/newsfirstlive-kannada/media/post_attachments/wp-content/uploads/2025/04/RCB-8.jpg)
ಸತತ ಎರಡು ಗೆಲುವುಗಳೊಂದಿಗೆ ಐಪಿಎಲ್ ಅಭಿಯಾನ ಆರಂಭಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಇಂದು ಗುಜರಾತ್ ಟೈಟಾನ್ಸ್ ವಿರುದ್ಧ ಸೆಣಸಾಟ ನಡೆಸಲಿದೆ. ಗುಜರಾತ್ ತಂಡವನ್ನು ಸೋಲಿಸಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಗುರಿಯನ್ನು ಹೊಂದಿದೆ. ಇತ್ತ, ಗುಜರಾತ್ ತನ್ನ ಕೊನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಸೋಲಿಸಿದ್ದು, ಅದೇ ವೇಗವನ್ನು ಮುಂದುವರಿಸಲು ಎದುರು ನೋಡ್ತಿದೆ.
ಇದನ್ನೂ ಓದಿ:ಬಿಗ್ಬ್ಯಾಷ್ ಕ್ರಿಕೆಟ್ ಲೀಗ್ಗೆ ಕಿಂಗ್ ಕೊಹ್ಲಿ ಎಂಟ್ರಿ.. ಅಧಿಕೃತ ಘೋಷಣೆ, ವಿರಾಟ್ಗೆ ಸಿಕ್ಸರ್ಸ್ ಸ್ವಾಗತ!
ಇಲ್ಲಿಯವರೆಗೆ ಆರ್‌ಸಿಬಿ ಉತ್ತಮ ಫಾರ್ಮ್‌ನಲ್ಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವನ್ನು ಸೋಲಿಸಿತು. ನಂತರ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವನ್ನು ಸೋಲಿಸಿತು. ಜೋಶ್ ಹೇಜಲ್‌ವುಡ್ ಆರ್‌ಸಿಬಿ ಪರ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಅವರು ಆರಕ್ಕಿಂತ ಕಡಿಮೆ ಎಕಾನಮಿ ರೇಟ್ ಹೊಂದಿದ್ದಾರೆ. ಸ್ವಿಂಗ್ ಮಾಸ್ಟರ್ ಭುವಿ ಕೂಡ ಲಯದಲ್ಲಿರೋದ್ರಿಂದ ಗುಜರಾತ್ ತಂಡಕ್ಕೆ ಆಘಾತ ನೀಡುವ ನೀರಿಕ್ಷೆ ಇದೆ. ಯಶ್ ದಯಾಳ್ ಕೂಡ ಸೈ ಎನಿಸಿಕೊಂಡಿದ್ದಾರೆ. ಇಂದರಿಂದ ಗುಜರಾತ್ ತಂಡಕ್ಕೆ ಭುವಿ, ಹೇಜಲ್‌ವುಡ್ ಮೇಲೆ ಸಹಜವಾಗಿಯೇ ನಡುಕ ಶುರುವಾಗಿದೆ.
ಕೊಹ್ಲಿ ಕೂಡ ಫಾರ್ಮ್ನಲ್ಲಿದ್ದಾರೆ. ಇಂದು ವಿರಾಟ್ ಅವರಿಂದ ಬಿಗ್ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಆರ್‌ಸಿಬಿ ಅಭಿಮಾನಿಗಳಿದ್ದಾರೆ. ಕೊಹ್ಲಿಗೆ ಫಿಲ್ ಸಾಲ್ಟ್ ಸಾಥ್ ನೀಡಿದ್ದಾರೆ. ಕಳೆದ ಎರಡು ಪಂದ್ಯಗಳಲ್ಲಿ ಕೊಹ್ಲಿ ಮತ್ತು ಸಾಲ್ಟ್ ಕ್ರಮವಾಗಿ 95 ಮತ್ತು 45 ರನ್‌ಗಳ ಪಾರ್ಟ್ನರ್ಶಿಪ್ ನೀಡಿದ್ದಾರೆ. ಇವರಿಬ್ಬರೂ ಗುಜರಾತ್ ತಂಡಕ್ಕೆ ಪೆಟ್ಟು ಕೊಡೋದ್ರಲ್ಲಿ ಸಂಶಯ ಇಲ್ಲ.
ಗುಜರಾತ್ಗೆ ಸ್ಪಿನ್ ಅಸ್ತ್ರವೇ ಬಲ
ಗುಜರಾತ್ನಲ್ಲಿ ರಶೀದ್ ಖಾನ್ ಮತ್ತು ಆರ್.ಸಾಯಿ ಕಿಶೋರ್ ಅವರಂತಹ ಅಪಾಯಕಾರಿ ಸ್ಪಿನ್ನರ್‌ಗಳಿದ್ದಾರೆ. ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳ ಮೇಲೆ ಇವರು ದಾಳಿ ಮಾಡಬಹುದು. ಕಗಿಸೊ ರಬಾಡ ಮತ್ತು ಸಿರಾಜ್ ಅವರಂತಹ ವೇಗದ ಬೌಲರ್‌ಗಳಿದ್ದಾರೆ. ರಬಾಡ ಇದುವರೆಗೆ 14 ಇನ್ನಿಂಗ್ಸ್‌ಗಳಲ್ಲಿ ನಾಲ್ಕು ಬಾರಿ ಕೊಹ್ಲಿಯನ್ನು ಔಟ್ ಮಾಡಿದ್ದಾರೆ.
ಇದನ್ನೂ ಓದಿ: ಶ್ರೇಯಸ್ ಅಯ್ಯರ್ ಮುಂದೆ ರಿಷಭ್ ಪಂತ್ಗೆ ಮುಖಭಂಗ.. ಪ್ರಭಸಿಮ್ರನ್ ಅರ್ಧಶತಕ, ಲಕ್ನೋಗೆ ಗರ್ವಭಂಗ
ಆರ್‌ಸಿಬಿ ತಂಡ: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್, ರಜತ್ ಪಾಟೀದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹೇಜಲ್‌ವುಡ್, ಯಶ್ ದಯಾಳ್.
ಗುಜರಾತ್ ಟೈಟಾನ್ಸ್: ಶುಭ್ಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಶೆರ್ಫೇನ್ ರುದರ್‌ಫೋರ್ಡ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಆರ್ ಸಾಯಿ ಕಿಶೋರ್, ಕಗಿಸೊ ರಬಾಡ, ಸಿರಾಜ್, ಪ್ರಸಿದ್ಧ್ ಕೃಷ್ಣ.
ಇದನ್ನೂ ಓದಿ: ಕೇಂದ್ರ ಸರ್ಕಾರಕ್ಕೆ ಇವತ್ತು ದೊಡ್ಡ ಸವಾಲು.. ವಕ್ಫ್ ತಿದ್ದುಪಡಿ ಮಸೂದೆ ಮಂಡನೆಗೆ ಕ್ಷಣಗಣನೆ..!