ಆರೋಗ್ಯವಾಗಿರೋಕೆ ಸರಳ ಸೂತ್ರ ಏನು? ಇಂದೇ ಕೊನೇ ಅವಕಾಶ.. ನ್ಯೂಸ್‌ ಫಸ್ಟ್ ಆರೋಗ್ಯ ಹಬ್ಬಕ್ಕೆ ತಪ್ಪದೇ ಬನ್ನಿ!

author-image
admin
Updated On
ಆರೋಗ್ಯವಾಗಿರೋಕೆ ಸರಳ ಸೂತ್ರ ಏನು? ಇಂದೇ ಕೊನೇ ಅವಕಾಶ.. ನ್ಯೂಸ್‌ ಫಸ್ಟ್ ಆರೋಗ್ಯ ಹಬ್ಬಕ್ಕೆ ತಪ್ಪದೇ ಬನ್ನಿ!
Advertisment
  • ಸಣ್ಣ, ಪುಟ್ಟ ಸಮಸ್ಯೆಗಳಿಗೆ ಮನೆಯಲ್ಲೇ ಸಿಗೋ ಮದ್ದು ಏನು?
  • ಸೌಂದರ್ಯ ಕಾಪಾಡಲು ಆಯುರ್ವೇದದ ಮಾರ್ಗೋಪಾಯ
  • ನಿಮ್ಮ ಆರೋಗ್ಯ ಸೂತ್ರಕ್ಕಾಗಿ ನ್ಯೂಸ್ ಫಸ್ಟ್​ನಿಂದ ಅತಿದೊಡ್ಡ ವೇದಿಕೆ

ಬೆಂಗಳೂರಲ್ಲಿ ಆರೋಗ್ಯ ಹಬ್ಬ ನಡೀತಿದೆ. ನಿಮ್ಮ ಎಲ್ಲಾ ಆರೋಗ್ಯ ಸಮಸ್ಯೆಗಳಿಗೂ ಒಂದೇ ಸೂರಿನಡಿ ಪರಿಹಾರ ಸಿಗುವ ವೇದಿಕೆಯನ್ನ ನಿಮಗಾಗಿ ನಿಮ್ಮ ನ್ಯೂಸ್ ಫಸ್ಟ್ ಕಲ್ಪಿಸಿದೆ. ಜನರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ವಿನೂತನ ಹಬ್ಬ ಆಯೋಜಿಸಿದೆ. ಎರಡು ದಿನಗಳ ಕಾಲ ಆರೋಗ್ಯ ಹಬ್ಬ ನಡೆಯಲಿದ್ದು ಇವತ್ತೂ ಕೂಡ ನೀವು ವಿಸಿಟ್‌ ಮಾಡಬಹುದಾಗಿದೆ.

ನ್ಯೂಸ್‌ ಫಸ್ಟ್‌ ಆಯೋಜಿಸಿದೆ ಅತಿದೊಡ್ಡ ಆರೋಗ್ಯ ಹಬ್ಬ!
ಆರೋಗ್ಯ ಹಬ್ಬ.. ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಸಂಭ್ರಮ. ಜನರನ್ನ ಆರೋಗ್ಯಯುತಗೊಳಿಸುವ ಉತ್ಸವ. ಆರೋಗ್ಯವಾಗಿರುವವರನ್ನ ಮತ್ತಷ್ಟು ಆರೋಗ್ಯವಾಗಿಸಿ, ಜಾಗೃತಿಗೊಳಿಸುವ ವಿನೂತನ ಫೆಸ್ಟಿವಲ್​. ಆರೋಗ್ಯ ಹಬ್ಬದ ಮೂಲಕ ನಿಮ್ಮ ಎಲ್ಲಾ ಆರೋಗ್ಯ ಸಮಸ್ಯೆಗಳಿಗೂ ಒಂದೇ ಸೂರಿನಡಿ ಪರಿಹಾರ ಸಿಗುವ ವೇದಿಕೆಯನ್ನ ನಿಮಗಾಗಿ ನಿಮ್ಮ ನ್ಯೂಸ್ ಫಸ್ಟ್ ಕಲ್ಪಿಸಿದೆ.

publive-image

ಬೆಂಗಳೂರಿನ ಅರಮನೆ ಮೈದಾನ ಗೇಟ್‌ ನಂಬರ್‌ 6, ಗ್ರ್ಯಾಂಡ್ ಕ್ಯಾಸಲ್‌ನಲ್ಲಿ ನಡೀತಿರೋ ನ್ಯೂಸ್ ಫಸ್ಟ್ ಆರೋಗ್ಯ ಹಬ್ಬಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ದೀಪ ಬೆಳಗಿಸೋ ಮೂಲಕ ಚಾಲನೆ ನೀಡಿದ್ದಾರೆ. ಬಳಿಕ ಮಾತನಾಡಿದ ಅವರು, ನ್ಯೂಸ್​​ ಫಸ್ಟ್​ಗೆ ಧನ್ಯವಾದ ಸಲ್ಲಿಸಿದ್ರು.. ಇದೇ ವೇಳೆ ವೇದಿಕೆಯಲ್ಲಿ ಹರಿಹರ ಪಂಚಮಸಾಲಿ ಪೀಠದ ಪೀಠಾಧಿಪತಿ, ಶ್ವಾಸ ಗುರು ವಚನಾನಂದ ಸ್ವಾಮೀಜಿ, ಪ್ರಶಾಂತಿ ಆಯುರ್ವೇದಿಕ್ ಸಂಸ್ಥೆಯ ಮುಖ್ಯಸ್ಥ, ಹಿರಿಯ ಆಯುರ್ವೇದ ತಜ್ಞ ಡಾ. ಗಿರಿಧರ್ ಕಜೆ, ನ್ಯೂಸ್ ಫಸ್ಟ್ ಸಿಇಒ ರವಿಕುಮಾರ್ ಮತ್ತು ಎಡಿಟರ್ ಇನ್ ಚೀಫ್ ಮಾರುತಿ ಎಸ್​​ ಹೆಚ್​​​ ಉಪಸ್ಥಿತರಿದ್ದರು.

ಎರಡು ದಿನಗಳ ಕಾಲ ನಡೆಯಲಿರೋ ನ್ಯೂಸ್ ಫಸ್ಟ್ ಆರೋಗ್ಯ ಹಬ್ಬದಲ್ಲಿ ಯೋಗ, ಆಯುರ್ವೇದ, ನ್ಯಾಚುರೋಪತಿ ತಜ್ಞರು ಆರೋಗ್ಯವಾಗಿರಲು ಅನುಸರಿಸಬೇಕಾದ ಟಿಪ್ಸ್ ನೀಡಿದ್ದಾರೆ. ಇವತ್ತು ಕೂಡ ಆರೋಗ್ಯ ಹಬ್ಬ ಮುಂದವರಿದಿದ್ದು, ನಿನ್ನೆಯ ಆರೋಗ್ಯ ಹಬ್ಬಕ್ಕೆ ಭರ್ಜರಿ ರೆಸ್ಪಾನ್ಸ್​​ ಸಿಕ್ಕಿದೆ.

ಇದನ್ನೂ ಓದಿ: ನ್ಯೂಸ್ ಫಸ್ಟ್‌ ‘ಆರೋಗ್ಯ ಹಬ್ಬ’ಕ್ಕೆ ಬಂದ್ರೆ ನಿಮಗೆ 10 ಲಾಭ.. ಏನೇನು? 

ಆರೋಗ್ಯ ಉತ್ಸವದಲ್ಲಿ ಆಯುರ್ವೇದ, ನ್ಯಾಚ್ಯುರೋಪತಿ, ಯೋಗಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ತಜ್ಞರು, ಪರಿಣಿತರು ವಿಶೇಷ ಕಾರ್ಯಾಗಾರಗಳನ್ನ ನಡೆಸಿದ್ದಾರೆ. ಆರೋಗ್ಯವಾಗಿರೋದಕ್ಕೆ ಸರಳ ಜೀವನ ಸೂತ್ರಗಳೇನು ಅನ್ನೋ ಬಗ್ಗೆಯೂ ತಜ್ಞರು ಮಾಹಿತಿಯನ್ನ ನೀಡಿದ್ದಾರೆ. ಸಣ್ಣ, ಪುಟ್ಟ ಸಮಸ್ಯೆಗಳಿಗೆ ಮನೆಯಲ್ಲೇ ಸಿಗುವ ಮದ್ದುಗಳು ಏನು? ಚಿಕ್ಕ ಶಿಸ್ತು, ಸಣ್ಣ ಬದಲಾವಣೆಗಳಿಂದ ಆರೋಗ್ಯಕರ ಜೀವನ ನಡೆಸೋದು ಹೇಗೆ, ಸೌಂದರ್ಯವನ್ನ ಕಾಪಾಡಿಕೊಳ್ಳಲು ಆಯುರ್ವೇದದ ಮಾರ್ಗೋಪಾಯಗಳೇನು? ಎಲ್ಲದರ ಬಗ್ಗೆ ಒಂದೇ ಸೂರಿನಡಿ, ಒಂದೇ ವೇದಿಕೆಯಿಂದ ಮಾಹಿತಿ ಸಿಗುತ್ತಿದೆ.

ಒಂದ್ಕಡೆ ಯೋಗಕ್ಕೆ ಸಂಬಂಧಪಟ್ಟ ವಿನೂತನ ಕಾರ್ಯಕ್ರಮ ನಡೀತಿದ್ರೆ, ಇತ್ತ ಆಯುರ್ವೇದ, ವೆಲ್​ನೆಸ್ ಸೆಂಟರ್ಸ್, ಮಿಲ್ಲೆಟ್ಸ್, ಆರ್ಗ್ಯಾನಿಕ್ ಪ್ರಾಡಕ್ಟ್​ಗಳು ಸೇರಿದಂತೆ ವಿವಿಧ ಸ್ಟಾಲ್ ಗಮನ ಸೆಳೆದಿದೆ. ಒಂದೇ ವೇದಿಕೆಯಲ್ಲಿ ಕರ್ನಾಟಕದ ವಿವಿಧ ಭಾಗದ ರುಚಿಕರ ಊಟವೂ ಇಲ್ಲಿ ಲಭ್ಯವಿದೆ. ಜೊತೆಗೆ ಕರ್ನಾಟಕದ ವಿವಿಧ ಭಾಗಗಳ ಆಹಾರ ರುಚಿಯನ್ನ, ಆರೋಗ್ಯಕರ ಆಹಾರವನ್ನ ಸವಿಯೋದಕ್ಕೂ ಇದೊಂದು ಸದಾವಕಾಶ. ಈಗಾಗಲೇ ಸಾವಿರಾರು ಜನ ಆರೋಗ್ಯ ಹಬ್ಬಕ್ಕೆ ಆಗಮಿಸಿ, ತಮ್ಮ ಆರೋಗ್ಯ ಸಮಸ್ಯೆಗಳು, ಅನುಮಾನಗಳನ್ನ ಪರಿಹರಿಸಿಕೊಳ್ತಿದ್ದಾರೆ.

ಇಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 8 ಗಂಟೆವರೆಗೂ ಆರೋಗ್ಯ ಹಬ್ಬ ಇರಲಿದೆ. ಇದರ ಲಾಭವನ್ನ ನೀವೂ ಪಡೆದುಕೊಳ್ಳಿ. ಆರೋಗ್ಯ ಹಬ್ಬಕ್ಕೆ ನೀವೂ ಬನ್ನಿ.. ನಿಮ್ಮವರನ್ನೂ ಕರೆ ತನ್ನಿ. ಸ್ವಸ್ಥ, ಆರೋಗ್ಯಕರ ಜೀವನ ನಡೆಸುವತ್ತ ಒಂದು ಹೆಜ್ಜೆ ಮುಂದಕ್ಕಿಡಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment