/newsfirstlive-kannada/media/post_attachments/wp-content/uploads/2024/08/KAS-EXAM.jpg)
ಬೆಂಗಳೂರು: KAS ಪರೀಕ್ಷೆ ಮುಂದೂಡುವಂತೆ ಆಗ್ರಹಿಸಿ ಇಂದು ಆಕಾಂಕ್ಷಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ನಗರದ ಫ್ರೀಡಂ ಪಾರ್ಕ್ನಲ್ಲಿ ಕೆಎಎಸ್ ಆಕಾಂಕ್ಷಿಗಳು ಹೋರಾಟ ಮಾಡಲು ಮುಂದಾಗಿದ್ದಾರೆ. ಆಲ್ ಕರ್ನಾಟಕ ಸ್ಟೇಟ್ ಸ್ಟೂಡೆಂಟ್ಸ್ ಅಸೋಸಿಯೇಷನ್ನಿಂದ ಬೆಳಗ್ಗೆ 10 ಗಂಟೆಗೆ ಪ್ರತಿಭಟನೆ ನಡೆಸಲು ರೆಡಿಯಾಗಿದ್ದಾರೆ. ಈ ಹೋರಾಟಕ್ಕೆ ಕೆಲವು ಬಿಜೆಪಿ ನಾಯಕರು ಸಾಥ್ ಕೊಡುವ ನಿರೀಕ್ಷೆ ಇದೆ.
ಇದನ್ನೂ ಓದಿ: ಉಡುಪಿ ರೀಲ್ಸ್ ಹೆಂಡತಿಯ ಕೊಲೆ ಕೇಸ್‌ಗೆ ಭಯಾನಕ ಟ್ವಿಸ್ಟ್.. ಮಹಿಳೆಯ 2ನೇ ಗಂಡ ಬಾಯ್ಬಿಟ್ಟಿದ್ದೇನು?
KAS ಆಕಾಂಕ್ಷಿಗಳು ಬೇಡಿಕೆಗಳೇನು?
- ಆಗಸ್ಟ್ 27ರಂದು ನಿಗದಿಯಾಗಿರುವ KAS ಪ್ರಿಲಿಮ್ಸ್ ಪರೀಕ್ಷೆ ಮುಂದೂಡಬೇಕು
- ಕೆಲಸದ ದಿನ ಯಾವುದೇ ಕಾರಣಕ್ಕೂ ಪರೀಕ್ಷೆ ನಡೆಸಬಾರದು
- ಇದರಿಂದ ಕೇಂದ್ರ ಸರ್ಕಾರದ ನೌಕರರು, ಖಾಸಗಿ ನೌಕರರಿಗೆ ರಜೆ ಸಿಗಲ್ಲ
- ಕೆಸೆಟ್ ಎಕ್ಸಾಂ ಬರೆಯುತ್ತಿರುವವರು ಅವಕಾಶ ವಂಚಿತರಾಗ್ತಾರೆ
- ಪರೀಕ್ಷಾ ಕೇಂದ್ರಗಳು 400 ಕಿ.ಮೀಟರ್ ದೂರ ಇದೆ
- 2017-18ನೇ ಬ್ಯಾಚ್ ವಿದ್ಯಾರ್ಥಿಗಳಿಗೆ ಅವಕಾಶ ಇದೆ. ಆದರೆ ಓದಲು ಸಮಯ ಇಲ್ಲ
- ಪ್ರಶ್ನೆ ಪತ್ರಿಕೆ ಬಗ್ಗೆ ಸಾಕಷ್ಟು ಅನುಮಾನ ವ್ಯಕ್ತವಾಗಿದೆ
- ಪ್ರಶ್ನೆ ಪತ್ರಿಕೆಯನ್ನು ತಿಂಗಳ ಮುಂಚೆ ಮುದ್ರಣ ಮಾಡಿ ಇಟ್ಟುಕೊಂಡಿದ್ದಾರೆ
- ಪ್ರಶ್ನೆ ಪತ್ರಿಕೆ ತಲುಪಿಸುವ ಮಾರ್ಗದ ಮಾಹಿತಿ ಕೂಡ ಸೋರಿಕೆ ಆಗಿದೆ
- ಈ ಪರೀಕ್ಷೆಯಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮ ನಡೆಯುವ ಸಾಧ್ಯತೆ
ಈ ಹಿಂದೆ ಆಗಸ್ಟ್ 25ಕ್ಕೆ ಕೆಎಎಸ್ ಪ್ರಿಲಿಮ್ಸ್ ಪರೀಕ್ಷೆ ನಿಗದಿಯಾಗಿತ್ತು. ಆದರೆ ಮತ್ತೆ ಕೆಎಎಸ್ ಪ್ರಿಲಿಮ್ಸ್ ಪರೀಕ್ಷೆ ಮುಂದೂಡಿಕೆಯಾಗುತ್ತಾ ಎಂಬ ಗೊಂದಲ ಸೃಷ್ಟಿಯಾಗಿದೆ. ಆದರೆ ಅದೇ ದಿನ ಐಬಿಪಿಎಸ್ ಪರೀಕ್ಷೆ ನಡೆಯುತ್ತಿದೆ. ಕೆಎಎಸ್ ನಮಗೆ ಪರೀಕ್ಷೆ ಬರೆಯೋಕೆ ಕಷ್ಟ ಆಗುತ್ತೆ ಎಂದು ಆಕಾಂಕ್ಷಿಗಳು ಹೇಳುತ್ತಿದ್ದಾರೆ.
ಇದನ್ನೂ ಓದಿ:ನಮಸ್ಕಾರ ದೇವ್ರು.. ಡಾಕ್ಟರ್ ಬ್ರೋಗೆ ಇದೆಂಥಾ ವರ! ಇದೇ ನೋಡಿ ಅತಿ ಹೆಚ್ಚು ವೀಕ್ಷಣೆ ಕಂಡ ವಿಡಿಯೋ!
ಈ ಹಿನ್ನೆಲೆ ಖುದ್ದು ಸಿಎಂ ಕೆಪಿಎಸ್ಸಿಗೆ ದಿನಾಂಕ ಬದಲಿಸುವಂತೆ ಸೂಚಿಸಿದ್ದರು. ಅದಾದ ನಂತರ ಆಗಸ್ಟ್ 25ರ ಬದಲು ಆಗಸ್ಟ್ 27ಕ್ಕೆ ಪರೀಕ್ಷೆ ನಡೆಸಲು ಕೆಪಿಎಸ್ಸಿ ನಿರ್ಧರಿಸಿತು. ಅದಕ್ಕೂ ಮುಂಚೆ ಎರಡು ಸಲ ಕೆಎಎಸ್ ಪ್ರಿಲಿಮ್ಸ್ ಪರೀಕ್ಷೆ ಮುಂದೂಡಿಕೆಯಾಗಿತ್ತು. ಆದರೀಗ ಘೋಷಿಸಿರುವ ದಿನದಂದೇ ಪರೀಕ್ಷೆ ನಡೆಸಲು ಮುಂದಾಗಿದೆ. ಈ ಕಡೆ ಪರೀಕ್ಷೆ ಮುಂದೂಡಿ ಅಂತ ಆಕಾಂಕ್ಷಿಗಳು ಪ್ರತಿಭಟನೆ ನಡೆಸ್ತಿದ್ದಾರೆ. ಆಕಾಂಕ್ಷಿಗಳ ಹಿತಾಸಕ್ತಿಯಿಂದ ಮತ್ತೆ ಪರೀಕ್ಷೆ ಮುಂದೂಡುತ್ತಾ ಎಂಬ ಚರ್ಚೆ ಶುರುವಾಗಿದೆ. ಈ ಸಲ ನಿಗದಿಯಾದ ದಿನದಂದೇ ಪರೀಕ್ಷೆ ನಡೆಸುತ್ತಾ ಎಂದು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ