newsfirstkannada.com

KKR vs SRH; ಗಂಭೀರ್ ಚಾಣಕ್ಷತನ, ಕ್ಯಾಪ್ಟನ್ ಕಮಿನ್ಸ್​ ಬುದ್ಧಿವಂತಿಕೆ.. 2 ತಂಡದ ಬಲಾಬಲ ಏನು? ​

Share :

Published May 26, 2024 at 11:10am

    74 ಪಂದ್ಯಗಳು​.. 65 ದಿನಗಳ ಐಪಿಎಲ್​ ಜಾತ್ರೆಯಲ್ಲಿ ಕಪ್ ಯಾರಿಗೆ?

    ಇಂದು ಕೋಲ್ಕತ್ತಾ ನೈಟ್​ ರೈಡರ್ಸ್​- ಸನ್​ ರೈಸರ್ಸ್ ಮಧ್ಯೆ ಮೆಗಾಫೈಟ್​

    IPL ಫೈನಲ್ಸ್​ನಲ್ಲಿ ಟೇಬಲ್ ಟಾಪರ್​​ಗಳ ನಡುವೆ ಜಿದ್ದಾಜಿದ್ದಿ ಹೇಗಿದೆ?

ಐಪಿಎಲ್​ ಮಹಾ ಸಂಗ್ರಾಮದಲ್ಲಿ ಇಂದು, ಬಲಿಷ್ಠ ತಂಡಗಳ ಹಣಾಹಣಿ ನಡೆಯಲಿದೆ. ಮಾಜಿ ಚಾಂಪಿಯನ್​ಗಳ ಈ ಫೈನಲ್​ ಫೈಟ್​ನಲ್ಲಿ ಉಭಯ ತಂಡಗಳು, ಟ್ರೋಫಿ ಬರ ನೀಗಿಸಿಕೊಳ್ಳುಯವ ಲೆಕ್ಕಚಾರದಲ್ಲಿವೆ. ಹಾಗಾದ್ರೆ ಟ್ರೋಫಿ ನಿರೀಕ್ಷೆಯಲ್ಲಿರುವ ಉಭಯ ತಂಡಗಳ ಬಲಬಲಾ ಏನು?.

ಸೀಸನ್-17ರ ಕಲರ್​ಫುಲ್​​​​​​​​​​​​​​​​​​​​​​ ಟೂರ್ನಿಗೆ ಇಂದು ತೆರೆ..!

ಸೀಸನ್-17ರ ಕಲರ್​ಫುಲ್​​​​​​​​​​​​​​​​​​​​​​ ಟೂರ್ನಿ ಕ್ಲೈಮ್ಯಾಕ್ಸ್ ಹಂತ ತಲುಪಿದೆ. 70 ರೋಚಕ ಲೀಗ್​ ಮ್ಯಾಚ್​ಗಳು, 3 ಹೈಟೆನ್ಶನ್​​ ಪ್ಲೇ-ಆಫ್​ ಪಂದ್ಯಗಳ ಕಾದಾಟ. ಒಂದು ರಣರೋಚಕ ಫೈನಲ್​.. 65 ದಿನಗಳ ಅದ್ಧೂರಿ ಮನರಂಜನೆಯ ಜಾತ್ರೆಗೆ, ಇಂದು ತೆರೆ ಬೀಳಲಿದೆ. ಆದ್ರೆ ಮಿಲಿಯನ್​ ಡಾಲರ್​ ಟೂರ್ನಿ ಗೆಲ್ಲೋದ್ಯಾರು ಎಂಬ ಪ್ರಶ್ನೆ, ಅಭಿಮಾನಿಗಳನ್ನ ಕಾಡ್ತಿದೆ.

ಇದನ್ನೂ ಓದಿ: ಮಕ್ಕಳ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ.. ಪ್ರಪಂಚ ನೋಡೋ ಮುನ್ನವೇ 7 ನವಜಾತ ಶಿಶುಗಳು ಸಾವು

ಐಪಿಎಲ್​ ಫೈನಲ್ಸ್​ನಲ್ಲಿ ಟೇಬಲ್ ಟಾಪರ್​​ಗಳಾದ ಕೊಲ್ಕತ್ತಾ ನೈಟ್​ ರೈಡರ್ಸ್​ ಹಾಗೂ ಸನ್ ರೈಸರ್ಸ್ ಹೈದ್ರಾಬಾದ್ ಮುಖಾಮುಖಿಯಾಗ್ತಿದ್ದು, ರಣಕಣದಲ್ಲಿ ಕಪ್​ ಗೆಲ್ಲಲು ಪಣತೊಟ್ಟಿವೆ. ಆದ್ರೆ ಮಿಲಿಯನ್ ಡಾಲರ್ ಟೂರ್ನಿ ಗೆಲ್ಲಲು ಇನ್ನಿಲ್ಲದ ಗೇಮ್ ಪ್ಲಾನ್, ಸ್ಟ್ರಾಟರ್ಜಿಗಳನ್ನೇ ರೂಪಿಸಿಕೊಂಡಿರುವ ಉಭಯ ತಂಡಗಳು, ಚೆನ್ನೈನ ಚಿದಂಬರಂ ಸ್ಟೇಡಿಯಮ್​ನಲ್ಲಿ ಸಾಲಿಡ್ ಪರ್ಫಾಮೆನ್ಸ್ ನೀಡೋ ಲೆಕ್ಕಾಚಾರದಲ್ಲಿವೆ.

ಟ್ರೋಫಿ ಬರದ ಲೆಕ್ಕಾಚಾರ.. ಇಬ್ಬರಿಗೂ ಟಫ್ ಟಾಸ್ಕ್..!

2016ರ ಬಳಿಕ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿರುವ ನೈಟ್​​ ರೈಡರ್ಸ್, ಕಪ್​ ಗೆಲ್ಲೋ ಕನವರಿಕೆಯಲ್ಲಿದ್ರೆ. ಅತ್ತ ಸನ್​ರೈಸರ್ಸ್​ ಹೈದ್ರಾಬಾದ್, ಪ್ಯಾಟ್​ ಕಮಿನ್ಸ್​ ನಾಯಕತ್ವದಲ್ಲಿ 8 ವರ್ಷಗಳ ಬಳಿಕ ಐಪಿಎಲ್ ಕಿರೀಟಕ್ಕೆ ಮುತ್ತಿಡೋ ಆತ್ಮವಿಶ್ವಾಸದಲ್ಲಿದೆ. ಆದ್ರೆ ಸೂಪರ್​ ಸ್ಟಾರ್​ ಆಟಗಾರರ ದಂಡನ್ನೇ ಹೊಂದಿರುವ ಉಭಯ ತಂಡಗಳು, ಸುಲಭವಾಗಿ ಸೋಲೊಪ್ಪಿಕೊಳ್ಳುವ ಚಾನ್ಸೇ ಇಲ್ಲ.

ಕೆಕೆಆರ್​ ತಂಡದ ಸ್ಟ್ರೆಂಥ್​

ಕೆಕೆಆರ್ ಬಲವೇ ಗಂಭೀರ್ ಮಾರ್ಗದರ್ಶನ, ಶ್ರೇಯಸ್ ಅಯ್ಯರ್ ನಾಯಕತ್ವವಾಗಿದೆ. ಸಾಲಿಡ್ ಓಪನಿಂಗ್ ಜೊತೆ ಅದ್ಭುತ ಬೌಲಿಂಗ್ ನಡೆಸುವ ನರೈನ್, ಕೆಕೆಆರ್​ನ ಎಕ್ಸ್​ ಫ್ಯಾಕ್ಟರ್. ಮಿಡಲ್ ಆ್ಯಂಡ್ ಲೋವರ್ ಆರ್ಡರ್​ನಲ್ಲಿ ಸ್ಫೋಟಕ ಬ್ಯಾಟರ್​​ಗಳ ಬಲ ಇದೆ. ಮಿಚೆಲ್​ ಸ್ಟಾರ್ಕ್ ಹಾಗೂ ಹರ್ಷಿತ್ ರಾಣಾ ಪೇಸ್ ಅಟ್ಯಾಕ್ ಜೊತೆ ಕ್ವಾಲಿಟಿ ಸ್ಪಿನ್ನರ್​ಗಳು ಗೇಮ್ ಚೇಂಜರ್​ಗಳಾಗಿದ್ದಾರೆ. ಇಂಟ್ರೆಸ್ಟಿಗ್ ಅಂದ್ರೆ, ಈಡನ್ ಗಾರ್ಡನ್ಸ್​ ಪಿಚ್​ಗೂ ಚಿದಂಬರಂ ಸ್ಟೇಡಿಯಂ ಪಿಚ್​ಗೂ ಸಾಮ್ಯತೆ ಇದೆ. ಹೀಗಾಗಿ ಚಿದಂಬರಂ ಸ್ಟೇಡಿಯಂ, ಕೆಕೆಆರ್​ ತಂಡಕ್ಕೆ ಅಡ್ವಾಂಟೇಜ್ ಆಗಲಿದೆ.

ಕೆಕೆಆರ್​ ತಂಡದ ವಿಕ್ನೇಸ್

ಆದ್ರೆ ಫಿಲ್ ಸಾಲ್ಟ್​ ಅಲಭ್ಯತೆಯ ಜೊತೆ ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್ ಅಸ್ಥಿರತೆ, ಕೆಕೆಆರ್ ತಂಡಕ್ಕೆ ಕಾಡಲಿದೆ. ಇದರ ಜೊತೆ ಫಿನಿಷರ್​ಗಳಾಗಿ ರಿಂಕು, ರಸೆಲ್ ವಿಫಲವಾಗ್ತಿದ್ದಾರೆ. ಇದು ಕೆಕೆಆರ್​ಗೆ ಡಿಸ್ ಅಡ್ವಾಂಟೇಜ್ ಆಗಿದೆ. ಇದಿಷ್ಟೇ ಅಲ್ಲ, ಮಿಚೆಲ್​ ಸ್ಟಾರ್ಕ್ ಹಾಗೂ ಹರ್ಷಿತ್ ರಾಣಾಗೆ ಸಾಥ್ ನೀಡವಂತ 3ನೇ ವೇಗಿಯ ಕೊರತೆ ಕೆಕೆಆರ್​ಗೆ ಕಾಡಲಿದೆ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ. ಸನ್ ರೈಸರ್ಸ್ ಹೈದ್ರಾಬಾದ್​​ ತಂಡದಲ್ಲೂ ಸ್ಟ್ರೆಂಥ್ ಆ್ಯಂಡ್ ವಿಕ್ನೇಸ್ ಇದ್ದೇ ಇದೆ.

ಇದನ್ನೂ ಓದಿ: ಗೇಮಿಂಗ್‌ ಝೋನ್​ನಲ್ಲಿ ಅಗ್ನಿ ದುರಂತ ಕೇಸ್​; ಮಕ್ಕಳು ಸೇರಿದಂತೆ ಸಾವಿನ ಸಂಖ್ಯೆ 32ಕ್ಕೆ ಏರಿಕೆ 

SRH​ ತಂಡದ ಸ್ಟ್ರೆಂಥ್

ಸನ್ ರೈಸರ್ಸ್ ತಂಡದ ಬಲವೇ ಪ್ಯಾಟ್ ಕಮಿನ್ಸ್ ಲೀಡರ್​ಶಿಪ್​. ಟ್ರಾವಿಸ್ ಹೆಡ್​, ಅಭಿಷೇಕ್ ಶರ್ಮಾರ ಫೈರಿ ಓಪನಿಂಗ್ ಜೊತೆ ಓವರ್​​ಸೀಸ್ ಆಟಗಾರರ ಸಕ್ಸಸ್, ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಇನ್ನು ರಾಹುಲ್ ತ್ರಿಪಾಠಿ, ಕ್ಲಾಸೆನ್ ಸ್ಫೋಟಕ ಆಟದ ಜೊತೆ ವೈರಿಟಿ ಆಲೌಂಡರ್​ಗಳು ತಂಡದ ಬ್ಯಾಟಿಂಗ್​​​ಗೆ ಡೆಪ್ತ್ ನೀಡುವ ಜೊತೆ ತಂಡಕ್ಕೆ ಸಮತೋಲನ ನೀಡುತ್ತಿದೆ. ಇದರ ಜೊತೆ ಅನುಭವಿ ಪೇಸ್ ಅಟ್ಯಾಕ್ ಹಾಗೂ ಶಹಬಾಜ್ ಸ್ಪಿನ್ ವರ್ಕೌಟ್ ಆಗ್ತಿದೆ.

SRH​ ತಂಡದ ವಿಕ್ನೇಸ್

ಓಪನರ್ಸ್ ಹಾಗೂ ಓವರ್​ಸೀಸ್ ಪ್ಲೇಯರ್ಸ್​​​ ಮೇಲೆ ಹೈದ್ರಾಬಾದ್ ಹೆಚ್ಚು ಡಿಪೆಂಡ್ ಆಗಿದೆ. ಅನುಭವಿ ಇಂಡಿಯನ್ ಬ್ಯಾಟರ್​ಗಳ ಕೊರತೆ ಕಾಡ್ತಿದೆ. ಅವಶ್ಯಕತೆ ಇದ್ದಾಗ, ಮಿಡಲ್ ಆರ್ಡರ್​ ಹಾಗೂ ಲೋವರ್ ಆರ್ಡರ್​​ನಲ್ಲಿ ನಿತೀಶ್ ರೆಡ್ಡಿ, ಅಬ್ದುಲ್ ಸಮದ್ ಕೈಕೊಡುತ್ತಿದ್ದಾರೆ. ಅನುಭವಿಗಳಿದ್ದರೂ ಡೆತ್ ಓವರ್​​ನಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡ್ತಿಲ್ಲ. ಅನುಭವಿ ಸ್ಪಿನ್ನರ್​ಗಳು ತಂಡದಲ್ಲಿ ಇಲ್ಲ. ಇದರಿಂದ ಫೈನಲ್ಸ್​ನಲ್ಲಿ ಸನ್ ರೈಸರ್ಸ್​ಗೆ ಹೊಡೆತ ಬಿದ್ದರು ಅಚ್ಚರಿ ಇಲ್ಲ. ಟೇಬಲ್ ಟಾಪರ್​ಗಳ ಮುಖಾಮುಖಿ ಭಾರೀ ಕ್ಯುರಿಯಾಸಿಟಿ ಹುಟ್ಟಿ ಹಾಕಿದ್ದು, ಯಾರಿಗೆ ಟ್ರೋಫಿ ಗೆಲುವಿನ ಭಾಗ್ಯ ಸಿಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

KKR vs SRH; ಗಂಭೀರ್ ಚಾಣಕ್ಷತನ, ಕ್ಯಾಪ್ಟನ್ ಕಮಿನ್ಸ್​ ಬುದ್ಧಿವಂತಿಕೆ.. 2 ತಂಡದ ಬಲಾಬಲ ಏನು? ​

https://newsfirstlive.com/wp-content/uploads/2024/05/KKR_SRH.jpg

Load More