/newsfirstlive-kannada/media/post_attachments/wp-content/uploads/2025/03/MAXI-PRASIDD.jpg)
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮತ್ತೊಂದು ಮೆಗಾ ಬ್ಯಾಟಲ್ಗೆ ವೇದಿಕೆ ಸಜ್ಜಾಗಿದೆ. ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗುಜರಾತ್ ಟೈಟನ್ಸ್ - ಪಂಜಾಬ್ ಕಿಂಗ್ಸ್ ತಂಡಗಳು ತೊಡೆ ತಟ್ಟಲು ಸಜ್ಜಾಗಿವೆ. ಈ ಹಿಂದಿನದ್ದೇ ಒಂದು ಲೆಕ್ಕ.. ಈ ಸೀಸನ್ನಿಂದಲೇ ಒಂದು ಲೆಕ್ಕಾ.. ಅಂತಾ ಅಖಾಡಕ್ಕಿಳಿಯಲು ಉಭಯ ತಂಡಗಳು ರೆಡಿಯಾಗಿವೆ.
17 ವರ್ಷಗಳ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡದಲ್ಲಿ ಎಲ್ಲಾ ಬದಲಾಯ್ತು. ಆಟಗಾರರು, ಕ್ಯಾಪ್ಟನ್, ಕೋಚ್ ಅಷ್ಟೇ ಏಕೆ ಅದೃಷ್ಟ ಬದಲಾಗುತ್ತೆ ಅಂತಾ ತಂಡದ ಹೆಸರು ಬದಲಾಗಿದ್ದಿದೆ. ಹಣೆಬರಹಕ್ಕೆ ಹೊಣೆ ಯಾರು? ಎಂಬಂತೆ ಕಪ್ ಗೆಲ್ಲೋಕಾಗಿಲ್ಲ. 2014ರಲ್ಲಿ ರನ್ನರ್ಅಪ್ ಆಗಿದ್ದೇ ದೊಡ್ಡ ಸಾಧನೆ. ಕಳೆದ 4 ಸೀಸನ್ಗಳಿಂದಂತೂ ಟಾಪ್ 5 ಒಳಗೂ ಪಂಜಾಬ್ ಎಂಟ್ರಿ ಕೊಟ್ಟಿಲ್ಲ.
ಹೊಸ ಕೋಚ್, ಹೊಸ ನಾಯಕ, ಪಂಜಾಬ್ಗೆ ಪವರ್
ಸೀಸನ್ 18ರಲ್ಲಿ ಪಂಜಾಬ್ ತಂಡದಲ್ಲಿ ಪಂಟರ್ಸ್ ಸಮಾಗಮವಾಗಿದೆ. ಕೋಚ್ ಆಗಿ ರಿಕಿ ಪಾಂಟಿಂಗ್ ಎಂಟ್ರಿ ಕೊಟ್ಟಿದ್ರೆ, ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ತಂಡದ ಚುಕ್ಕಾಣಿ ಹಿಡಿದಿದ್ದಾರೆ. ಡೆಲ್ಲಿ ಫ್ರಾಂಚೈಸಿಯನ್ನ ಮೊಟ್ಟ ಮೊದಲ ಬಾರಿಗೆ ಫೈನಲ್ಗೇರಿಸಿದ ಹಿರಿಮೆ ಈ ಜೋಡಿಯದ್ದು. ಶ್ರೇಯಸ್ ಕಳೆದ ಬಾರಿ ಕೆಕೆಆರ್ನ ಚಾಂಪಿಯನ್ ಕೂಡ ಮಾಡಿದ್ದಾರೆ. ಹೀಗಾಗಿ ಈ ಜೋಡಿಯ ಮೇಲೆ ನಿರೀಕ್ಷೆ ಬೆಟ್ಟದಷ್ಟಿದೆ.
ಇದನ್ನೂ ಓದಿ: ತಂಡವನ್ನು ಗೆಲ್ಲಿಸಿಕೊಟ್ಟು ಧೋನಿ ಅಭಿಮಾನಿಗಳಿಂದ ಅವಮಾನಕ್ಕೆ ಒಳಗಾದ ರಚಿನ್ ರವೀಂದ್ರ..!
ಫೈರಿ ಬ್ಯಾಟರ್ಸ್!
ಈ ಬಾರಿಯ ಮೆಗಾ ಆಕ್ಷನ್ನಲ್ಲಿ ಪಂಜಾಬ್ ಕಿಂಗ್ಸ್ ಬಲಿಷ್ಟ ತಂಡವನ್ನೇ ಕಟ್ಟಿದೆ. ಸ್ಪೋಟಕ ಬ್ಯಾಟಿಂಗ್ ನಡೆಸಬಲ್ಲ ಬ್ಯಾಟರ್ಸ್ ದಂಡಿಂದೆ. ಮ್ಯಾಚ್ ವಿನ್ನಿಂಗ್ ಆಲ್ರೌಂಡರ್ಸ್ ಇದ್ದಾರೆ. ಸ್ಪಿನ್ ಹಾಗೂ ಪೇಸ್ ಎರಡೂ ವಿಭಾಗವೂ ಬಲಿಷ್ಟವಾಗಿದೆ. ಸ್ಟಾರ್ಗಳನ್ನೆ ಒಳಗೊಂಡ ಪ್ರಬಲ ಪ್ಲೇಯಿಂಗ್ ಇಲೆವೆನ್ ಆಯ್ಕೆಯೂ ಏನು ಕಷ್ಟದ ವಿಚಾರವೇನಲ್ಲ..
ಪಂಜಾಬ್ ಸಂಭಾವ್ಯ ಪ್ಲೇಯಿಂಗ್-XI
ಪ್ರಭ್ಸಿಮ್ರನ್, ಜೋಸ್ ಇಂಗ್ಲೀಸ್, ಶ್ರೇಯಸ್ ಅಯ್ಯರ್, ಮಾರ್ಕಸ್ ಸ್ಟೋಯ್ನಿಸ್, ಗ್ಲೇನ್ ಮ್ಯಾಕ್ಸ್ವೆಲ್, ಶಶಾಂಕ್ ಸಿಂಗ್, ನೆಹಾಲ್ ವಡೇರಾ, ಮಾರ್ಕೋ ಯಾನ್ಸೆನ್, ಹರ್ಪ್ರಿತ್ ಬ್ರಾರ್, ಆರ್ಷ್ದೀಪ್ ಸಿಂಗ್, ಯುಜುವೇಂದ್ರ ಚಹಲ್
ಪ್ರಭ್ ಸಿಮ್ರನ್ ಸಿಂಗ್, ಜೋಶ್ ಇಂಗ್ಲಿಸ್ ಓಪನ್ ಮಾಡೋ ಸಾಧ್ಯತೆಯಿದೆ. 3ನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಆಡೋದು ಕನ್ಫರ್ಮ್. ಬಳಿಕ ಮಾರ್ಕಸ್ ಸ್ಟೋಯ್ನಿಸ್, ಗ್ಲೇನ್ ಮ್ಯಾಕ್ಸ್ವೆಲ್, ಶಶಾಂಕ್ ಸಿಂಗ್, ನೆಹಾಲ್ ವಡೇರಾ ಕಣಕ್ಕಿಳಿಯಲಿದ್ದಾರೆ. ವೇಗಿಗಳಾಗಿ ಮಾರ್ಕೋ ಯಾನ್ಸೆನ್, ಆರ್ಷ್ದೀಪ್ ಸಿಂಗ್ ಆಡಲಿದ್ದು, ಸ್ಪೆಷಲಿಸ್ಟ್ ಸ್ಪಿನ್ನರ್ ಆಗಿ ಯುಜುವೇಂದ್ರ ಚಹಲ್ ಕಣಕ್ಕಿಳಿಯಲಿದ್ದಾರೆ.
ಸ್ಪಷ್ಟ, ಬಲಿಷ್ಟ..
ಪಂಜಾಬ್ ಕಿಂಗ್ಸ್ದು ಒಂದು ಕಥೆಯಾದ್ರೆ ಗುಜರಾತ್ ಟೈಟನ್ಸ್ದ್ದು ಇನ್ನೊಂದು ಕಥೆ. ಮೊದಲ ಸೀಸನ್ನಲ್ಲೇ ಚಾಂಪಿಯನ್ ಆದ ಗುಜರಾತ್, 2ನೇ ಸೀಸನ್ನಲ್ಲಿ ರನ್ನರ್ ಅಪ್ ಆಯ್ತು. ಕಳೆದ ಸೀಸನ್ನಲ್ಲಿ ಗಿಲ್ ನಾಯಕತ್ವದಲ್ಲಿ ಫ್ಲಾಪ್ ಶೋ ನೀಡಿ, 8ನೇ ಸ್ಥಾನಕ್ಕೆ ಕುಸಿದು ಬಿಡ್ತು. ಈ ಸೀಸನ್ನಲ್ಲಿ ಟೈಟನ್ಸ್ನ ಕಡೆಗಣಿಸುವಂತೆ ಇಲ್ಲ.
ಇದನ್ನೂ ಓದಿ: ರಿಷಬ್ ಪಂತ್ಗೂ ಗೊಯೆಂಕಾ ಎಚ್ಚರಿಕೆ; KL ರಾಹುಲ್ ಘಟನೆ ನೆನಪಿಸಿದ ಫ್ಯಾನ್ಸ್..! Video
ಮೆಗಾ ಆಕ್ಷನ್ನಲ್ಲಿ ಗುಜರಾತ್ ಟೈಟನ್ಸ್ ಕೂಡ ಬಲಿಷ್ಟ ತಂಡವನ್ನೇ ಕಟ್ಟಿದೆ. ಕ್ವಾಲಿಟಿ ಆಟಗಾರರ ಆಗಮನ ಟೈಟನ್ಸ್ ಬಲವನ್ನ ಹೆಚ್ಚಿಸಿದೆ. ಗಿಲ್ ಕೂಡ ಈಗ ಅನಾನುಭವಿ ನಾಯಕನಲ್ಲ. ಅದ್ರಲ್ಲೂ ಪಂಜಾಬ್ ಎದುರಿನ ಇಂದಿನ ಪಂದ್ಯಕ್ಕಂತೂ ಪ್ರಬಲ ಪಡೆಯನ್ನೇ ಗುಜರಾತ್ ಫೀಲ್ಡ್ಗಿಳಿಸಲಿದೆ.
ಗುಜರಾತ್ ಸಂಭಾವ್ಯ ಪ್ಲೇಯಿಂಗ್-XI
ಗಿಲ್, ಬಟ್ಲರ್, ಸಾಯಿ ಸುದರ್ಶನ್, ಗ್ಲೆನ್ ಫಿಲಿಪ್ಸ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ಸುಂದರ್, ರಶೀದ್ ಖಾನ್, ಕಗಿಸೋ ರಬಾಡ, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್.
ಒಟ್ಟಿನಲ್ಲಿ ಅಹ್ಮದಾಬಾದ್ ಬ್ಯಾಟಲ್ಫೀಲ್ಡ್ನಲ್ಲಿ ನಡೆಯೋ ಇಂದಿನ ಯುದ್ಧದಲ್ಲಿ ಸಮಬಲ ಹೊಂದಿರೋ ಎರಡೂ ತಂಡಗಳು ಗೆಲುವಿನ ಫೆವರಿಟ್ಗಳಾಗಿ ಕಣಕ್ಕಿಳಿತಿವೆ. ಕನ್ನಡಿಗ ಪ್ರಸಿದ್ಧ ಕೃಷ್ಣ ಮೇಲೆ ಗಿಲ್ ಭರವಸೆ ಇಟ್ಟಿದ್ದಾರೆ.
ಇದನ್ನೂ ಓದಿ: ವಿಘ್ನೇಶ್ ಪುತೂರು ಇಂಪ್ಯಾಕ್ಟ್ ಡೆಬ್ಯು ಹಿಂದಿನ ಅಸಲಿ ಕಾರಣ ರಿವೀಲ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್