/newsfirstlive-kannada/media/post_attachments/wp-content/uploads/2025/05/RAJATH_PATIDAR_SALT.jpg)
ಲಕ್ನೋದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅದೃಷ್ಟ ಪರೀಕ್ಷೆಗೆ ಮುಂದಾಗಲಿದೆ. ಪಾಯಿಂಟ್ ಟೇಬಲ್ನಲ್ಲಿ ನಂಬರ್.1 ಸ್ಥಾನಕ್ಕಾಗಿ ಪೈಪೋಟಿ ನಡೆಸಲಿರುವ ಆರ್ಸಿಬಿ, ಇಂದು ಲೀಗ್ ಸ್ಟೇಜ್ನ ಕೊನೆಯ ಪಂದ್ಯದಲ್ಲಿ ಲಕ್ನೋ ಸೂಪರ್ಜೈಂಟ್ಸ್ ವಿರುದ್ಧ ಗೆಲ್ಲಲೇಬೇಕು. ಆರ್ಸಿಬಿ ಕ್ವಾಲಿಫೈಯರ್-1 ಪ್ರವೇಶಿಸಬೇಕಾದ್ರೆ ಜಸ್ಟ್ ಗೆಲುವು ಸಾಕಾಗೊಲ್ಲ.
ಆರ್ಸಿಬಿಗೆ ಒಂದಲ್ಲ.. ಎರಡು ಸವಾಲ್..!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇಂದಿನ ಪಂದ್ಯ ಎಷ್ಟು ಮುಖ್ಯ ಗೊತ್ತಾ? ಲಕ್ನೋ ಸೂಪರ್ಜೈಂಟ್ಸ್ ತಂಡವನ್ನ ಆರ್ಸಿಬಿ ಸೋಲಿಸಿದ್ರೆ ಸಾಲದು. ಎಲ್ಎಸ್ಜಿ ವಿರುದ್ಧ ಆರ್ಸಿಬಿ ಒಳ್ಳೆ ರನ್ರೇಟ್ನಿಂದ, ಪಂದ್ಯವನ್ನ ಗೆಲ್ಲಲೇಬೇಕು. ಸದ್ಯ ಆರ್ಸಿಬಿ, 8 ಪಂದ್ಯಗಳನ್ನ ಗೆದ್ದು ಒಟ್ಟು 17 ಪಾಯಿಂಟ್ ಪಡೆದುಕೊಂಡಿದೆ. ಇಂದಿನ ಪಂದ್ಯ ಗೆದ್ರೆ 2 ಪಾಯಿಂಟ್ನೊಂದಿಗೆ ಒಟ್ಟು 19 ಪಾಯಿಂಟ್ಗಳಿಸಿದಂತಾಗಿದೆ. ಉತ್ತಮ ರನ್ರೇಟ್ನಿಂದ ಲಕ್ನೋ ತಂಡವನ್ನ ಸೋಲಿಸಿದ್ರೆ ಆರ್ಸಿಬಿ ಪಾಯಿಂಟ್ ಟೇಬಲ್ನಲ್ಲಿ ಟಾಪ್ 1 ಸ್ಥಾನಗಳಿಸೋ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ: RCBಗೆ ಗುಡ್ನ್ಯೂಸ್; ವಾಪಸ್ ಬಂದ ಬಲಿಷ್ಠ ಪ್ಲೇಯರ್.. ತಂಡಕ್ಕೆ ಬಂತು ಆನೆಬಲ
ಈಗಾಗಲೇ ಮೊದಲ ಸ್ಥಾನದಲ್ಲಿ ಕೂತಿರುವ ಪಂಜಾಬ್, 19 ಅಂಕದೊಂದಿಗೆ +0.372 ನೆಟ್ ರನ್ ರೇಟ್ ಗಳಿಸಿಕೊಂಡಿದೆ. ಹಾಗಾಗಿ ಇವತ್ತು ಆರ್ಸಿಬಿಗೆ ಕೇವಲ ಗೆಲುವು ಒಂದೇ ಸಾಲದ ನೆಟ್ ರನ್ರೇಟ್ ಚೆನ್ನಾಗಿ ಇರಬೇಕು. ಆಗ ಮಾತ್ರ ಪಾಯಿಂಟ್ಸ್ ಟೇಬಲ್ನಲ್ಲಿ ಮೊದಲ ಸ್ಥಾನಕ್ಕೆ ಏರುವ ಅವಕಾಶ ಇದೆ. ಹಾಗಾಗಿ ಆರ್ಸಿಬಿಗೆ ಇಂದು ಕೇವಲ ಗೆಲುವು ಒಂದೇ ಅಲ್ಲ, ರನ್ ರೇಟ್ ಕೂಡ ಅವಶ್ಯಕವಾಗಿದೆ.
ಇದನ್ನೂ ಓದಿ: ಮುಂಬೈಗೆ ಮಣ್ಣು ಮುಕ್ಕಿಸಿದ ಪಂಜಾಬ್ ಕಿಂಗ್ಸ್, ಜಯಭೇರಿ.. IPL ಪಾಯಿಂಟ್ ಟೇಬಲ್ನಲ್ಲಿ ಬದಲಾವಣೆ!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ