ಕಾತುರದಿಂದ ಕಾಯುತ್ತಿದ್ದ ವೀಕ್ಷಕರಿಗೆ ಖುಷಿ ಪಡುವ ದಿನ
ಇದೇ ಸೆಪ್ಟೆಂಬರ್ 29 ರಿಂದ ಬಿಗ್ಬಾಸ್ ಗ್ರ್ಯಾಂಡ್ ಓಪನಿಂಗ್
ಬಿಗ್ಬಾಸ್ ಸೀಸನ್ 11ರಿಂದ ಇಂದು ಬಗ್ಗೆ ಅಪ್ಡೇಟ್ ಸಿಕ್ಕಿದೆ
ಕನ್ನಡದ ದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ಬಂದೇ ಬಿಡ್ತು. ಇದೇ ಸೆಪ್ಟೆಂಬರ್ 29ರಿಂದ ಬಿಗ್ಬಾಸ್ ಗ್ರ್ಯಾಂಡ್ ಓಪನಿಂಗ್ ಇದೆ. ಇಷ್ಟು ದಿನ ಕಾತುರದಿಂದ ಕಾಯುತ್ತಿದ್ದ ವೀಕ್ಷಕರಿಗೆ ಅಂತೂ ಇಂತೂ ಬಿಗ್ಬಾಸ್ ಬಗ್ಗೆ ಒಂದೊಂದಾಗಿ ಅಪ್ಡೇಟ್ ಗೊತ್ತಾಗುತ್ತಿದೆ. ಇದೀಗ ಬಿಗ್ಬಾಸ್ ಸೀಸನ್ 11ರ ಬಗ್ಗೆ ಅಪ್ಡೇಟ್ ಸಿಕ್ಕಿದೆ.
ಇದನ್ನೂ ಓದಿ: ಬೆನ್ನಿಗೆ ಚೂರಿ ಹಾಕೋರು ಮುಂದೆ ಸ್ನೇಹಿತರಾಗಬಹುದು ಎಂದ ಕಿಚ್ಚ.. ಈ ಮಾತನ್ನು ಹೇಳಿದ್ದು ಮತ್ಯಾರಿಗೂ ಅಲ್ಲ..!
ಹೌದು, ಬಹುನಿರೀಕ್ಷಿತ ಕನ್ನಡದ ಬಿಗ್ಬಾಸ್ ಸೀಸನ್ 11ಕ್ಕೆ ದಿನಗಣನೆ ಶುರುವಾಗಿದೆ. ಹೊಸ ಸೀಸನ್ ಪ್ರಾರಂಭಕ್ಕೆ ಬಿಗ್ಬಾಸ್ ತಂಡ ತೆರೆ ಮರೆ ಹಿಂದೆ ಎಲ್ಲ ರೀತಿಯಲ್ಲೂ ತಯಾರಿ ನಡೆಯುತ್ತಿದೆ. ಈಗ ಬಿಗ್ಬಾಸ್ ತಂಡದಿಂದ ಸುದ್ದಿಗೋಷ್ಠಿ ಆಯೋಜಿಸಲಾಗಿದೆ. ಇಂದು 3 ಗಂಟೆ ಸುಮಾರಿಗೆ ಬಿಗ್ಬಾಸ್ ಸೀಸನ್ 11ರ ಬಗ್ಗೆ ಅಧಿಕೃತ ಚಾಲನೆ ಸಿಗಲಿದೆ. ಈ ಸುದ್ದಿಗೋಷ್ಠಿಯಲ್ಲಿ ಕಿಚ್ಚು ಸುದೀಪ್ ಭಾಗಿಯಾಗಲಿದ್ದಾರೆ.
ಮೊದಲ ಸೀಸನ್ನಿಂದ ಹಿಡಿದು ಹತ್ತು ಸೀಸನ್ಗಳು ಯಶಸ್ವಿಯಾಗಿ ಪ್ರಸಾರ ಕಂಡಿದೆ. ಇದೀಗ ಬಿಗ್ಬಾಸ್ ಶೋ 11ನೇ ಸೀಸನ್ಗೆ ಕಾಲಿಟ್ಟಿದೆ. ಈಗಾಗಲೇ ಪ್ರೋಮೋಗಳ ಮೂಲಕ ಬಿಗ್ಬಾಸ್ ಸೀಸನ್ 11ರ ಮೇಲೆ ಸಾಕಷ್ಟು ಕುತೂಹಲ ಮೂಡಿಸಿದೆ. ಜೊತೆಗೆ ಈ ಬಾರಿ ಕಿಚ್ಚ ಸುದೀಪ್ ಕಾರ್ಯಕ್ರಮ ನಿರೂಪಣೆ ಮಾಡ್ತಿಲ್ಲ ಅನ್ನೋ ಸುದ್ದಿಯೂ ಹರಿದಾಡಿತ್ತು. ಆ ನಂತರದಲ್ಲಿ ಪ್ರೋಮೋದಲ್ಲಿ ಕಿಚ್ಚ ಆಗಮನವಾಗಿದೆ. ಇಂದು ಬಿಗ್ಬಾಸ್ ಸೀಸನ್ 11ಕ್ಕೆ ಅಧಿಕೃತ ಚಾಲನೆ ಸಿಗಲಿದೆ.
ಈ ಬಾರಿಯ ಬಿಗ್ಬಾಸ್ಗೆ ಯಾರೆಲ್ಲಾ ಸ್ಪರ್ಧಿಗಳು ಬರಲಿದ್ದಾರೆ ಎಂದು ವೀಕ್ಷಕರು ಕಾಯುತ್ತಿದ್ದಾರೆ. ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಕೆಲವು ಸ್ಟಾರ್ ನಟ, ನಟಿಯರು, ಸೋಷಿಯಲ್ ಮೀಡಿಯಾ ಸ್ಟಾರ್ಗಳ ಪಟ್ಟಿಗಳಲ್ಲಿ ಕೆಲವೊಂದು ಹೆಸರುಗಳು ಹರಿದಾಡುತ್ತಿವೆ. ಅವುಗಳು ಎಷ್ಟರ ಮಟ್ಟಿಗೆ ಸತ್ಯ ಎಂದು ಇನ್ನೂ ಕೆಲವೇ ಕೆಲವು ದಿನಗಳಲ್ಲಿ ಉತ್ತರ ಸಿಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ