updated On
ಚೆನ್ನೈಗೆ ಮತ್ತೆ ಬಿಗ್ ಶಾಕ್.. ಅತಿ ಹೆಚ್ಚು ಫಾಲೋವರ್ಸ್ ಹೊಂದಿದ ಐಪಿಎಲ್ ತಂಡ RCB
Advertisment
  • ಚಿನ್ನಸ್ವಾಮಿ ಅಂಗಳದಲ್ಲಿ ಚೆನ್ನೈ-ಆರ್​​ಸಿಬಿ ಸಮರ
  • ಚೆನ್ನೈಗೆ ಚಮಕ್​ ಕೊಡಲು ಬೆಂಗಳೂರು ಬಾಯ್ಸ್​ ರೆಡಿ
  • ಆಲ್​​ರೌಂಡ್​​ ಆಟ, ಪ್ಲೇ ಆಫ್​ ಎಂಟ್ರಿಯ ತವಕ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್​ಕಿಂಗ್ಸ್​​ ಹೈವೋಲ್ಟೇಜ್ ಪಂದ್ಯಕ್ಕೆ ಕೆಲವೇ ಕೆಲವು ಗಂಟೆಗಳು ಮಾತ್ರ ಬಾಕಿ ಉಳಿದಿವೆ. ಐಪಿಎಲ್​ನ ಬದ್ಧವೈರಿಗಳ ಫೈಟ್ ನೋಡೋಕೆ, ಕ್ರಿಕೆಟ್ ಜಗತ್ತೇ ಕಾಯ್ತಿದೆ. ಬೆಂಗಳೂರಿನ ಚಿನ್ನಸ್ವಾಮಿ ಬ್ಯಾಟಲ್​ ಫೀಲ್ಡ್​ನಲ್ಲಿ ನಡೆಯಲಿರೋ ಸೌತ್ ಇಂಡಿಯನ್ ಡರ್ಬಿ ಅಭಿಮಾನಿಗಳ ಕುತೂಹಲ ಕೆರಳಿಸಿದೆ.

10 ಪಂದ್ಯಗಳಲ್ಲಿ 7 ಪಂದ್ಯ ಗೆದ್ದು ಪ್ಲೇ ಆಫ್​ ಎಂಟ್ರಿಗೆ ತುದಿಗಾಲಲ್ಲಿ ನಿಂತಿರೋ ಆರ್​​ಸಿಬಿ. ಕೇವಲ 2 ಪಂದ್ಯ ಗೆದ್ದು ಟೂರ್ನಿಯಿಂದ ಹೊರ ಬಿದ್ದಿರೋ ಚೆನ್ನೈ ಸೂಪರ್​ ಕಿಂಗ್ಸ್​. ಈ ಸೀಸನ್​ನಲ್ಲಿ​ ಡಿಫರೆಂಟ್​ ​ಆಟವಾಡಿರೂ ಎರಡೂ ತಂಡಗಳ ಮುಖಾಮುಖಿಗೆ ವೇದಿಕೆ ಸಜ್ಜಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಆರ್​​ಸಿಬಿ - ಸಿಎಸ್​ಕೆ ಮುಖಾಮುಖಿಯಾಗ್ತಿದ್ದು, ಕ್ರಿಕೆಟ್​ ವಲಯದಲ್ಲಿ ಹೈವೋಲ್ಟೆಜ್​ ಕದನದ ಫೀವರ್​ ಜೋರಾಗಿದೆ.

ಇದನ್ನೂ ಓದಿ: RCB vs CSK ಹೈವೋಲ್ಟೇಜ್ ಪಂದ್ಯ ನಡೆಯುತ್ತಾ.. ವೆದರ್ ರಿಪೋರ್ಟ್ ಏನ್ ಹೇಳುತ್ತೆ?

publive-image

ಚಿನ್ನಸ್ವಾಮಿ ಅಂಗಳದಲ್ಲಿ ಚೆನ್ನೈ-ಆರ್​​ಸಿಬಿ ಸಮರ

ಈ ಸೀಸನ್​​ನಲ್ಲಿ ಬೊಂಬಾಟ್​ ಪ್ರದರ್ಶನ ನೀಡಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಜೋಷ್ ಇದೆ. ಆರ್​ಸಿಬಿ ತಂಡಕ್ಕೆ ಎದುರಾಳಿಗಳನ್ನ ಉಡಾಯಿಸೋ ತಾಖತ್ತಿದೆ. ತವರಿನ ಹೊರಗೆ ಅಜೇಯ ಓಟ ನಡೆಸ್ತಿರೋ ಆರ್​​ಸಿಬಿ, ತವರಿನಲ್ಲಿ ಸರಣಿ ಸೋಲಿಗೆ ಫುಲ್​ ಸ್ಟಾಫ್​ ಇಟ್ಟಿದೆ. ರಾಜಸ್ಥಾನ್​ ಎದುರು ಹೋಮ್​​ಗ್ರೌಂಡ್​ನಲ್ಲಿ ಮೊದಲ ಜಯ ಸಾಧಿಸಿರೋ ಬೋಲ್ಡ್​​ ಆರ್ಮಿಯಲ್ಲಿ ಗೆಲ್ಲೋ ಉತ್ಸಾಹ ಹೆಚ್ಚಿದೆ. ಹ್ಯಾಟ್ರಿಕ್ ಪಂದ್ಯ​ ಗೆದ್ದಿರುವ ಆತ್ಮವಿಶ್ವಾಸದಲ್ಲಿ ಇಂದು ಚೆನ್ನೈ ಸೂಪರ್​ಕಿಂಗ್ಸ್ ವಿರುದ್ಧ ಕಣಕ್ಕಿಳಿತಿರೋ ಆರ್​​ಸಿಬಿ ಗೆಲುವಿಗೆ ಪಣತೊಟ್ಟಿದೆ.

ಪ್ಲೇಆಫ್​ ಎಂಟ್ರಿಯ ತವಕ

ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ತಂಡ ಫುಲ್​ ಕಾನ್ಫಿಡೆಂಟ್​ ಆಗಿದೆ. ಬ್ಯಾಟಿಂಗ್​, ಬೌಲಿಂಗ್​, ಫೀಲ್ಡಿಂಗ್​ ಮೂರೂ ವಿಭಾಗದಲ್ಲಿ ಫಸ್ಟ್​ ಕ್ಲಾಸ್​ ಪರ್ಫಾಮೆನ್ಸ್​ ನೀಡ್ತಿದೆ. ಪಂದ್ಯದಿಂದ ಪಂದ್ಯಕ್ಕೆ ತಂಡದಲ್ಲಿ ಹೊಸ ಹೊಸ ಆಟಗಾರರು ಮ್ಯಾಚ್ ವಿನ್ನರ್​ಗಳಾಗಿ ಹೊರ ಹೊಮ್ಮುತ್ತಿದ್ದಾರೆ. ಕೊಹ್ಲಿ, ಫಿಲ್​ ಸಾಲ್ಟ್​, ಪಡಿಕ್ಕಲ್, ಹೇಜಲ್​ವುಡ್​, ಕೃನಾಲ್​ ಪಾಂಡ್ಯ, ಸುಯಶ್​ ಶರ್ಮಾ ಕನ್ಸಿಸ್ಟೆನ್ಸಿ ಕಾಯ್ದುಕೊಂಡಿದ್ದಾರೆ. ಕಳೆದ ಮೂರೂ ಪಂದ್ಯ ಗೆದ್ದು ಬೀಗಿರೋ ಆರ್​​ಸಿಬಿ ಪ್ಲೇ ಆಫ್​ಗೆ ಎಂಟ್ರಿ ಕೊಡೋ ತವಕದಲ್ಲಿದೆ.
ಕಳೆದುಕೊಳ್ಳೋದು ಏನೂ ಇಲ್ಲ..

ಈ ಸೀಸನ್​ನಲ್ಲಿ ಅತ್ಯಂತ ಹೀನಾಯ ಪರ್ಫಾಮೆನ್ಸ್​ ನೀಡಿರೋ ಚೆನ್ನೈ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದೆ. ಮೊದಲ ತಂಡವಾಗಿ ಸೀಸನ್​ನಿಂದ ಔಟ್​ ಆಗಿರೋ ಚೆನ್ನೈಗೆ ಈಗ ಕಳೆದುಕೊಳ್ಳೋದು ಏನೂ ಇಲ್ಲ. ಆರ್​​ಸಿಬಿಗೆ ಡ್ಯಾಮೇಜ್​ ಮಾಡೋ ಅವಕಾಶವಿದೆ. ಕಳೆದ ಸೀಸನ್​​ ಐಪಿಎಲ್​ನಲ್ಲಿ ಆರ್​​ಸಿಬಿ-ಸಿಎಸ್​ಕೆ ಇದೇ ಚಿನ್ನಸ್ವಾಮಿ ಮೈದಾನದಲ್ಲಿ ಮೇ 18ರಂದು ಮುಖಾಮುಖಿಯಾಗಿದ್ವು. ಪ್ಲೇ ಆಫ್​ ಎಂಟ್ರಿಗೆ ಉಭಯ ತಂಡಗಳು ಗೆಲ್ಲಲೇಬೇಕಾದ ಪಂದ್ಯ ಅದು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ್ದ ಆರ್​​ಸಿಬಿ ಆರ್​​ಸಿಬಿ 218 ರನ್​ಗಳ ಬಿಗ್​ ಸ್ಕೋರ್​ ಕಲೆ ಹಾಕಿತ್ತು. ಈ ಟಾರ್ಗೆಟ್​ ಬೆನ್ನತ್ತಿದ ಸಿಎಸ್​ಕೆ 27 ರನ್​ ಅಂತರದಲ್ಲಿ ಸೋಲುಂಡಿತ್ತು. ಚೆನ್ನೈ ತಂಡವನ್ನ ಹೊರಗಾಕಿ ಪ್ಲೇ ಆಫ್​ಗೆ ರಾಯಲ್​ ಎಂಟ್ರಿ ಕೊಟ್ಟಿತ್ತು.

ಇದನ್ನೂ ಓದಿ: ಹೈದ್ರಾಬಾದ್​ ಪ್ಲೇ ಆಫ್​ ಕನಸು ಭಗ್ನ..? ಬೃಹತ್ ಟಾರ್ಗೆಟ್​ ನೀಡಿದ್ದ ಗಿಲ್ ಪಡೆಗೆ ಗೆಲುವು

publive-image

ಆರ್​​ಸಿಬಿ ಅಭಿಮಾನಿಗಳಂತೂ ಯುದ್ಧ ಗೆದ್ದಂತೆ ಅಂದು ಸಂಭ್ರಮಿಸಿದ್ರು. RCBಯ ಗೆಲುವು, ಆಟಗಾರರ ಸಂಭ್ರಮ, ಅಭಿಮಾನಿಗಳ ಸೆಲಬ್ರೇಷನ್ ಈ​​ ಎಲ್ಲವೂ ಇಂದು ಸಿಎಸ್​ಕೆ ಪಾಳಯದಲ್ಲಿ ಕಿಚ್ಚು ಹತ್ತಿಸಿದೆ. ಅಂದಾದ ಅವಮಾನಕ್ಕೆ ಇಂದು ಸೇಡು ತೀರಿಸಿಕೊಳ್ಳೋ ಲೆಕ್ಕಾಚಾರ ಚೆನ್ನೈ ಕ್ಯಾಂಪ್​ನಲ್ಲಿದೆ.

ಹೈವೋಲ್ಟೆಜ್​ ಕದನಕ್ಕೆ ಕಾಡ್ತಿದೆ ಮಳೆ ಭೀತಿ

ಕಳೆದ ಕೆಲ ದಿನಗಳಿಂದ ಬೆಂಗಳೂರಿನಲ್ಲಿ ಮಳೆಯ ಕಾಟ ಜೋರಾಗಿದೆ. ನಿನ್ನೆಯಂತೂ ಸಿಡಿಲು-ಗುಡುಗು ಸಹಿತ ಭಾರೀ ಮಳೆಯಾಗಿದೆ. ಇಂದೂ ಕೂಡ ಮಳೆಯ ಸುರಿಯೋ ಸಾಧ್ಯತೆಯಿದ್ದು, ಹೈವೋಲ್ಟೆಜ್​ ಕದನದ ಮೇಲೆ ಕಾರ್ಮೋಡ ಆವರಿಸಿದೆ. ಒಂದೆಡೆ ಚೆನ್ನೈ ಸೇಡು ತೀರಿಸಿಕೊಳ್ಳೋ ತವಕದಲ್ಲಿದ್ರೆ, ಆರ್​ಸಿಬಿ ಪ್ಲೇ ಆಫ್​​ಗೆ ಎಂಟ್ರಿಕೊಡೋಕೆ ತುದಿಗಾಲಲ್ಲಿ ನಿಂತಿದೆ. ಅಭಿಮಾನಿಗಳ ವಲಯದಲ್ಲಂತೂ ಪಂದ್ಯದ ಮೇಲೆ ಕ್ರೇಜ್​ ಹೆಚ್ಚಾಗಿದೆ. ಒಂದು ರಣರೋಚಕ ಪಂದ್ಯದ ನಿರೀಕ್ಷೆ ಕ್ರಿಕೆಟ್​ ಲೋಕದಲ್ಲಿದೆ.

ಇದನ್ನೂ ಓದಿ: ಪ್ರಸಿದ್ಧ ಕೃಷ್ಣ ಅದ್ಭುತ ಸ್ಪೆಲ್.. ಗೆಲುವಿನೊಂದಿಗೆ SRH ಮನೆಗೆ ಕಳುಹಿಸಿದ ಗಿಲ್ ಪಡೆ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment