newsfirstkannada.com

ಆರ್​ಸಿಬಿಗೆ ಇವತ್ತು ಬಿಗ್​ ಡೇ.. ಪ್ಲೇಯಿಂಗ್-11ನಲ್ಲಿ ಆಗುತ್ತಾ ಭಾರೀ ಬದಲಾವಣೆ..?

Share :

Published May 4, 2024 at 6:43am

    ಇವತ್ತು ಗುಜರಾತ್ ಟೈಟನ್ಸ್​ ವಿರುದ್ಧ ಆರ್​ಸಿಬಿ ಸೆಣಸಾಟ

    ಪಾಯಿಂಟ್ಸ್​ ಟೇಬಲ್​​ನಲ್ಲಿ ಕೊನೆಯ ಸ್ಥಾನದಲ್ಲಿರುವ ಆರ್​ಸಿಬಿ

    ಪ್ಲೇ ಆಫ್ ಪ್ರವೇಶ ಮಾಡಬೇಕು ಎಂದರೆ ಇವತ್ತು ಗೆಲುವು ಅನಿವಾರ್ಯ

ಇಂದು ನಡೆಯಲಿರುವ 2024ರ ಇಂಡಿಯನ್​ ಪ್ರೀಮಿಯರ್​ಲೀಗ್​ನ 52ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಸಂಜೆ 7:30 ಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎರಡೂ ತಂಡಗಳು ಸೆಣಸಾಟ ನಡೆಸಲಿವೆ.

ಕಳೆದ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದು, ಆರ್​​ಸಿಬಿ ಭರ್ಜರಿ ಜಯ ಸಾಧಿಸಿತ್ತು. ಆರ್​ಸಿಬಿ ಈಗಾಗಲೇ ಹತ್ತು ಪಂದ್ಯಗಳನ್ನು ಆಡಿದ್ದು, ಮೂರು ಪಂದ್ಯಗಳಲ್ಲಿ ಮಾತ್ರ ಜಯ ಸಾಧಿಸಿದೆ. ಇನ್ನೂ ಗುಜರಾತ್​ ತಂಡ ಆಡಿರುವ ಹತ್ತು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆಲುವು ದಾಖಲಿಸಿದೆ. ಇದೀಗ ಎರಡೂ ತಂಡಗಳು ಗೆಲ್ಲಲೇಬೇಕೆಂಬ ಉತ್ಸಾಹದಲ್ಲಿವೆ.

ಇದನ್ನೂ ಓದಿ:ಕೋವಿಶೀಲ್ಡ್ ಪಡೆದ ಬೆನ್ನಲ್ಲೇ ಇಬ್ಬರು ಸಾವು ಆರೋಪ.. ಈ ಸಾವು ನ್ಯಾಯವೇ..?

ಆರ್​ಸಿಬಿ ತಂಡ: ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿಸ್ (ಕ್ಯಾಪ್ಟನ್), ವಿಲ್ ಜಾಕ್ಸ್, ರಜತ್ ಪಾಟಿದರ್, ಗ್ಲೆನ್ ಮ್ಯಾಕ್ಸ್​ವೆಲ್, ಕೆಮೆರೂನ್ ಗ್ರೀನ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್​), ಮಹಿಪಾಲ್ ಲೋಮ್ರರ್​, ಕರಣ ಶರ್ಮಾ, ಯಶ್ ದಯಾಲ್, ಮೊಹ್ಮದ್ ಸಿರಾಜ್ ಆಡುವ ಸಾಧ್ಯತೆ ಹೆಚ್ಚಿದೆ. ಇಂಪ್ಯಾಕ್ಟ್ ಪ್ಲೇಯರ್ ಆಗಿ ಸ್ವಪ್ನಿಲ್ ಸಿಂಗ್​ರನ್ನು ಆಡಿಸುವ ಸಾಧ್ಯತೆ ಇದೆ.

ಕಳೆದ ಎರಡೂ ಪಂದ್ಯಗಳನ್ನು ಸತತವಾಗಿ ಗೆದ್ದಿರೋದ್ರಿಂದ ಆರ್​ಸಿಬಿ ತಂಡದಲ್ಲಿ ಯಾವುದೇ ಬದಲಾವಣೆ ಮಾಡುವ ನಿರೀಕ್ಷೆಗಳಿಲ್ಲ. ಒಂದು ವೇಳೆ ಆಟಗಾರರ ಅನುಪಸ್ಥಿತಿ ಎದುರಾದರೆ ಮಾತ್ರ ಬದಲಾವಣೆ ಕಾಣಬಹುದು ಎಂದು ವರದಿಗಳು ಹೇಳಿವೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಆರ್​ಸಿಬಿಗೆ ಇವತ್ತು ಬಿಗ್​ ಡೇ.. ಪ್ಲೇಯಿಂಗ್-11ನಲ್ಲಿ ಆಗುತ್ತಾ ಭಾರೀ ಬದಲಾವಣೆ..?

https://newsfirstlive.com/wp-content/uploads/2024/04/RCB-Team.jpg

Load More