newsfirstkannada.com

ತೆನೆಯೊಳಗೆ ಅರಳುತ್ತ ಕಮಲ..? ಇಂದು ನಡೆಯುವ ಜೆಡಿಎಸ್​​ ಸಮಾವೇಶದತ್ತ ಇಡೀ ಕರ್ನಾಟಕದ ಚಿತ್ತ!

Share :

Published September 10, 2023 at 6:42am

    ಕಾಂಗ್ರೆಸ್ ನಾಯಕರಿಗೆ ಉತ್ತರ ನೀಡುವ ಕಾಲ ತೀರ ಸಮೀಪ!

    ಇಂದು ಬೆಳಗ್ಗೆ 10:30ಕ್ಕೆ ಮೊಳಗಲಿದೆ ದಳಪತಿಗಳ ಶಂಕನಾದ

    2024ರ ಲೋಕಸಭಾ ಚುನಾವಣೆಗೆ ದಳಪತಿ ಮಾಸ್ಟರ್​ ಪ್ಲಾನ್

ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಚರ್ಚೆ ಒಂದೂವರೆ ದಶಕದ ಬಳಿಕ ಮುನ್ನೆಲೆಗೆ ಬಂದಿದೆ. ಈ ನಡುವೆ ಇವತ್ತು ಮಹತ್ವದ ಸಮಾವೇಶ ಆಯೋಜನೆ ಆಗಿದೆ. ಮೈತ್ರಿ ಸಾಧಕ-ಬಾಧಕಗಳ ಕುರಿತು ಚರ್ಚೆ ಆಗಲಿದ್ದು, ಜೆಡಿಎಸ್ ಸಮಾವೇಶದ ಪಕ್ಷದ ಅಜೆಂಡಾ ಪ್ರಕಟವಾಗಲಿದೆ.

ವಿಧಾನಸಭೆ ಸೋಲು, ದಳದ ತಳಮಟ್ಟದಲ್ಲಿ ತಳಮಳವನ್ನ ಹೆಚ್ಚಿಸಿದೆ. ಭವಿಷ್ಯ ಕಾಣದೇ ಅತಂತ್ರ ಭಾವ ಕಾರ್ಯಕರ್ತ ಪಡೆಯನ್ನ ಆವರಿಸಿದೆ. ತನ್ನ ಪ್ರಾಬಲ್ಯದ ಹಳೇ ಮೈಸೂರು ಭಾಗದಲ್ಲಿ ಈ ಬಾರಿ ಮತದಾರ ಕೈಹಿಡಿಯದ ಕಾರಣ ದಳಪತಿಯನ್ನ ಒಬ್ಬಂಟಿ ಆಗಿಸಿ, ಅಧಿಕಾರದ ಗದ್ದುಗೆಯಿಂದ ದೂರ ಇರಿಸಿದೆ. ಅಸ್ತಿತ್ವದ ಕೊಸರಾಟದಲ್ಲಿ ಸಿಲುಕಿದ ತೆನೆ ಹೊತ್ತ ಮಹಿಳೆ, ಕಮಲ ಮುಡಿಯುವ ಸುಳಿವು ನೀಡ್ತಿದ್ದಾಳೆ. ಡೆಲ್ಲಿ ದರ್ಬಾರ್​​​ನಲ್ಲಿ 2 ಸುತ್ತಿನ ದೋಸ್ತಿ ಮಂಥನ ಬಳಿಕ ಸಿಲಿಕಾನ್​​ ಸಿಟಿಯಲ್ಲಿ ಇವತ್ತು ಫೈನಲ್​​ ಡಿಸಿಷನ್​​ ತಗೊಳ್ಳಲು ಸನ್ನದ್ಧಗೊಳ್ತಿದೆ.

JDS ಸಮಾವೇಶಕ್ಕೆ ಸಿದ್ಧವಾಗುತ್ತಿರೋ ನಲಪಾಡ್ ಪೆವಿಲಿಯನ್

ಏನಾಗುತ್ತೆ ಜೆಡಿಎಸ್-ಬಿಜೆಪಿ ಮೈತ್ರಿ?

ಲೋಕಸಭೆ ಚುನಾವಣೆ ಮೊದಲೆ ರಾಜಕೀಯ ಚಟುವಟಿಕೆಗಳು ಗರಿಗೆದರತೊಡಗಿವೆ.. ಅಲ್ಪ ವಿರಾಮದ ಬಳಿಕ ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ರೀಎಂಟ್ರಿ ಆಗ್ತಿದ್ದಾರೆ.. ಪಕ್ಷದ ಪುನಶ್ಚೇತನಕ್ಕೆ ವರಿಷ್ಠರು ತಂತ್ರ ರೂಪಿಸಿದ್ದು, ಅನುಷ್ಠಾನಕ್ಕೆ ಮುಂದಾಗಿದ್ದಾರೆ. ಪಕ್ಷ ಸಂಘಟನೆ, ಭವಿಷ್ಯದ ಅಸ್ತಿತ್ವಕ್ಕಾಗಿ ಇವತ್ತು ಮಹಾ ಸಮಾವೇಶ ಸೇರ್ತಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಜೆಡಿಎಸ್‌ ಮುಖಂಡರು, ಕಾರ್ಯಕರ್ತರ ಈ ಬೃಹತ್​​​ ಸಮಾವೇಶದತ್ತ ಇಡೀ ರಾಜ್ಯ ಚಿತ್ತವೆ ನೆಟ್ಟಿದೆ.

ಜೆಡಿಎಸ್​ ಶಕ್ತಿ ಪ್ರದರ್ಶನ!

  • ಅರಮನೆ ಮೈದಾನದಲ್ಲಿ ಬೆಳಗ್ಗೆ 10.30ಕ್ಕೆ ಸಮಾವೇಶ
  • ದೇವೇಗೌಡ, ಹೆಚ್​​ಡಿಕೆ, ಇಬ್ರಾಹಿಂ & ಜಿಟಿಡಿ ನೇತೃತ್ವ
  • JDS ಶಾಸಕರು, ಸಂಸದ, ಮಾಜಿ ಸಚಿವ್ರು, ಮಾಜಿ ಸಂಸದರು
  • ಮಾಜಿ ಶಾಸಕರು ಮತ್ತು ಪರಾಜಿತ ಅಭ್ಯರ್ಥಿಗಳು ಭಾಗಿ
  • ಘಟಕಗಳ ಪದಾಧಿಕಾರಿ, ಕಾರ್ಯಕರ್ತರಿಗೆ ಆಹ್ವಾನ
  • ಹತ್ತು ಸಾವಿರಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ

ಅಷ್ಟಕ್ಕೂ ಈ ಸಮಾವೇಶದ ಉದ್ದೇಶ ಏನು ಅನ್ನೋದು ಈಗಾಗಲೇ ಎಲ್ಲವೂ ಸ್ಪಷ್ಟವಾಗಿದೆ. ಆದ್ರೆ, ಮೈತ್ರಿ ಕ್ರಾಂತಿ ಮೊಳಕೆ ಒಡೆದಿದ್ದು, ದಳಪತಿಗಳ ಘೊಷಣೆ ಏನಾಗಿರಲಿದೆ ಅನ್ನೋ ಕುತೂಹಲ ಎಲ್ಲರಿಗೂ ಕಾಡ್ತಿದೆ. ಅಷ್ಟಕ್ಕೂ ಇವತ್ತಿನ ಸಭೆಯಲ್ಲಿ ಏನೆಲ್ಲ ಚರ್ಚೆ ನಡೆಯಲಿದೆ?.

ರಾಜಧಾನಿಯಲ್ಲಿ ದಳ ಸಮಾವೇಶ

  • ಚರ್ಚೆ 1 : ಲೋಕಸಭೆ ಚುನಾವಣೆಗೆ ಈಗಿನಿಂದಲೇ ಸಿದ್ಧತೆ
  • ಚರ್ಚೆ 2 : ತಳಮಟ್ಟದಲ್ಲಿ ಆಪರೇಷನ್ ಹಸ್ತ ತಡೆಯಬೇಕು
  • ಚರ್ಚೆ 3 : ಕಾರ್ಯಕರ್ತರಿಗೆ ಸಂದೇಶ ನೀಡುವ ಹೆಚ್​ಡಿಡಿ
  • ಚರ್ಚೆ 4 : ಜಿಲ್ಲಾ & ತಾಲ್ಲೂಕು ಪಂಚಾಯಿತಿ ಚುನಾವಣೆ
  • ಚರ್ಚೆ 5 : ಬಿಬಿಎಂಪಿ ಚುನಾವಣಾ ಸಿದ್ಧತೆ ಕುರಿತು ಚರ್ಚೆ
  • ಚರ್ಚೆ 6 : ರಾಜ್ಯದಲ್ಲಿ ಬಲಿಷ್ಠ ಪ್ರಾದೇಶಿಕ ಪಕ್ಷ ಕಟ್ಟಲು ಸಂಕಲ್ಪ

ಲೋಕಸಭೆ ಚುನಾವಣೆಗೆ ಈಗಿನಿಂದಲೇ ಸಿದ್ಧತೆಗೆ ಜೆಡಿಎಸ್​​ ಸಜ್ಜಾಗ್ತಿದೆ. ತಳಮಟ್ಟದಲ್ಲಿ ಆಪರೇಷನ್ ಹಸ್ತ ತಡೆಯಬೇಕು ಎಂಬ ಅಜೆಂಡಾವೇ ಸಮಾವೇಶದ ಪ್ರಮುಖ ಉದ್ದೇಶವಾಗಿದೆ. ಇದೇ ಸಮಾವೇಶದಲ್ಲಿ ಕಾರ್ಯಕರ್ತರಿಗೆ ಜೆಡಿಎಸ್​​ ವರಿಷ್ಠ ದೇವೇಗೌಡ್ರು ಸಂದೇಶ ನೀಡಲಿದ್ದಾರೆ. ಅಲ್ಲದೆ, ಮುಂಬರುವ ದಿನಗಳಲ್ಲಿ ಜಿಲ್ಲಾ & ತಾಲ್ಲೂಕು ಪಂಚಾಯಿತಿ ಚುನಾವಣೆ ಎದುರಾಗಲಿದೆ. ಅಲ್ಲದೆ, ಬಿಬಿಎಂಪಿ ಚುನಾವಣಾ ಸಿದ್ಧತೆಗೂ ಸಮಾವೇಶ ವೇದಿಕೆ ಆಗಲಿದೆ. ಈ ಮೂಲಕ ರಾಜ್ಯದಲ್ಲಿ ಬಲಿಷ್ಠ ಪ್ರಾದೇಶಿಕ ಪಕ್ಷ ಕಟ್ಟಲು ಜೆಡಿಎಸ್​​ ಸಂಕಲ್ಪ ತೊಡಲಿದೆ.

ಜೆಡಿಎಸ್ ಸಮಾವೇಶಕ್ಕೆ ಕುರ್ಚಿಗಳನ್ನು ತೆಗೆದುಕೊಂಡು ಹೋಗುತ್ತಿರುವುದು

ರಾಜ್ಯದ ದೃಷ್ಟಿಯಿಂದ ಮೈತ್ರಿ, ದಳಪತಿ ಕೊಟ್ರು ಸುಳಿವು!

ಇನ್ನು, ನಿನ್ನೆ ಈ ಕುರಿತು ಮಾತನಾಡಿದ ಮಾಜಿ ಸಿಎಂ ಹೆಚ್​​ಡಿಕೆ, ಸಮಾವೇಶದಲ್ಲಿ ಕಾರ್ಯಕರ್ತರ ಅಭಿಪ್ರಾಯ ತೆಗೆದುಕೊಳ್ಳಬೇಕಿದೆ. ಕಾಂಗ್ರೆಸ್​ಗೆ ಉತ್ತರ ನೀಡುವ ಕಾಲ ಹತ್ತಿರ ಇದೆ. ಅಂತ ಎಚ್ಚರಿಕೆ ನೀಡಿದ್ರು. ಇನ್ನು, ದೆಹಲಿಗೆ ಹೋಗುವ ಬಗ್ಗೆ ತೀರ್ಮಾನ ಮಾಡಿಲ್ಲ. ಆದ್ರೆ, ರಾಜ್ಯದ ಹಿತದೃಷ್ಟಿಯಿಂದ ಮೈತ್ರಿ ಅನಿವಾರ್ಯ ಅನ್ನೋ ಸ್ಥಿತಿಗೆ ಹೆಚ್​​ಡಿಕೆ ಬಂದಿದ್ದಾರೆ. ಆದ್ರೆ, ಈ ಕುರಿತು ಕಾರ್ಯಕರ್ತರ ಅಭಿಪ್ರಾಯ ಪಡೆದು ಮೈತ್ರಿ ಬಗ್ಗೆ ನಿರ್ಧಾರ ಕೈಗೊಳ್ಳೋದಾಗಿ ತಿಳಿಸಿದ್ದಾರೆ.

ಬಿಜೆಪಿ ಜತೆಗಿನ ಮೈತ್ರಿ ಕುರಿತು ಜೆಡಿಎಸ್‌ ಪ್ರಮುಖರು ಇಂದಿನ ಸಭೆಯಲ್ಲಿ ಸ್ಪಷ್ಟತೆ ನೀಡುವ ಸಾಧ್ಯತೆ ಇದೆ. ಮೈತ್ರಿಯ ಅನಿವಾರ್ಯ, ಭವಿಷ್ಯದಲ್ಲಿ ಬಿಜೆಪಿ ಜತೆಗಿನ ಸಂಬಂಧ ಕುರಿತು ಈ ಸಭೆಯನ್ನ ಬಳಸಿಕೊಳ್ಳಲಿದ್ದಾರೆ. 8 ತಿಂಗಳ ಮುನ್ನವೇ ಜೆಡಿಎಸ್​​ ಇಡ್ತಿರುವ ಈ ಹೆಜ್ಜೆ ರಾಜ್ಯದಲ್ಲಿ ಹೇಗೆ ಪರಿವರ್ತನೆಗೆ ನಾಂದಿ ಹಾಡುತ್ತೆ? ಗ್ಯಾರಂಟಿಗಳ ಮುಂದೇ ತೆನೆ-ಕಮಲ ಜಂಟಿ ಪಡೆ ಅಷ್ಟು ಸಲೀಸಾಗಿ ತಲೆ ಎತ್ತಿ ನಿಲ್ಲುತ್ವಾ ಅನ್ನೋದು ಸದ್ಯಕ್ಕೆ ಮಿಲಿಯನ್​​ ಡಾಲರ್​​​ ಪ್ರಶ್ನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತೆನೆಯೊಳಗೆ ಅರಳುತ್ತ ಕಮಲ..? ಇಂದು ನಡೆಯುವ ಜೆಡಿಎಸ್​​ ಸಮಾವೇಶದತ್ತ ಇಡೀ ಕರ್ನಾಟಕದ ಚಿತ್ತ!

https://newsfirstlive.com/wp-content/uploads/2023/09/JDS_KUMARASWAMY.jpg

Load More