/newsfirstlive-kannada/media/post_attachments/wp-content/uploads/2024/11/HSN_HASANAMBE-1.jpg)
ಹಾಸನ: ವರ್ಷಕ್ಕೆ ಒಂದು ಬಾರಿ ಮಾತ್ರ ಬಾಗಿಲು ತೆರೆಯುವ ಅಧಿದೇವತೆ ಹಾಸನಾಂಬೆ ದರ್ಶನಕ್ಕೆ ಇಂದು ಕೊನೆ ದಿನವಾಗಿದೆ. ಈ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ಇರುವ ಧರ್ಮದರ್ಶನದ ಸಾಲುಗಳು ಸಂಪೂರ್ಣ ಭರ್ತಿಯಾಗಿವೆ.
ಹಾಸನಾಂಬೆ ದರ್ಶನಕ್ಕೆ ಇಂದು ಕೊನೆ ದಿನವಾಗಿದ್ದು ಸಂಪ್ರಾಯದಂತೆ ನವೆಂಬರ್ 03 ರಂದು ದೇವಾಲಯದ ಬಾಗಿಲು ಮುಚ್ಚಲಾಗುತ್ತದೆ. ಅಕ್ಟೋಬರ್ 24 ರಂದು ಮಧ್ಯಾಹ್ನ 12:15 ಗಂಟೆಗೆ ದೇವಾಲಯದ ಬಾಗಿಲನ್ನು ಶಾಸ್ತ್ರೋಕ್ತವಾಗಿ ತೆರೆಯಲಾಗಿತ್ತು. ಅಂದಿನಿಂದ ಇವತ್ತಿನವರೆಗೆ ಭಕ್ತರು ಲಕ್ಷಾಂತರ ಸಂಖ್ಯೆಯಲ್ಲಿ ಬಂದು ಹಾಸನಾಂಬೆಯ ದರ್ಶನ ಪಡೆದುಕೊಳ್ಳುತ್ತಿದ್ದಾರೆ. ದೀಪಾವಳಿ ದಿನವೂ ದೇವಿಯ ದರ್ಶನಕ್ಕೆ ಭಕ್ತ ಗಣ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದೆ. ಹೀಗಾಗಿ ದೇವಾಲಯದ ಧರ್ಮದರ್ಶನದ ಸಾಲುಗಳು ಸಂಪೂರ್ಣ ಭರ್ತಿಯಾಗಿವೆ.
ಹಾಸನಾಂಬೆಯ ನೈವೇದ್ಯಕ್ಕಾಗಿ ರಾತ್ರಿ 12 ಗಂಟೆಗೆ ಅರ್ಚಕರು ಬಾಗಿಲು ಮುಚ್ಚಿದ್ದರು. ಮತ್ತೆ ಇಂದು ಬೆಳಗಿನ ಜಾವ 4 ಗಂಟೆಗೆ ಬಾಗಿಲು ತೆರೆದಿದ್ದು ದರ್ಶನ ಆರಂಭಿಸಲಾಗಿದೆ. ದರ್ಶನದ ಸಂಬಂಧ ಹಲವು ಸಮಸ್ಯೆಗಳು ಕೇಳಿಬಂದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಸಿಬ್ಬಂದಿ ನಿನ್ನೆಯಿಂದ ವಿವಿಐಪಿ ಹಾಗೂ ವಿಐಪಿ ಪಾಸ್ಗಳನ್ನು ರದ್ದು ಮಾಡಿ ಎಲ್ಲರಿಗೂ ಸಾಮಾನ್ಯ ದರ್ಶನದಲ್ಲಿ ಕಳುಹಿಸಲಾಗುತ್ತಿದೆ. ನಾಳೆ ಬೆಳಗಿನ ಜಾವ 4 ಗಂಟೆವರೆಗೆ ನಿರಂತವಾಗಿ ದೇವಿ ದರ್ಶನಕ್ಕೆ ಭಕ್ತರಿಗೆ ಸಿಗಲಿದೆ. ಬಳಿಕ ಮಧ್ಯಾಹ್ನ 12 ಗಂಟೆ ನಂತರ ಹಾಸನಾಂಬೆಯ ಗರ್ಭಗುಡಿಯ ಬಾಗಿಲು ಮುಚ್ಚಲಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ