/newsfirstlive-kannada/media/post_attachments/wp-content/uploads/2025/05/VIRAT_KOHLI_BATTING_NEW.jpg)
ಐಪಿಎಲ್ನಲ್ಲಿ ಇವತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಕ್ನೋ ಸೂಪರ್ ಜೈಂಟ್ಸ್ ನಡುವೆ ಪಂದ್ಯ ನಡೆಯಲಿದೆ. ಬೆಂಗಳೂರು ತಂಡಕ್ಕೆ 18ನೇ ಆವೃತ್ತಿಯಲ್ಲಿ ತವರಿನಾಚೆ ನಡೆಯಲಿರುವ ಕೊನೆಯ ಲೀಗ್ ಪಂದ್ಯವಾಗಿದೆ. ದೇಶದಲ್ಲಿ ಯುದ್ಧ ಕಾರ್ಮೋಡ ಹಿನ್ನೆಲೆಯಲ್ಲಿ ಪಂದ್ಯ ನಡೆಯುತ್ತಾ? ಇಲ್ಲವಾ ಎಂಬ ಅನುಮಾನ ಇದೆ.
ಎಲ್ಎಸ್ಜಿ ವಿರುದ್ಧ ಗೆದ್ದರೆ ಇವತ್ತು ಆರ್ಸಿಬಿ ಪ್ಲೇ-ಆಫ್ ಪ್ರವೇಶ ಮಾಡಲಿದೆ. ಇವತ್ತಿನ ಪಂದ್ಯ ಗೆದ್ರೆ ಆರ್ಸಿಬಿ ತಂಡ ಪ್ಲೇ ಆಫ್ ಸ್ಥಾನ ಕನ್ಫರ್ಮ್ ಆಗಲಿದೆ. 11 ಪಂದ್ಯಗಳಲ್ಲಿ 5 ಪಂದ್ಯ ಗೆದ್ದಿರೋ ಲಕ್ನೋ ಸೂಪರ್ ಜೈಂಟ್ಸ್ಗೆ ಈ ಪಂದ್ಯ ಮೊಸ್ಟ್ ಇಂಪಾರ್ಟೆಂಟ್. ಲಕ್ನೋ ಗೆದ್ರೆ ಮಾತ್ರ ಪ್ಲೇ ಆಫ್ ಕನಸು ಜೀವಂತವಾಗಿರಲಿದೆ.
ಇದನ್ನೂ ಓದಿ: ಆಕಾಶದಲ್ಲೇ ಪಾಕಿಸ್ತಾನದ ಯುದ್ಧ ವಿಮಾನ ಢಮಾರ್.. ಹೇಗಿತ್ತು ಭಾರತದ ದಾಳಿ..? ಈ ವಿಡಿಯೋ ನೋಡಿ
ಗೆಲುವಿಗಾಗಿ ಏಡೆನ್ ಮಾರ್ಕಮ್, ಮಿಚೆಲ್ ಮಾರ್ಶ್, ನಿಕೋಲಸ್ ಪೂರನ್ರನ್ನೇ ನೆಚ್ಚಿಕೊಂಡಿರೋ ಲಕ್ನೋ ಇನ್ಕನ್ಸಿಸ್ಟೆಂಟ್ ಪರ್ಫಾಮೆನ್ಸ್ನಿಂದ ಬಳಲಿಹೋಗಿದೆ. ಪೂರನ್ ಆಟವೂ ಕೆಲ ಪಂದ್ಯಗಳಿಂದ ನಡೆದಿಲ್ಲ. ಕ್ಯಾಪ್ಟನ್ ಪಂತ್ ಅಂತೂ ಫ್ಲಾಪ್ ಮೇಲೆ ಫ್ಲಾಪ್ ಶೋ ನೀಡ್ತಿದ್ದಾರೆ. ಹೀಗಾಗಿ ಇಂದು ಲಕ್ನೋಗೆ ಲಕ್ ಕೈ ಹಿಡಿಯಬೇಕಿದೆ. ಇದರ ಮಧ್ಯೆ ಭಾರತ ಮತ್ತು ಪಾಕ್ ನಡುವೆ ಯುದ್ಧದ ಕಾರ್ಮೋಡ ಹಿನ್ನೆಲೆಯಲ್ಲಿ ಪಂದ್ಯ ನಡೆಯುತ್ತಾ ಇಲ್ವಾ ಎಂಬ ಅನುಮಾನ ಕೂಡ ಇದೆ.
ಇದನ್ನೂ ಓದಿ: ಭಾರತ- ಪಾಕಿಸ್ತಾನ ನಡುವಿನ ಘರ್ಷಣೆಗೂ, ನಮಗೂ ಯಾವುದೇ ಸಂಬಂಧ ಇಲ್ಲ- ಅಮೆರಿಕ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್