newsfirstkannada.com

RCBಯ ಕೊಹ್ಲಿ, ಗ್ಲೆನ್ ಮ್ಯಾಕ್ಸ್​ವೆಲ್, ಫಾಫ್ v/s ರಿಂಕು, ರಸೆಲ್, ರಾಣಾ.. ಗೆಲ್ಲೋದ್ಯಾರು?

Share :

Published March 29, 2024 at 3:01pm

    ಮದಗಜಗಳ ರನ್ ​ಫೆಸ್ಟ್​​ನಲ್ಲಿ ಬ್ಲಾಕ್ ಬಾಸ್ಟರ್​ ಹಿಟ್ ಯಾರಾಗ್ತಾರೆ?

    ಇಂದು ಸಂಜೆ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಹೈವೋಲ್ಟೇಜ್​ ಕದನ

    ಆರ್​ಸಿಬಿ, ಕೆಕೆಆರ್​ನ ಟ್ರಂಪ್ ಕಾರ್ಡ್ ಪ್ಲೇಯರ್ಸ್ ಯಾರು, ಯಾರು?

ಭಾರತೀಯ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಸಿದ ಪ್ಯಾನ್ ಇಂಡಿಯಾ ಸಿನಿಮಾಗಳು ಅಂದ್ರೆ, KGF & RRR. ಈ 2 ಸಿನಿಮಾಗಳು ಬಾಕ್ಸ್​ ಆಫೀಸ್​ ಕೊಳ್ಳೆ ಹೊಡೆದ್ವು. ಕ್ರಿಕೆಟ್​​ ಫೀಲ್ಡ್​ನಲ್ಲೂ ಅಷ್ಟೇ ಅಬ್ಬರಿಸೋ KGF & RRR ಜೋಡಿಗಳಿವೆ. ಇವತ್ತು ಚಿನ್ನಸ್ವಾಮಿ ವೇದಿಕೆಯಲ್ಲಿ ಮುಖಾಮುಖಿ ಆಗ್ತಿವೆ.

ಚಿನ್ನಸ್ವಾಮಿಯಲ್ಲಿ ಯಾರಿಗೆ ಬ್ಲಾಕ್​ ಬಾಸ್ಟರ್​ ಹಿಟ್​..?

ಚಿನ್ನಸ್ವಾಮಿಯಲ್ಲಿ ಪಂಜಾಬ್​ ಕಿಂಗ್ಸ್​ನಾ ಚಿಂದಿ ಉಡಾಯಿಸಿದ್ದು ಆಯ್ತು. ಈಗ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ನೆಕ್ಸ್ಟ್​ ಟಾರ್ಗೆಟ್​​, ಬಲಿಷ್ಠ ಕೊಲ್ಕತ್ತಾ ನೈಟ್​​ ರೈಡರ್ಸ್. ಇಂದು ಚಿನ್ನಸ್ವಾಮಿ ಮೈದಾನದಲ್ಲಿ ಕೆಕೆಆರ್​​ -ಆರ್​​ಸಿಬಿ ಮುಖಾಮುಖಿಯಾಗ್ತಿದ್ದು, ಹೈವೋಲ್ಟೇಜ್​ ಕದನಕ್ಕೆ ಫ್ಯಾನ್ಸ್​ ಸಜ್ಜಾಗಿದ್ದಾರೆ.

ಇಂದಿನ ಪಂದ್ಯ ಆರ್​ಸಿಬಿ v/s​ ಕೊಲ್ಕತ್ತಾ ಮ್ಯಾಚ್​ ಬದಲಾಗಿ. ಆರ್​ಸಿಬಿಯ ಕೆಜಿಎಫ್ v/s ಕೆಕೆಆರ್​ನ ತ್ರಿಬಲ್ ಆರ್​​​​​ ಮೆಗಾ ಫೈಟ್ ಆಗಿ​ ಮಾರ್ಪಟ್ಟಿದೆ. ಈ ಮದಗಜಗಳ ರನ್ ​ಫೆಸ್ಟ್​​ನಲ್ಲಿ ಯಾರು ಬ್ಲಾಕ್ ಬಾಸ್ಟರ್​ ಹಿಟ್​ ಹೊಡೀತಾರೆ ಅನ್ನೋದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಕೆಜಿಎಫ್ ತೂಫಾನ್​​ನಲ್ಲಿ ಕೊಚ್ಚಿ ಹೋಗುತ್ತಾ RRR..?

ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಬಲ ಕೆಜಿಎಫ್. ಕೆ ಫಾರ್ ಕೊಹ್ಲಿ, ಜಿ ಫಾರ್ ಗ್ಲೆನ್ ಮ್ಯಾಕ್ಸ್​ವೆಲ್, ಎಫ್ ಫಾರ್ ಫಾಫ್ ಡುಪ್ಲೆಸಿ. ಆರ್​ಸಿಬಿಯ ಟ್ರಂಪ್ ಕಾರ್ಡ್​ ಆಗಿರೋ ಇವರು ಸಿಡಿದ್ರೆ, ಕೆಕೆಆರ್​​​​ನ ತ್ರಿಬಲ್​​ ಆರ್ ಟೀಮ್​, ಕೆಜಿಎಫ್ ಎಂಬ ತೂಫಾನ್​ನಲ್ಲಿ​ ಕೊಚ್ಚಿ ಹೋಗೋದ್ರಲ್ಲಿ ಡೌಟೇ ಇಲ್ಲ. ಆದ್ರೆ, ಇದು ಸಾಧ್ಯವಾಗ ಬೇಕಾದ್ರೆ, ಕಳೆದ 2 ಪಂದ್ಯಗಳಲ್ಲಿ ಮಂಕಾಗಿದ್ದ ಕೆಜಿಎಫ್​ ಗ್ಯಾಂಗ್​​ನ ಫಾಫ್ ಡುಪ್ಲೆಸಿ,​ ಮೋಸ್ಟ್​ ಡೇಂಜರಸ್ ಮ್ಯಾಕ್ಸಿ, ಬ್ಯಾಟ್ ಎಂಬ ಮಿಷನ್​ ಗನ್ ಹಿಡಿದು ಪೈರ್​ ಮಾಡಬೇಕಿದೆ.

ಕೆಜಿಎಫ್ ಕೋಟೆಗೆ ಲಗ್ಗೆ ಇಡುತ್ತಾ ಕೆಕೆಆರ್​​ನ RRR..?​

ಆರ್​ಆರ್​ಆರ್​.. ಇದು ನಿರ್ದೇಶತಕ ರಾಜಮೌಳಿ ಕಲ್ಪನೆಯ ರೌದ್ರಂ ರಣಂ ರುಧಿರಂ ಆಗಿದ್ರು. ಐಪಿಎಲ್​​ ಫ್ಯಾನ್ಸ್​ಗೆ ಮಾತ್ರ, ಕೆಕೆಆರ್​ ತಂಡದ ರಿಂಕು, ರಸೆಲ್, ರಾಣಾ ಅಂತಾನೇ ನೋಡ್ತಿದ್ದಾರೆ. ಇದಕ್ಕೆ ಕಾರಣ ರಣರಂಗದಲ್ಲಿ ರಿಂಕು, ರಸೆಲ್, ರಾಣಾರ ರೌದ್ರವತಾರ. ಕ್ರಿಸ್​​ಕಚ್ಚಿ ನಿಂತ್ರೆ, ಎಂಥಹ ದೊಡ್ಡ ರನ್​ ಕೋಟೆಯನ್ನಾದರು ಚಿದ್ರವಾಗಿಸಬಲ್ಲ ಇವರು, ಚಿನ್ನಸ್ವಾಮಿಯ ಸಣ್ಣ ಗ್ರೌಂಡ್​ನಲ್ಲಿ ಆರ್​ಸಿಬಿ ಪಾಲಿನ ಸಿಂಹಸ್ವಪ್ನವಾಗಿದ್ದಾರೆ.

ಹಿಂದಿನ ಸೇಡು ತೀರಿಸಿಕೊಳ್ಳಲು ಆರ್​ಸಿಬಿ ಪ್ಲಾನ್..!

ಕೆಕೆಆರ್ ನಾಯಕ ಶ್ರೇಯಸ್​ ಅಯ್ಯರ್, ಈ ಸಲನೂ ತ್ರಿಬಲ್ ಆರ್​ ಮೆಗಾ ಹಿಟ್​ ಆಗುತ್ತೆ ಅನ್ನೋ ಬಲವಾದ ನಂಬಿಕೆಯಲ್ಲಿದ್ದಾರೆ. ಕಳೆದ ಸೀಸನ್​ನಲ್ಲಿ ಆರ್​ಸಿಬಿ ಎದುರು ಕೆಕೆಆರ್​ ಗೆದ್ದು ಬೀಗಿದೆ. ಆ ಗೆಲುವಿನ ಹಿಂದಿನ ಸೂತ್ರದಾರಿಗಳು ಇದೇ ತ್ರಿಬಲ್ ಆರ್ ಟೀಮ್​.​ ಚಿನ್ನಸ್ವಾಮಿಯಲ್ಲಿ ಕೆಕೆಆರ್​ ಆಡಿರೋ 11 ಪಂದ್ಯಗಳ ಪೈಕಿ 7ರಲ್ಲಿ ಆರ್​ಸಿಬಿ ತಂಡವನ್ನ ಮುಣ್ಣು ಮುಕ್ಕಿಸಿದೆ.​ ಇಂದು ಇದೇ ಕಾನ್ಫಿಡೆನ್ಸ್​ನಲ್ಲಿರೋ ಶ್ರೇಯಸ್​, ಈ ಸಲನೂ ತ್ರಿಬಲ್ ಆರ್ ಮೆಗಾ ಹಿಟ್​ ಎಂಬ ಕನಸು ಕಾಣ್ತಿದ್ದಾರೆ.

ಇವ್ರ ಆಟಕ್ಕೆ ಮಟ್ಟ ಹಾಕಲು ಆರ್​ಸಿಬಿ ತೆರೆ ಹಿಂದೆ ಮಾಸ್ಟರ್​ ಪ್ಲಾನ್​​ ರೂಪಿಸ್ತಿದ್ದು, ಟಕ್ಕರ್ ನೀಡುವ ಲೆಕ್ಕಾಚಾರದಲ್ಲಿದೆ. ಹೀಗಾಗಿ ಇಂದಿನ ಮೆಗಾ ಫೈಟ್​ನಲ್ಲಿ ಯಾರು ಬ್ಲಾಕ್ ಬ್ಲಾಸ್ಟರ್​ ಹಿಟ್​​​ ಹೊಡೀತಾರೆ ಅನ್ನೋದು ಕುತೂಹಲ ಹೆಚ್ಚಿಸಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

RCBಯ ಕೊಹ್ಲಿ, ಗ್ಲೆನ್ ಮ್ಯಾಕ್ಸ್​ವೆಲ್, ಫಾಫ್ v/s ರಿಂಕು, ರಸೆಲ್, ರಾಣಾ.. ಗೆಲ್ಲೋದ್ಯಾರು?

https://newsfirstlive.com/wp-content/uploads/2024/03/VIRAT-1.jpg

Load More