Advertisment

ಬೆಂಗಳೂರಲ್ಲಿ ಇವತ್ತು ಮತ್ತೆ ಮಳೆಯಾಗುತ್ತಾ? ರಾಜ್ಯದಲ್ಲಿ ಗುಡುಗು, ಮಿಂಚಿನ ಆರ್ಭಟ

author-image
admin
Updated On
ಬೆಂಗಳೂರಲ್ಲಿ ಮತ್ತೆ ಮಳೆ, ಮಳೆ.. ಸ್ವಿಮ್ಮಿಂಗ್ ಪೂಲ್ ನಂತಾದ ರಸ್ತೆಗಳು; ಟ್ರಾಫಿಕ್ ಜಾಮ್ ಎಲ್ಲೆಲ್ಲಿ?
Advertisment
  • ಬರೋಬ್ಬರಿ 5 ತಿಂಗಳ ಬಳಿಕ ಉದ್ಯಾನನಗರಿ ಬೆಂಗಳೂರು ಫುಲ್ ಕೂಲ್‌!
  • ಬೆಂಗಳೂರು ಹಲವು ಭಾಗದಲ್ಲಿ ನಿನ್ನೆಯಿಂದಲೇ ಮಳೆರಾಯ ಸಿಂಚನ ಆರಂಭ
  • ಏಪ್ರಿಲ್ 21ರಿಂದ 23ರವರೆಗೆ ರಾಜ್ಯಾದ್ಯಾಂತ ಮೋಡ ಕವಿದ ವಾತಾವರಣ

ಬೆಂಗಳೂರು: ಕಳೆದೆರಡು ದಿನದಿಂದ ಸಿಲಿಕಾನ್ ಸಿಟಿ ಸ್ವಲ್ಪ ಕೂಲ್ ಆಗಿದೆ. ಮುಂಗಾರು ಪೂರ್ವ ಮಳೆ ಬಿಸಿಲಿಗೆ ಬೆಂದು ಹೋಗಿದ್ದ ಬೆಂಗಳೂರಿಗೆ ತಂಪೆರೆದಿದೆ. ಮೋಡ ಕವಿದ ವಾತಾವರಣದ ಜೊತೆಗೆ ಬಿಸಿ ಗಾಳಿಯ ತಾಪಮಾನವೂ ತಗ್ಗಿ ಹೋಗಿದೆ.

Advertisment

ಬರೋಬ್ಬರಿ 5 ತಿಂಗಳ ಬಳಿಕ ಉದ್ಯಾನನಗರಿಯಲ್ಲಿ ತುಂತುರು ಮಳೆ ಕಾಣಿಸಿಕೊಂಡಿದೆ. ನಿನ್ನೆ, ಮೊನ್ನೆ ಬೆಂಗಳೂರು ಹಲವು ಭಾಗದಲ್ಲಿ ಸಾಧಾರಣ ಮಳೆಯಾಗಿದ್ದು, ಮಳೆ ಹನಿ ನೋಡುತ್ತಿದ್ದಂತೆ ಜನ ಫುಲು ಖುಷಿಯಾಗಿದ್ದಾರೆ.
ವರ್ಷದ ಮೊಟ್ಟ ಮೊದಲ ನೋಡಿ ಸಂತಸಗೊಂಡಿರುವ ಬೆಂಗಳೂರು ಜನರಿಗೆ ಹವಾಮಾನ ಇಲಾಖೆ ಮತ್ತೆ ಗುಡ್‌ನ್ಯೂಸ್ ಕೊಟ್ಟಿದೆ. ಭಾನುವಾರವಾದ ಇಂದು ಬೆಂಗಳೂರಲ್ಲಿ ಭಾರೀ ಪ್ರಮಾಣದ ಮಳೆ ಸುರಿಯುವ ನಿರೀಕ್ಷೆ ಇದೆ. ಮಧ್ಯಾಹ್ನ ನಂತರ ಬೆಂಗಳೂರಿನ ಕೆಲವು ಭಾಗದಲ್ಲಿ 1.2 ಸೆಂಟಿಮೀಟರ್‌ನಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

publive-image

150 ದಿನಗಳ ಬಳಿಕ ಬೆಂಗಳೂರಲ್ಲಿ ಮೊದಲ ಮಳೆಯಾಗಿದೆ. ಇಂದು ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಸಾಧಾರಣ ಮಳೆಯಾಗಲಿದ್ದು, ಏಪ್ರಿಲ್ 21ರಿಂದ 23ರವರೆಗೆ ಮೋಡ ಕವಿದ ವಾತಾವರಣ ಮುಂದುವರಿಯಲಿದೆ ಎನ್ನಲಾಗಿದೆ. ಸಿಲಿಕಾನ್ ಸಿಟಿ ಜನ ಇವತ್ತು ವೀಕೆಂಡ್ ಮೂಡ್‌ನಲ್ಲಿದ್ದಾರೆ. ಇಂದು ಮನೆಯಿಂದ ಹೊರಗೆ ಹೋಗುವವರು ಮಧ್ಯಾಹ್ನದ ಬಳಿಕ ಛತ್ರಿ, ಕೊಡೆಗಳ ಜೊತೆ ಹೋಗುವುದು ಒಳ್ಳೆಯದು.

ಇದನ್ನೂ ಓದಿ:ಅಬ್ಬಾ! ಮಳೆ.. ಮಳೆ.. ಕೊಚ್ಚಿ ಹೋದ ಬೈಕ್‌ಗಳು, ಪಲ್ಟಿಯಾದ ಲಾರಿ; ರಾಜ್ಯದಲ್ಲಿ ಇಂದು ವರುಣಾರ್ಭಟ!

Advertisment

ಬೆಂಗಳೂರು ಅಷ್ಟೇ ಅಲ್ಲ ರಾಜ್ಯದ ಹಲವು ಜಿಲ್ಲೆಯಲ್ಲೂ ಕಳೆದ ಎರಡು ದಿನಗಳಿಂದ ವರುಣನ ಆರ್ಭಟ ಜೋರಾಗಿದೆ. ನಿನ್ನೆಯಷ್ಟೇ ಕಲಬುರ್ಗಿ, ಬೀದರ್, ಬೆಳಗಾವಿ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆಯಾಗಿದೆ. ಇಂದೂ ಕೂಡ ಕರ್ನಾಟಕ ರಾಜ್ಯಕ್ಕೆ ಗುಡುಗು ಮಿಂಚು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ಇನ್ನೂ 3 ದಿನಗಳ ಕಾಲ ರಾಜ್ಯಕ್ಕೆ ವರುಣನ ಕೃಪೆ ಎಂದು ವರದಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment