/newsfirstlive-kannada/media/post_attachments/wp-content/uploads/2025/04/RAJAT-VS-HARDIK.jpg)
ಆರ್ಸಿಬಿ vs ಮುಂಬೈ ವಾಂಖೆಡೆ ವಾರ್ಗೆ ಕೌಂಟ್ಡೌನ್ ಶುರುವಾಗಿದೆ. ಸತತ ಸೋಲಿನಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ ಗೆಲುವಿನ ಹಳಿಗೆ ಮರಳುವ ಕನಸು ಕಾಣ್ತಿದೆ. ಗುಜರಾತ್ ಎದುರು ಮುಗ್ಗರಿಸಿರೋ ಆರ್ಸಿಬಿ, ಕಮ್ಬ್ಯಾಕ್ ನಿರೀಕ್ಷೆಯಲ್ಲಿದೆ.
ಕೊಹ್ಲಿ vs ರೋಹಿತ್ ಬ್ಯಾಟಲ್
ಇವತ್ತಿನ ಸೆಂಟರ್ ಆಫ್ ಅಟ್ರಾಕ್ಷನ್ ಕಿಂಗ್ ಕೊಹ್ಲಿ ಹಾಗೂ ಹಿಟ್ಮ್ಯಾನ್ ರೋಹಿತ್. ಆರ್ಸಿಬಿ ವರ್ಸಸ್ ಮುಂಬೈ ಬ್ಯಾಟಲ್ಗಿಂತ ಮುಂಬೈ ಕಾ ರಾಜ ರೋಹಿತ್ ಹಾಗೂ ಕಿಂಗ್ ಕೊಹ್ಲಿಯ ವಾರ್ ಎಂದೇ ಇಂದಿನ ಪಂದ್ಯ ಬಿಂಬಿತವಾಗ್ತಿದೆ. ಈ ಮೈದಾನದಲ್ಲಿ ಸಾಲಿಡ್ ರೆಕಾರ್ಡ್ಸ್ ಹೊಂದಿರುವ ಇವರಿಬ್ಬರಿಂದ ರನ್ ಭರಾಟೆ ನಿರೀಕ್ಷಿಸಲಾಗಿದೆ. ಇವರಿಬ್ಬರ ರನ್ವಾರ್ನಲ್ಲಿ ಗೆಲ್ಲೋದ್ಯಾರು ಅನ್ನೋ ಕ್ಯೂರಿಯಾಸಿಟಿ ಅಭಿಮಾನಿಗಳಲ್ಲಿ ಮನೆ ಮಾಡಿದೆ.
ಇದನ್ನೂ ಓದಿ: ಹೈದ್ರಾಬಾದ್ಗೆ ಬಿಸಿ ಮುಟ್ಟಿಸಿದ ಶುಭ್ಮನ್ ಗಿಲ್, ಸುಂದರ್.. ಕೇವಲ 1 ರನ್ನಿಂದ ಅರ್ಧಶತಕ ಮಿಸ್
ಆರ್ಸಿಬಿ ಬಿಗ್ ಸ್ಕೋರ್
ಆರ್ಸಿಬಿ ಗೆಲುವಿನ ಟ್ರ್ಯಾಕ್ಗೆ ಮರಳಬೇಕಾದ್ರೆ ಆರ್ಸಿಬಿ ಬ್ಯಾಟರ್ಗಳ ರೋಲ್ ಮೋಸ್ಟ್ ಕ್ರೂಶಿಯಲ್. ಕಳೆದ ಪಂದ್ಯದಲ್ಲಿ ಬ್ಯಾಟರ್ಗಳ ವೈಫಲ್ಯವೇ ಆರ್ಸಿಬಿಗೆ ಮುಳ್ಳಾಗಿತ್ತು. ಹೀಗಾಗಿ ಇವತ್ತಿನ ಪಂದ್ಯದಲ್ಲಿ ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ ಒಳ್ಳೆ ಸ್ಟಾರ್ಟ್ ನೀಡಬೇಕಿದೆ. ರಜತ್ ಪಟಿದಾರ್, ದೇವದತ್ ಪಡಿಕ್ಕಲ್, ಲಿಯಾಮ್ ಲಿವಿಂಗ್ ಸ್ಟೋನ್, ಜಿತೇಶ್ ಶರ್ಮಾ ಹಾಗೂ ಟಿಮ್ ಡೇವಿಡ್ರಿಂದ ಬಿಗ್ ಸ್ಕೋರ್ ಬರಬೇಕಿದೆ.
ಜೋಶ್, ಭುವಿ ಮೇಲೆ ಕಣ್ಣು
ವಾಂಖೆಡೆಯಲ್ಲಿ ಮ್ಯಾಚ್ ವಿನ್ನರ್ಸ್ ಆಗೋದೇ ಪೇಸರ್ಸ್. ಇಲ್ಲಿ ನಡೆದ 119 ಪಂದ್ಯಗಳಲ್ಲಿ 725 ವಿಕೆಟ್ಸ್ ವೇಗಿಗಳ ಪಾಲಾಗಿದ್ರೆ 310 ವಿಕೆಟ್ಸ್ ಸ್ಪಿನ್ನರ್ಸ್ ಬೇಟೆಯಾಗಿದ್ದಾರೆ. ಇವತ್ತು ಆರ್ಸಿಬಿ ಗೆಲುವಿನ ದಡ ಸೇರಬೇಕಾದ್ರೆ ಆಸಿಸ್ ಸ್ಪೀಡ್ ಗನ್ ಜೋಶ್ ಹೇಜಲವುಡ್ ಸ್ವಿಂಗ್ ಮಾಸ್ಟರ್ ಭುವನೇಶ್ವರ್, ಹಾಗೂ ಯಶ್ ದಯಾಳ್ ಅಟ್ಯಾಕಿಂಗ್ ಸ್ಪೆಲ್ಸ್ ಹಾಕಬೇಕಿದೆ ಅಂತಾ ಇತಿಹಾಸವೇ ಹೇಳ್ತಿದೆ.
ಇದನ್ನೂ ಓದಿ: ಹೈದ್ರಾಬಾದ್ ಟೀಮ್ಗೆ ಸತತ 4ನೇ ಸೋಲು.. ಹ್ಯಾಟ್ರಿಕ್ ಗೆಲುವು ಸಂಭ್ರಮಿಸಿದ ಗಿಲ್
ಮುಂಬೈಗೆ ತವರಿನ ಬಲ..
4 ಪಂದ್ಯಗಳಲ್ಲಿ ಮೂರರಲ್ಲಿ ಸೋತಿರುವ ಮುಂಬೈ ಒಂದೇ ಒಂದು ಪಂದ್ಯ ಗೆದ್ದಿದೆ. ಇದೇ ವಾಂಖೆಡೆಯಲ್ಲಿ ಕೆಕೆಆರ್ ಎದುರು ಗೆದ್ದ ಹಾರ್ದಿಕ್ ಪಾಂಡ್ಯ ಪಡೆ, ತವರಿನಲ್ಲಿ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ರೋಹಿತ್ ಶರ್ಮಾ, ರಿಯಾನ್ ರಿಕಲ್ಟನ್, ವಿಲ್ ಜಾಕ್ಸ್ ವೈಫಲ್ಯದ ಸುಳಿಯಲ್ಲಿ ಸಿಲುಕಿದ್ದಾರೆ. ಇತ್ತ ಸೂರ್ಯ ಉತ್ತಮ ಪ್ರದರ್ಶನ ನೀಡುತ್ತಿದ್ರೂ, ಗೆಲುವಿನ ದಡ ಸೇರಿಸುವಲ್ಲಿ ವಿಫಲರಾಗ್ತಿದ್ದಾರೆ. ತಿಲಕ್ ವರ್ಮ ಪರದಾಟ ಬ್ಯಾಟಿಂಗ್ನಲ್ಲಿ ಹಾರ್ದಿಕ್ ಪಾಂಡ್ಯ ಇನ್ ಕನ್ಸಿಸ್ಟೆನ್ಸಿ ಮುಂಬೈಗೆ ಮಾರಕವಾಗಿದೆ.
ಜಸ್ಪ್ರೀತ್ ಬೂಮ್ರಾ ಬಲ
ಮುಂಬೈ ಇಂಡಿಯನ್ಸ್ ಬೌಲಿಂಗ್ ಸ್ಟ್ರಾಂಗ್ ಇದೆ. ಇದೀಗ ಆ ಬಲ ಮತ್ತಷ್ಟು ಹೆಚ್ಚಿಸಿದೆ. ಮ್ಯಾಚ್ ವಿನ್ನರ್ ವೇಗಿ ಜಸ್ಪ್ರಿತ್ ಬೂಮ್ರಾ ತಂಡವನ್ನ ಕೂಡಿಕೊಂಡಿದ್ದಾರೆ. ಟ್ರೆಂಟ್ ಬೋಲ್ಟ್, ಜಸ್ಪ್ರಿತ್ ಬೂಮ್ರಾ ಇಬ್ಬರೂ ಒಂದಾದ್ರೆ ಎದುರಾಳಿಗೆ ಸಂಕಷ್ಟ ಫಿಕ್ಸ್.
ಯಾರಿಗೆ ವಿಜಯದ ಮಾಲೆ..?
ಟೂರ್ನಿಯಲ್ಲಿ ನಿರೀಕ್ಷಿತ ಆರಂಭ ಪಡೆಯದ ಮುಂಬೈ ಇಂಡಿಯನ್ಸ್, ಇವತ್ತು ಶತಾಯ-ಗತಾಯ ಅಂತಾ ಗೆಲ್ಲೋಕೆ ಪಣ ತೊಟ್ಟಿದೆ. ಬ್ಯಾಕ್ ಟು ಬ್ಯಾಕ್ ಎರಡು ಗೆಲುವಿನ ಬಳಿಕ ಸೋಲುಂಡಿರುವ ಆರ್ಸಿಬಿ ಮತ್ತೆ ಗೆಲುವಿನ ಹಳಿಗೇರುವ ಲೆಕ್ಕಾಚಾರದಲ್ಲಿದೆ.
ಇದನ್ನೂ ಓದಿ: ಮುಂಬೈ ಇಂಡಿಯನ್ಸ್ ಕ್ಯಾಂಪ್ನಲ್ಲಿ ದೈತ್ಯ ಶಕ್ತಿ.. ಆರ್ಸಿಬಿಗೆ ಶುರುವಾಯ್ತು ಆತಂಕ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್