newsfirstkannada.com

‘ಜಾರ್ಖಂಡ್ ಟೈಗರ್’ಗೆ ಇಂದು ಅಗ್ನಿ ಪರೀಕ್ಷೆ.. ಆಪರೇಷನ್ ಕಮಲ ಫೇಲ್ಯೂರ್ ಮಾಡೋದೇ ದೊಡ್ಡ ಚಾಲೆಂಜ್..!

Share :

Published February 5, 2024 at 6:51am

Update February 5, 2024 at 6:52am

    ಜೈಲಲ್ಲಿ ಹೇಮಂತ್ ಸೊರೇನ್, ಚಂಪೈರಿಂದ ವಿಶ್ವಾಸ ಮತಯಾಚನೆ

    ಅಗ್ನಿ ಪರೀಕ್ಷೆಯಲ್ಲಿ ಗೆದ್ದು ಬರ್ತಾರಾ ಜಾರ್ಖಂಡ್​ ಟೈಗರ್​?

    ಹೈದರಾಬಾದ್‌ನಿಂದ ರಾಂಚಿಗೆ ಜಾರ್ಖಂಡ್ ಶಾಸಕರು ವಾಪಸ್

ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್​ ಬಂಧನದ ಬಳಿಕ ರಾಜಕೀಯ ಪಲ್ಲಟಕ್ಕೆ ಕಾರಣವಾಗಿರುವ ಜಾರ್ಖಂಡ್​ನಲ್ಲಿ ಇಂದು ವಿಶ್ವಾಸಮತಯಾಚನೆ ನಡೆಯಲಿದೆ. ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಚಂಪೈ ಸೊರೆನ್​ ಅಗ್ನಿಪರೀಕ್ಷೆಯಲ್ಲಿ ಜಯಿಸಲಿದ್ದಾರಾ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಜಾರ್ಖಂಡ್​ ಮುಕ್ತಿ ಮೋರ್ಚಾ (JMM) ಮತ್ತು ಕಾಂಗ್ರೆಸ್​​ ಮೈತ್ರಿ ಸರ್ಕಾರದ ಸಿಎಂ ಆಗಿ ಜಾರ್ಖಂಡ್​ ಹುಲಿ ಎಂದೇ ಖ್ಯಾತಿಯಾಗಿರುವ ಚಂಪೈ ಸೊರೆನ್​ ಆಯ್ಕೆಯಾಗಿದ್ದಾರೆ. ಫೆಬ್ರವರಿ 5 ರಂದು ವಿಧಾನಸಭೆಯಲ್ಲಿ ಅವರು ತಮ್ಮ ಶಾಸಕರಿಂದ ವಿಶ್ವಾಸ ಸಾಬೀತು ಮಾಡಲು ರಾಜ್ಯಪಾಲರು ಅವಕಾಶ ನೀಡಿದ್ದಾರೆ. ಅದರಂತೆ ಇಂದು ಮತ್ತು ನಾಳೆ ಎರಡು ದಿನಗಳ ವಿಧಾನಸಭೆ ವಿಶೇಷ ಅಧಿವೇಶನ ಕರೆಯಲಾಗಿದೆ. ಇವತ್ತು ಬೆಳಗ್ಗೆ 10 ಗಂಟೆಯಿಂದ ವಿಶ್ವಾಸ ಮತಯಾಚನೆ ನಡೆಯಲಿದೆ ಎಂದು ತಿಳಿದು ಬಂದಿದೆ.

ಜಾರ್ಖಂಡ್​ ಬಲಾಬಲ

  • 81 ಸ್ಥಾನಗಳನ್ನು ಹೊಂದಿರುವ ಜಾರ್ಖಂಡ್​ ವಿಧಾನಸಭೆ
  • ಸರ್ಕಾರ ರಚನೆಗೆ 41 ಸ್ಥಾನಗಳ ಸಂಖ್ಯಾಬಲ ಬೇಕು
  • JMM ಮೈತ್ರಿಕೂಟ 41ಕ್ಕಿಂತ ಹೆಚ್ಚು ಶಾಸಕರ ಬಲ ಹೊಂದಿದೆ
  • ಎನ್​ಡಿಎ ಮಿತ್ರಪಕ್ಷಗಳು 32 ಸ್ಥಾನಗಳನ್ನು ಹೊಂದಿವೆ
  • ಕೇವಲ 9 ಸ್ಥಾನ ಕಡಿಮೆ ಇರುವುದರಿಂದ ಆಪರೇಷನ್​ ಭೀತಿ

81 ಸ್ಥಾನಗಳನ್ನು ಹೊಂದಿರುವ ಜಾರ್ಖಂಡ್​ ವಿಧಾನಸಭೆಯಲ್ಲಿ ಸರ್ಕಾರ ರಚನೆಗೆ 41 ಸ್ಥಾನಗಳ ಸಂಖ್ಯಾಬಲ ಬೇಕು. JMM ಮೈತ್ರಿಕೂಟ 41ಕ್ಕಿಂತ ಹೆಚ್ಚು ಶಾಸಕರ ಬಲ ಹೊಂದಿದೆ. ಎನ್​ಡಿಎ ಮಿತ್ರಪಕ್ಷಗಳು 32 ಸ್ಥಾನಗಳನ್ನು ಹೊಂದಿವೆ. ಕೇವಲ 9 ಸ್ಥಾನ ಕಡಿಮೆ ಇರುವುದರಿಂದ ಜೆಎಂಎಂ ಮತ್ತು ಕಾಂಗ್ರೆಸ್​ಗೆ ಆಪರೇಷನ್​ ಕಮಲದ ಭೀತಿ ಎದುರಾಗಿ ರೆಸಾರ್ಟ್​ ಸೇರಿದ್ರು.

ಹೊಸದಾಗಿ ರಚನೆಯಾದ ಚಂಪೈ ಸೋರೆನ್ ಸರ್ಕಾರವು ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚಿಸಲಿದೆ. ಆಪರೇಷನ್ ಕಮಲ​ ಭೀತಿಯಿಂದ ಕಳೆದ ಮೂರು ದಿನಗಳಿಂದ ಹೈದರಾಬಾದ್‌ನ ರೆಸಾರ್ಟ್‌ನಲ್ಲಿ ತಂಗಿದ್ದ ಜಾರ್ಖಂಡ್‌ನ ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ ನೇತೃತ್ವದ ಮೈತ್ರಿಕೂಟದ ಶಾಸಕರು ರಾಂಚಿಗೆ ವಾಪಸ್​ ಆಗಿದ್ದಾರೆ. ಹೈದ್ರಾಬಾದ್​ನಿಂದ ಶಾಸಕರು ವಾಪಸ್​ ಆಗ್ತಿದ್ದಂತೆ ನೂತನ ಸಿಎಂ ಚಂಪಾಯ್​ ಸೊರೇನ್​, ಸರ್ಕಿಟ್​ ಹೌಸ್​ನಲ್ಲಿ ಶಾಸಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ರು. ಸದ್ಯ ಮೈತ್ರಿಕೂಟದ ಶಾಸಕರೆಲ್ಲ ಬಿಗಿ ಭದ್ರತೆಯಲ್ಲಿದ್ದು, ಇವತ್ತು ನಡೆಯಲಿರುವ ವಿಶ್ವಾಸ ಮತಯಾಚನೆಗೆ ನೇರವಾಗಿ ಆಗಮಿಸಲಿದ್ದಾರೆ.

ಒಟ್ಟಾರೆ. ಹೇಮಂತ್ ಸೊರೆನ್​ ಬಂಧನದ ಬಳಿಕ ಜಾರ್ಖಂಡ್​ನಲ್ಲಿ ರಾಜಕೀಯ ಮೇಲಾಟಗಳು ಜೋರಾಗಿವೆ. ಜಾರ್ಖಂಡ್​ ಟೈಗರ್​ ಎಂದೇ ಖ್ಯಾತಿ ಪಡೆದಿರುವ ಚಂಪಾಯ್​ ಸೊರೇನ್ ಸರ್ಕಾರಕ್ಕೆ ಬಹುಮತವಿದ್ದು, ವಿಶ್ವಾಸ ಮತಯುದ್ಧ ಗೆಲ್ಲುವ ಸಾಧ್ಯತೆ ದಟ್ಟವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಜಾರ್ಖಂಡ್ ಟೈಗರ್’ಗೆ ಇಂದು ಅಗ್ನಿ ಪರೀಕ್ಷೆ.. ಆಪರೇಷನ್ ಕಮಲ ಫೇಲ್ಯೂರ್ ಮಾಡೋದೇ ದೊಡ್ಡ ಚಾಲೆಂಜ್..!

https://newsfirstlive.com/wp-content/uploads/2024/02/CHAMPAI-SOREN.jpg

Load More