/newsfirstlive-kannada/media/post_attachments/wp-content/uploads/2024/05/KAVYA-MARAN-2.jpg)
ಐಪಿಎಲ್​ ಸೀಸನ್​ - 17ರ ಮೊದಲ ಕ್ವಾಲಿಫೈಯರ್​ ಫೈಟ್​ಗೆ ವೇದಿಕೆ ಸಜ್ಜಾಗಿದೆ. ನಮೋ ಮೈದಾನದಲ್ಲಿ ಇಂದು ನಡೆಯೋ ಪಂದ್ಯದಲ್ಲಿ ಯಾರಿಗೆ ಫೈನಲ್​ ಟಿಕೆಟ್​​? ಅನ್ನೋದು ನಿರ್ಧಾರವಾಗಲಿದೆ. ಬಿಗ್ ಹಿಟ್ಟರ್​ಗಳ ಈ ಬಿಗ್​​​​​​​​​​​​​​​​ ಬ್ಯಾಟಲ್​ನಲ್ಲಿ ಯಾರ್​ ಗೆಲ್ತಾರೆ ಎಂಬ ಕ್ಯೂರಿಯಾಸಿಟಿ ಅಭಿಮಾನಿಗಳಲ್ಲಿ ಹುಟ್ಟಿಹಾಕಿದೆ.
ಐಪಿಎಲ್​ ಸೀಸನ್​ 17ರ ಲೀಗ್​ ಫೈಟ್​ಗಳು ಅಂತ್ಯಕಂಡಿವೆ. 6 ತಂಡಗಳು ಹೊರ ಬಿದ್ದಿದ್ದು, 4 ತಂಡಗಳು ಟ್ರೋಫಿ ಗೆಲ್ಲೋ ರೇಸ್​​ನಲ್ಲಿ ಉಳಿದಿವೆ. 4 ತಂಡಗಳ ಹಣೆಬರಹ ಉಳಿದ 4 ಪಂದ್ಯಗಳಲ್ಲಿ ನಿರ್ಧಾರವಾಗಲಿದೆ. ಆದ್ರೆ, ಈ ನಡುವೆ ಎಲ್ಲರ ಚಿತ್ತ ಮಾತ್ರ ಕೊಲ್ಕತ್ತಾ ನೈಟ್ ರೈಡರ್ಸ್​ ವರ್ಸಸ್​ ಸನ್ ರೈಸರ್ಸ್ ಹೈದ್ರಾಬಾದ್​ ನಡುವಿನ ಮ್ಯಾಚ್ ಮೇಲೆ ನೆಟ್ಟಿದೆ.
ಇದನ್ನೂ ಓದಿ:ಗೆದ್ದೆತ್ತಿನ ಬಾಲ ಹಿಡಿಯೋದು ಅಂದ್ರೆ ಹೀಗೆಯೇ ಅಂತೆ.. ಸಖತ್ ವೈರಲ್ ಆಗ್ತಿದ್ದಾರೆ CSK ಈ ಅಭಿಮಾನಿಗಳು..!
/newsfirstlive-kannada/media/post_attachments/wp-content/uploads/2024/05/KKR-vs-SRH.jpg)
ಮೊದಲ ಕ್ವಾಲಿಫೈಯರ್​ ಪಂದ್ಯಕ್ಕೆ ನಮೋ ಸ್ಟೇಡಿಯಂ ವೇದಿಕೆಯಾಗಿದೆ. ಈ ಹೈವೋಲ್ಟೇಜ್​ ಮ್ಯಾಚ್​ ಗೆಲ್ಲೋಕೆ ಉಭಯ ತಂಡಗಳು ಹಠಕ್ಕೆ ಬಿದ್ದಿದೆ. ಈ ನಿಟ್ಟಿನಲ್ಲೇ ಗೇಮ್​​ಪ್ಲಾನ್ಸ್​, ಸ್ಟ್ರಾಟರ್ಜಿಗಳನ್ನೇ ರೂಪಿಸುತ್ತಿರುವ ಟೀಮ್ಸ್​, ಎದುರಾಳಿಗಳ ವಿಕ್ನೇಸ್ ಮೇಲೂ ವರ್ಕೌಟ್ ಮಾಡಿ, ರನ್​ಭೂಮಿಯಲ್ಲಿ ರನ್​ಕೊಳ್ಳೆ ಹೊಡೆಯೋಕೆ ಸಜ್ಜಾಗಿವೆ.
ನಮೋ ಸ್ಟೇಡಿಯಂನಲ್ಲಿ ಬೌಂಡರಿ-ಸಿಕ್ಸರ್​ಗಳ ಚಿತ್ತಾರ ಫಿಕ್ಸ್
ಕ್ವಾಲಿಫೈಯರ್ ಮ್ಯಾಚ್ ನಡೀತಿರುವುದು ಕೆಕೆಆರ್​ ಹಾಗೂ ಸನ್ ರೈಸರ್ಸ್ ನಡುವೆಯಾದ್ರು. ಇಂದಿನ ಸೆಂಟರ್ ಆಫ್ ಅಟ್ರಾಕ್ಷನ್ ಮಾತ್ರ. ಪವರ್​​ ಹಿಟ್ಟರ್​​ ಬ್ಯಾಟರ್​ಗಳೇ ಆಗಿದ್ದಾರೆ. ಸುನೀಲ್ ನರೈನ್, ಆ್ಯಂಡ್ರೆ ರಸೆಲ್, ರಿಂಕು ಸಿಂಗ್​ರಂಥಹ ಪವರ್ ಹಿಟ್ಟರ್​ಗಳನ್ನ ಕೆಕೆಆರ್​ ಹೊಂದಿದ್ರೆ. ಟ್ರಾವಿಸ್ ಹೆಡ್, ಅಭಿಶೇಕ್ ಶರ್ಮಾ, ಹೆನ್ರಿಚ್ ಕ್ಲಾಸೆನ್​, ಅಬ್ದುಲ್ ಸಮದ್​ರಂಥ ಹಾರ್ಡ್​ ಹಿಟ್ಟರ್ಸ್ ಸನ್ ರೈಸರ್ಸ್ ಬಲವಾಗಿದ್ದಾರೆ. ಹೀಗಾಗಿ ಇಂದಿನ ಬ್ಯಾಟಲ್​ ಬಿಗ್​ ಹಿಟ್ಟರ್​ಗಳ ಬ್ಯಾಟಲ್ ಆಗಿದೆ.
ಇದನ್ನೂ ಓದಿ:ನಾಳೆ ಆರ್​ಸಿಬಿ ಪಂದ್ಯ.. ಇವತ್ತು ಫೈನಲ್​​ಗೆ ಹೋಗೋದು ಯಾರು..?
/newsfirstlive-kannada/media/post_attachments/wp-content/uploads/2024/05/KKR-vs-SRH-1.jpg)
4 ವರ್ಷಗಳ ಬಳಿಕ ಪ್ಲೇ-ಆಫ್​​ಗೆ ಸನ್ ರೈಸರ್ಸ್..!
2016ರ ಬಳಿಕ ಕಪ್​ ಗೆಲ್ಲೋಕೆ ವಿಫಲವಾಗಿರುವ ಸನ್ ರೈಸರ್ಸ್, 2020ರ ನಂತರ ಮೊದಲ ಬಾರಿಗೆ ಪ್ಲೇಆಪ್​ಗೆ ಎಂಟ್ರಿ ನೀಡಿದೆ. ಇದರೊಂದಿಗೆ 4 ವರ್ಷಗಳ ಬಳಿಕ ಕಪ್ ಗೆಲ್ಲುವ ಕನಸು ಕಾಣ್ತಿದೆ. ಈ ಕನಸು ನನಸಾಗಿಸಲು ಪ್ಯಾಟ್ ಕಮಿನ್ಸ್​ ನಾಯಕತ್ವದಲ್ಲಿ ಡೇಂಜರಸ್ ಆಟವಾಡ್ತಿರುವ ಸನ್ ರೈಸರ್ಸ್, ಇಂದೇ ಗೆದ್ದು ಫೈನಲ್​ಗೆ ಎಂಟ್ರಿ ನೀಡುವ ತವಕದಲ್ಲಿದೆ.
ಗೆಲುವಿನ ಆತ್ಮವಿಶ್ವಾಸದಲ್ಲಿ ನೈಟ್ ರೈಡರ್ಸ್​..!
ಸನ್ ರೈಸರ್ಸ್ ಹೈದ್ರಾಬಾದ್ ಮಾತ್ರವೇ ಅಲ್ಲ. ಕೊಲ್ಕತ್ತಾ ನೈಟ್ ರೈಡರ್ಸ್ ಕೂಡ ಮೋಸ್ಟ್ ಡೇಂಜಸರ್ ತಂಡವೆಂಬ ಹಣೆಪಟ್ಟಿ ಹೊತ್ತಿದೆ. ಬಿಗ್ ಹಿಟ್ಟರ್​ ಬ್ಯಾಟರ್​ಗಳ ನಡುವೆ ಸಂಕಷ್ಟದಲ್ಲಿ ಕೈಹಿಡಿಯುವ ಬ್ಯಾಟರ್​ಗಳು ಕೆಕೆಆರ್​ ತಂಡದ ಬಲವಾಗಿದ್ದಾರೆ. ಹೊಂಚು ಹಾಕಿ ಎದುರಾಳಿ ಟಕ್ಕರ್ ನೀಡುವ ಕಲೆಗಾರಿಕೆ ಹೊಂದಿರುವ ಕೊಲ್ಕತ್ತಾ, ಸನ್ ರೈಸರ್ಸ್ ಮೇಲೆ ರೇಡ್​ ಮಾಡೋದ್ರಲ್ಲಿ ನಿಸ್ಸೀಮ.
/newsfirstlive-kannada/media/post_attachments/wp-content/uploads/2024/04/SRH_ABHISHEK.jpg)
2021ರ ಬಳಿಕ ಪ್ಲೇ-ಆಫ್​ಗೆ ಎಂಟ್ರಿ ನೀಡಿರುವ ಶಾರೂಖ್ ಹುಡುಗರು, 2014ರ ಬಳಿಕ ಟ್ರೋಫಿ ಗೆಲ್ಲೋ ಕನಸು ಕಾಣ್ತಿದ್ದಾರೆ. ಅಷ್ಟೇ ಅಲ್ಲ. ಗಂಭೀರ್ ಮಾರ್ಗದರ್ಶನದಲ್ಲಿ ಗೆದ್ದೆ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಹೀಗಾಗಿ ಕ್ವಾಲಿಫೈಯರ್​​ ಪಂದ್ಯದಲ್ಲಿ ಯಾರು ಫೈನಲ್​ಗೆ ಕ್ವಾಲಿಫೈ ಆಗ್ತಾರೆ ಅನ್ನೋ ಕುತೂಹಲ ಹುಟ್ಟುಹಾಕಿದೆ.
ಇದನ್ನೂ ಓದಿ:ಬೆಂಗಳೂರು ವಾಹನ ಸವಾರರೇ ಎಚ್ಚರ ಎಚ್ಚರ.. ಇಲ್ಲಿ 7 ನಿಮಿಷಕ್ಕೆ 150 ಶುಲ್ಕ ಕಟ್ಟಬೇಕಾಗುತ್ತೆ..!
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us