/newsfirstlive-kannada/media/post_attachments/wp-content/uploads/2025/04/VIRAT_KOHLI_BATTING-1.jpg)
ಆರ್ಸಿಬಿ ಅಭಿಮಾನಿಗಳಿಗೆ ಇಂದು ಮತ್ತೊಂದು ಮಸ್ತ್ ಎಂಟರ್ಟೈನ್ಮೆಂಟ್ ಸಿಗಲಿದೆ. ರಾಜಸ್ಥಾನ್ ರಾಯಲ್ಸ್ ಚಿನ್ನಸ್ವಾಮಿಗೆ ಬಂದು ಸವಾಲ್ ಹಾಕುತ್ತಿದೆ. ಇದುವರೆಗೂ ಚಿನ್ನಸ್ವಾಮಿಯಲ್ಲಿ ಗೆಲುವನ್ನೇ ಕಾಣದ ಆರ್ಸಿಬಿಗೆ ಆರ್ಆರ್ ವಿರುದ್ಧ ಗೆಲ್ಲೋದು ಕೂಡ ಟಫ್ ಚಾಲೆಂಜ್ ಆಗಿದೆ.
ಇಂದು ಸಂಜೆ 7.30ಕ್ಕೆ ಬೆಂಗಳೂರು ಮತ್ತು ರಾಜಸ್ಥಾನ್ ತಂಡಗಳು ಸೆಣಸಾಟ ನಡೆಸಲಿವೆ. ಎರಡೂ ತಂಡಗಳು ಪ್ಲೇ-ಆಫ್ ಕನಸು ಕಾಣುತ್ತಿದ್ದು, ಗೆಲುವು ಯಾರಿಗೆ ಸಿಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ. ಪ್ಲೇ-ಆಫ್ಗೆ ಹೋಗಬೇಕು ಅಂದ್ರೆ ಆರ್ಸಿಬಿ ಇವತ್ತಿನ ಪಂದ್ಯ ಗೆಲ್ಲಲೇಬೇಕಿದೆ. ಈಗಾಗಲೇ 8 ಪಂದ್ಯಗಳಲ್ಲಿ ಐದು ಗೆದ್ದಿರುವ ಆರ್ಸಿಬಿ, ಪಾಯಿಂಟ್ಸ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.
ಇನ್ನು ರಾಜಸ್ಥಾನ್ ರಾಯಲ್ಸ್, ಈ ಬಾರಿ ಸೋಲಿನ ಹಳಿಯಲ್ಲಿದೆ. 8 ಪಂದ್ಯಗಳಲ್ಲಿ ಗೆದ್ದಿರೋದು ಕೇವಲ ಎರಡೇ ಮ್ಯಾಚ್.
ಇದನ್ನೂ ಓದಿ:ಬ್ಯಾನ್ ಆಗಿದ್ದ ತಂಡದ ಮೇಲೆ ಮತ್ತೆ ಅನುಮಾನ.. ಫಿಕ್ಸಿಂಗ್ ಆರೋಪ ಸಿಡಿಸಿದ RCA ಅಧಿಕಾರಿ..!
ದರಲ್ಲಿ ಸೋತಿರುವ ರಾಜಸ್ಥಾನ್ ರಾಯಲ್ಸ್, ಪಾಯಿಂಟ್ಸ್ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಇನ್ನು, ರಾಜಸ್ಥಾನ್ ರಾಯಲ್ಸ್ಗೆ ನಾಯಕ ಸಂಜು ಸ್ಯಾಮ್ಸನ್ ಕೈಕೊಟ್ಟಿದ್ದಾರೆ. ಸ್ಯಾಮ್ಸನ್ ಅನುಪಸ್ಥಿತಿಯಲ್ಲಿ ರಿಯಾನ್ ಪರಾಗ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಈ ಮಧ್ಯೆ ರಾಜಸ್ಥಾನ್ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ ಕೂಡ ಕೇಳಿಬಂದಿದೆ. ಹೀಗಾಗಿ ಈ ಬಾರಿಯ ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದೆ.
ಚಿನ್ನಸ್ವಾಮಿಯಲ್ಲಿ ಮೂರು ಪಂದ್ಯಗಳಲ್ಲಿ ಸೋತಿರುವ ಆರ್ಸಿಬಿ ಮೇಲೆ ಫ್ಯಾನ್ಸ್ ಕೊಂಚ ಬೇಸರಗೊಂಡಿದ್ದಾರೆ. ತವರು ಮೈದಾನದಲ್ಲಿ ಸಂಪೂರ್ಣ ಬೆಂಬಲ ಸಿಕ್ಕರೂ, ಹೋಂ ಅಡ್ವಾಂಟೇಜ್ ಪಡೆದುಕೊಳ್ಳುವಲ್ಲಿ ಆಟಗಾರರು ಫೇಲ್ ಆಗ್ತಿದ್ದಾರೆ. ಕಠಿಣ ಪರಿಸ್ಥಿಯಲ್ಲೂ ಹೋರಾಡುವ ವಿರಾಟ್ ಕೊಹ್ಲಿ ಮೇಲೆ ಅಭಿಮಾನಿಗಳು ಭರವಸೆ ಇಟ್ಟಿದ್ದು, ಇಂದಾದರೂ ಗೆಲುವು ತಂದುಕೊಡ್ತಾರಾ ಕಾದು ನೋಡಬೇಕಿದೆ.
ಇದನ್ನೂ ಓದಿ: ಕಾಶ್ಮೀರದಲ್ಲಿ ಭಯೋತ್ಪಾದಕರ ಪೈಶಾಚಿಕ ಕೃತ್ಯಕ್ಕೆ ಕೊಹ್ಲಿ ಕಿಡಿ.. ಕನ್ನಡಿಗ KL ರಾಹುಲ್ ಏನಂದ್ರು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ