/newsfirstlive-kannada/media/post_attachments/wp-content/uploads/2024/09/Bigg-Boss-11-Sudeep-3.jpg)
ಕನ್ನಡದ ದೊಡ್ಡ ರಿಯಾಲಿಟಿ ಶೋ ಅಂದ್ರೆ ಅದು ಬಿಗ್ಬಾಸ್. ಈಗಾಗಲೇ 11 ಸೀಸನ್ಗಳು ಯಶಸ್ವಿಯಾಗಿ ಪ್ರಸಾರ ಕಂಡಿವೆ. ಇದೀಗ ಬಿಗ್ಬಾಸ್ ಸೀಸನ್ 12 ಬಂದೇ ಬಿಡ್ತು. ಈಗಾಗಲೇ ಸೀಸನ್ 11 ಮುಕ್ತಾಯಗೊಂಡು 5 ತಿಂಗಳು ಪೂರ್ಣಗೊಂಡಿದೆ. ಮುಂದಿನ ಸೀಸನ್ಗಾಗಿ ಏನಾದ್ರೂ ಮಾಹಿತಿ ಸಿಗುತ್ತಾ ಅಂತ ಇಷ್ಟು ದಿನ ಕಾತರದಿಂದ ಕಾಯುತ್ತಿದ್ದ ವೀಕ್ಷಕರಿಗೆ ಅಂತೂ ಇಂತೂ ಅಪ್ಡೇಟ್ ಕೊಡೋದಕ್ಕೆ ಮುಂದಾಗಿದೆ ತಂಡ.
ಇದನ್ನೂ ಓದಿ: ಗಿಚ್ಚಿ ಗಿಲಿಗಿಲಿ ಮಾನಸಗೆ ಸ್ಪೆಷಲ್ ಗಿಫ್ಟ್ ಕೊಟ್ಟ ಹಾಸ್ಯನಟ ರಾಘವೇಂದ್ರ.. ಏನದು ನೀವೇ ನೋಡಿ!
ಹೌದು, ಜೂನ್ 30 ಅಂದ್ರೆ ಇಂದು ಸಂಜೆ 4 ಗಂಟೆಗೆ ಬಿಗ್ಬಾಸ್ ತಂಡ ಪ್ರೆಸ್ ಮೀಟ್ ಇಟ್ಟುಕೊಂಡಿದೆ. ಕಲರ್ಸ್ ಕನ್ನಡ ವಾಹಿನಿ ಕಡೆಯಿಂದ ಎಂ.ಜಿ ರಸ್ತೆಯ ತಾಜ್ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿಯನ್ನು ಆಯೋಜನೆ ಮಾಡಿದೆ. ಅಲ್ಲದೇ ಬಿಗ್ಬಾಸ್ ಸೀಸನ್ 12 ಕುರಿತು ಬಿಗ್ ಬಾಸ್ ತಂಡ ಮಾಹಿತಿ ನೀಡಲಿದೆ. ಈ ವೇಳೆ ಕಿಚ್ಚ ಸುದೀಪ್ ಈ ಬಾರಿ ಹೋಸ್ಟ್ ಮಾಡಲಿದ್ದಾರಾ ಅನ್ನೋ ಕುತೂಹಲಕ್ಕೆ ಇಂದು ಉತ್ತರ ಸಿಗಲಿದೆ. ಆದರೆ ಇದನ್ನು ಹೊರತುಪಡಿಸಿ, ಸ್ಪರ್ಧಿಗಳ ಬಗ್ಗೆ ಯಾವುದೇ ಮಾಹಿತಿ ಸಿಗುವುದಿಲ್ಲ.
ಈ ಬಾರಿಯ ಬಿಗ್ಬಾಸ್ ಸೀಸನ್ 12ಕ್ಕೆ ಯಾರೆಲ್ಲಾ ಸ್ಪರ್ಧಿಗಳು ಬರಲಿದ್ದಾರೆ ಎಂದು ವೀಕ್ಷಕರು ಕಾಯುತ್ತಿದ್ದಾರೆ. ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಕೆಲವು ಸ್ಟಾರ್ ನಟ, ನಟಿಯರು, ಸೋಷಿಯಲ್ ಮೀಡಿಯಾ ಸ್ಟಾರ್ಗಳ ಪಟ್ಟಿಗಳಲ್ಲಿ ಕೆಲವೊಂದು ಹೆಸರುಗಳು ಹರಿದಾಡುತ್ತಿವೆ. ಅವುಗಳು ಎಷ್ಟರ ಮಟ್ಟಿಗೆ ಸತ್ಯ ಎಂದು ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ