ಪಂಜಾಬ್ ವಿರುದ್ಧ ಇವತ್ತು ಆರ್​ಸಿಬಿ ಪಂದ್ಯ.. ಗೆಲ್ಲಬೇಕು ಅಂದ್ರೆ ಯಾರೆಲ್ಲ ಆಡಬೇಕು..?

author-image
Ganesh
Updated On
ಆರ್​ಸಿಬಿಗೆ ಇಂದಿನಿಂದ ಸೆಕೆಂಡ್ ಇನ್ನಿಂಗ್ಸ್.. ಇನ್ನೂ ಎಷ್ಟು ಪಂದ್ಯ ಬಾಕಿ ಇದೆ..?
Advertisment
  • ಆರ್​ಸಿಬಿ ಪಾಲಿಗೆ ಇವತ್ತು ಟಾಸ್ ಪ್ರಮುಖ
  • ಚಿನ್ನಸ್ವಾಮಿಯಲ್ಲಿ ಪಡಿಕ್ಕಲ್ ಅಟ್ಟರ್ ಫ್ಲಾಪ್
  • ಇಂದು ಸಿಡಿದೇಳ್ತಾರಾ ಲೋಕಲ್ ಬಾಯ್

ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಇಂದು ಪ್ರತಿಷ್ಟೆಯ ಪಂದ್ಯವಾಗಿದೆ. ಶತಾಯ ಗತಾಯ ಆರ್​ಸಿಬಿ, ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಲೇಬೇಕಿದೆ. ಈಗಾಗಲೇ ಚಿನ್ನಸ್ವಾಮಿಯಲ್ಲಿ ಸತತ ಎರಡು ಪಂದ್ಯ ಸೋತಿರುವ ಆರ್​ಸಿಬಿ, ತವರು ಅಭಿಮಾನಿಗಳ ಮುಂದೆ ಹ್ಯಾಟ್ರಿಕ್ ಸೋಲಿನಿಂದ ಪಾರಾಗಬೇಕಿದೆ. ತವರಿನಲ್ಲಿ ಬೆಂಗಳೂರು ತಂಡಕ್ಕೆ ಲಕ್ ಕೂಡ ಖುಲಾಯಿಸಬೇಕಿದೆ.

ಆರ್​ಸಿಬಿ ಪಾಲಿಗೆ ಟಾಸ್ ಪ್ರಮುಖ

ಗುಜರಾತ್ ಮತ್ತು ಡೆಲ್ಲಿ ವಿರುದ್ಧ ಟಾಸ್ ಸೋತ ಆರ್​ಸಿಬಿ ಮೊದಲು ಬ್ಯಾಟಿಂಗ್ ನಡೆಸಿತು. ಆ ಎರಡೂ ಪಂದ್ಯಗಳಲ್ಲಿ ಆರ್​ಸಿಬಿ, 170 ಸ್ಕೋರ್ ದಾಟಲಿಲ್ಲ. ಹಾಗಾಗಿ ಇಂದು ಬೆಂಗಳೂರು ತಂಡದ ನಾಯಕ ಪಾಟೀದಾರ್, ಮೊದಲು ಟಾಸ್ ಗೆಲ್ಲಬೇಕಿದೆ. ಟಾಸ್ ಗೆದ್ರೆ ಮ್ಯಾಚ್ ಗೆದ್ದಂಗೇ. ಯಾಕೆಂದರೆ ಚೇಸಿಂಗ್​ನಲ್ಲಿ ಆರ್​ಸಿಬಿ ಬಲಿಷ್ಟವಾಗಿದೆ.

ಪಡಿಕ್ಕಲ್ ‘ಅಟ್ಟರ್ ಫ್ಲಾಪ್’

ಚಿನ್ನಸ್ವಾಮಿಯಲ್ಲಿ ಲೋಕಲ್ ಬಾಯ್ ಪಡಿಕ್ಕಲ್ ಫ್ಲಾಪ್ ಶೋ ನೀಡಿರೋದು ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿದೆ. ಗುಜರಾತ್ ವಿರುದ್ಧ 12 ರನ್, ಡೆಲ್ಲಿ ವಿರುದ್ಧ ಕೇವಲ 1 ರನ್​ಗಳಿಸಿದ್ದ ಪಡಿಕ್ಕಲ್ ಬ್ಯಾಟಿಂಗ್​ನಲ್ಲಿ ತಂಡಕ್ಕೆ ಕೈಕೊಟ್ರು. ಇವತ್ತು ಪಡಿಕ್ಕಲ್ ಸಿಡಿದೇಳಲೇಬೇಕು. ಇಲ್ದಿದ್ರೆ ತವರಿನಲ್ಲಿ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ.

ಇದನ್ನೂ ಓದಿ: ವಿಸ್ಫೋಟಕ ಬ್ಯಾಟರ್​ಗಳಿದ್ದರೂ ಅಲ್ಪ ಮೊತ್ತದ ಟಾರ್ಗೆಟ್​​ ಕೊಟ್ಟ SRH.. ಎಷ್ಟು ರನ್?

publive-image

ತವರಿನಲ್ಲಿ ಪಾಟೀದಾರ್ ಪರದಾಟ

ಆರ್​ಸಿಬಿ ನಾಯಕ AWAY ಮ್ಯಾಚ್​ಗಳಲ್ಲಿ ಬ್ಯಾಟಿಂಗ್​ನಲ್ಲಿ ಮಿಂಚಿದ್ದಾರೆ. ತವರಿನಲ್ಲಿ ಮಾತ್ರ ಪಟಿದಾರ್ ಪರದಾಡಿದ್ದಾರೆ. ಗುಜರಾತ್ ಟೈಟನ್ಸ್ ವಿರುದ್ಧ 12 ಎಸೆತಗಳಲ್ಲಿ 12 ರನ್​ಗಳಿಸಿದ್ರೆ ಕ್ಯಾಪಿಟಲ್ಸ್ ವಿರುದ್ಧ 23 ಎಸೆತಗಳಲ್ಲಿ 25 ರನ್​ ಮಾತ್ರಗಳಿಸಿದ್ದಾರೆ. ಹೋಂ ಗ್ರೌಂಡ್​​ನಲ್ಲಿ ಪಾಟೀದಾರ್ ಪರದಾಡಿದ್ದಾರೆ ಅನ್ನೋದಕ್ಕೆ ಇದಕ್ಕಿಂತ ಬೆಸ್ಟ್ ಎಕ್ಸಾಂಪಲ್ ಬೇಕಿಲ್ಲ.

ಟಿಮ್ ಡೇವಿಡ್ ಸ್ಫೋಟ

ಆರ್​ಸಿಬಿಗೆ ಸಮಾಧಾನಕರ ವಿಷ್ಯ ಅಂದ್ರೆ ಅದು ಟಿಮ್ ಡೇವಿಡ್​​ರ ಬ್ಯಾಟಿಂಗ್. ಬೆಂಗಳೂರಿನಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಟಿಮ್ ಎದುರಾಳಿ ಬೌಲರ್​ಗಳನ್ನ ಚಿಂದಿ ಉಡಾಯಿಸಿದ್ದಾರೆ. ಟೈಟನ್ಸ್ ವಿರುದ್ಧ 178ರ ಸ್ಟ್ರೈಕ್​ರೇಟ್​ನಲ್ಲಿ 32 ರನ್​ ಮತ್ತು ಡೆಲ್ಲಿ ವಿರುದ್ಧ 185ರ ಸ್ಟ್ರೈಕ್​ರೇಟ್​ನಲ್ಲಿ 37 ರನ್​ಗಳಿಸಿರುವ ಟಿಮ್ ಡೇವಿಡ್ ಆರ್​ಸಿಬಿಯ ಗ್ರೇಟ್ ಫಿನಿಷರ್ ಆಗಿ ಗುರುತಿಸಿಕೊಂಡಿದ್ದಾರೆ. ಇದೇ ರೆಡ್ ಆರ್ಮಿ ತಂಡದ ಬಲ ಹೆಚ್ಚಿಸಿರೋದು.

ಇದನ್ನೂ ಓದಿ: ಬಲಿಷ್ಠ ಹೈದ್ರಾಬಾದ್​ ಟೀಮ್​ಗೆ ಮುಂಬೈ ಶಾಕ್​.. ಬಿಗ್​​ ಬ್ಯಾಟರ್​ಗಳಿದ್ರೂ ಸೋತ SRH

publive-image

ಭುವಿ ಮತ್ತು ದಯಾಳ್ ಹೋಂ ಪಿಚ್​ನಲ್ಲಿ ಡೀಸೆಂಟ್ ಪರ್ಫಾಮೆನ್ಸ್ ನೀಡಿದ್ದಾರೆ. ಹೇಜಲ್​​ವುಡ್, ತವರಿನಲ್ಲಿ ಜೋಶ್ ಕಳೆದುಕೊಂಡವರಂತೆ ಬೌಲಿಂಗ್ ಮಾಡ್ತಿದ್ದಾರೆ. ಗುಜರಾತ್ ವಿರುದ್ಧ 3.5 ಓವರ್ ಬೌಲ್ ಮಾಡಿದ್ದ ಹೇಜಲ್​ವುಡ್ 11.21ರ ಎಕಾನಮಿಯಲ್ಲಿ 43 ರನ್​ ನೀಡಿದ್ರು. ಡೆಲ್ಲಿ ವಿರುದ್ಧ 3 ಓವರ್​ ಬೌಲ್ ಮಾಡಿ13.33ರ ಎಕಾನಮಿಯಲ್ಲಿ 40 ರನ್​ ನೀಡಿದ್ರು. ಚಿನ್ನಸ್ವಾಮಿಯಲ್ಲಿ ಸೂಪರ್ ಸ್ಪೆಲ್​ ಹಾಕೋದೇ ಹೇಜಲ್​​ವುಡ್ ಮುಂದಿರೋ ಬಿಗ್ ಚಾಲೆಂಜ್. ಒಟ್ಟಿನಲ್ಲಿ ಪಂಜಾಬ್ ಕಿಂಗ್ಸ್, ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್​ನಲ್ಲಿ ಎಕ್ಸಲೆಂಟ್ ತಂಡವಾಗಿ ಕಾಣ್ತಿದೆ.

ಇದನ್ನೂ ಓದಿ: ಅಭಿಷೇಕ್ ಶರ್ಮಾ ಪ್ಯಾಂಟ್ ಚೆಕ್ ಮಾಡಿದ ಸೂರ್ಯಕುಮಾರ್.. ಪಂದ್ಯದ ಮಧ್ಯೆ ಏನಾಯಿತು?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment