/newsfirstlive-kannada/media/post_attachments/wp-content/uploads/2025/04/pakisatha-Border1.jpg)
ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿ ಬಗ್ಗೆ ಇಡೀ ದೇಶವೇ ಖಂಡನೆ ವ್ಯಕ್ತಪಡಿಸುತ್ತಿದೆ. ಪಹಲ್ಗಾಮ್ನಲ್ಲಿ ನಡೆದ ದಾಳಿಯಲ್ಲಿ ಒಂದಲ್ಲಾ ಎರಡಲ್ಲ ಬರೋಬ್ಬರಿ 26 ಅಮಾಯಕರ ಜೀವ ಬಲಿಯಾಗಿದೆ. ಅದರಲ್ಲೂ ಉಗ್ರರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಭಾರತೀಯ ಸೇನೆ ದಿಟ್ಟ ಹೆಜ್ಜೆಯನ್ನಿಟ್ಟಿದೆ.
ಇದನ್ನೂ ಓದಿ: ಮಂಡ್ಯ ಕಬಡ್ಡಿ ಪಂದ್ಯದ ವೇಳೆ ಘೋರ ದುರಂತ.. ಓರ್ವ ಸಾವು, 13ಕ್ಕೂ ಹೆಚ್ಚು ಮಂದಿಗೆ ಗಾಯ
ಹೀಗಾಗಿ ಸರ್ಕಾರ ಪಾಕಿಸ್ತಾನದ ವಿರುದ್ಧ ಪ್ರತೀಕಾರದ ತಿರಿಸಿಕೊಳ್ಳಲು ಭಾರತದಲ್ಲಿ ವಾಸವಾಗಿರೋ ಪಾಕಿಸ್ತಾನಿಗಳು ವಾಪಸ್ ಹೋಗುವಂತೆ 48 ಗಂಟೆಗಳ ಕಾಲ ಗುಡುವು ಕೊಟ್ಟಿದ್ದಾರೆ. ಹೀಗಾಗಿ ಎರಡು ದೇಶಗಳ ನಡುವಿನ ಅಟ್ಟಾರಿ-ವಾಘಾ ಗಡಿ ಬಂದ್ ಮಾಡಲಾಗಿದೆ.
ಭಾರತದಲ್ಲಿ ನೆಲೆಸಿರೋ, ಸಾರ್ಕ್ ವೀಸಾದಡಿ ಬಂದಿದ್ದವರು ಪಾಕ್ಗೆ ವಾಪಸ್ ಹೋಗಲು ಇಂದು ಕೊನೆಯ ದಿನವಾಗಿದೆ. ಮೆಡಿಕಲ್ ವೀಸಾದಲ್ಲಿ ಬಂದಿದ್ದವರು ಪಾಕ್ಗೆ ವಾಪಸ್ ಹೋಗಲು ಏಪ್ರಿಲ್ 29 ಕೊನೆಯ ದಿನವಾಗಿದೆ. ಉಳಿದ ಎಲ್ಲ ಕೆಟಗರಿಯ ವೀಸಾದಲ್ಲಿ ಬಂದಿದ್ದವರು ಏಪ್ರಿಲ್ 27ರೊಳಗೆ ವಾಪಸ್ ಹೋಗಲೇಬೇಕು. ಒಂದು ವೇಳೆ ಪಾಕ್ಗೆ ವಾಪಸ್ ಹೋಗದೇ ಇದ್ದರೇ, ಅಂಥವರು ಅಕ್ರಮವಾಗಿ ವಾಸಿಸುತ್ತಿರುವ ವಿದೇಶಿಯರು ಅಂತ ಪರಿಗಣನೆ ಮಾಡಲಾಗುತ್ತದೆ. ಅಂಥ ವಿದೇಶಿಯರ ವಿರುದ್ಧ ಹೊಸದಾಗಿ ಜಾರಿಗೆ ತಂದಿರುವ ಕಾಯ್ದೆಯಡಿ ಕ್ರಮಕ್ಕೆ ಮುಂದಾಗಲಿದ್ದಾರೆ.
ಹೊಸದಾಗಿ ಪಾಕ್ನಿಂದ ಬರುವವರಿಗೆ ಭಾರತದಿಂದ ಯಾವುದೇ ವೀಸಾ ನೀಡಲ್ಲ. ಆದ್ರೆ, ಲಾಂಗ್ ಟರ್ಮ್ ವೀಸಾದಡಿ ಬಂದವರು ಸದ್ಯಕ್ಕೆ ಭಾರತದಲ್ಲಿ ವಾಸ ಇರಬಹುದು. ಪಾಕಿಸ್ತಾನದ ಅಲ್ಪಸಂಖ್ಯಾತ ಸಮುದಾಯಕ್ಕೆ ಲಾಂಗ್ ಟರ್ಮ್ ವೀಸಾ ನೀಡಲಾಗಿದೆ. ಪಾಕಿಸ್ತಾನದ ಹಿಂದೂಗಳು, ಬೌದ್ಧರು, ಜೈನರು, ಕ್ರಿಶ್ಚಿಯನ್ನರು, ಸಿಖ್ಖರು, ಪಾರ್ಸಿಗಳಿಗೆ ಲಾಂಗ್ ಟರ್ಮ್ ವೀಸಾ ನೀಡಲಾಗಿದೆ.
ಪಾಕಿಸ್ತಾನಿ ಮಹಿಳೆಯರಾಗಿದ್ದು, ಭಾರತದ ನಾಗರಿಕರನ್ನು ಮದುವೆಯಾಗಿರುವವರಿಗೆ ಲಾಂಗ್ ಟರ್ಮ್ ವೀಸಾ ಭಾರತ ಮೂಲದ ಮಹಿಳೆಯಾಗಿದ್ದು, ಪಾಕ್ ನಾಗರಿಕರನ್ನು ಮದುವೆಯಾಗಿರುವವರು, ಬಳಿಕ ಭಾರತಕ್ಕೆ ವಾಪಸ್ ಆಗಿರುವವರಿಗೆ ಲಾಂಗ್ ಟರ್ಮ್ ವೀಸಾ ನೀಡಲಾಗುವುದು. ಹೀಗೆ ಲಾಂಗ್ ಟರ್ಮ್ ವೀಸಾ ಪಡೆದಿವವರು ಸದ್ಯ ಭಾರತದಲ್ಲಿ ವಾಸ ಮಾಡಲು ತೊಂದರೆ ಇಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ