newsfirstkannada.com

ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ.. ನಟಿ ಅಮೂಲ್ಯ ಮಕ್ಕಳ ಮುದ್ದಾದ ಫೋಟೋಸ್ ಹೀಗಿವೆ​.!

Share :

Published September 6, 2023 at 12:59pm

Update September 6, 2023 at 1:08pm

    ಇಂದು ದೇಶದ್ಯಾಂತ ಸಂಭ್ರಮ, ಸಡಗರದ ಶ್ರೀಕೃಷ್ಣ ಜನ್ಮಾಷ್ಟಮಿ

    ಮಕ್ಕಳನ್ನು ಥೇಟ್​ ಶ್ರೀಕೃಷ್ಣನಂತೆ ರೆಡಿ ಮಾಡಿದ ನಟಿ ಅಮೂಲ್ಯ

    ಒಂದಾ, ಎರಡಾ ಪೋಟೋಗಳು.. ಎಷ್ಟು ಮುದ್ದಾಗಿವೆ ಗೊತ್ತಾ?

ದೇಶದ್ಯಾಂತ ಶ್ರೀಕೃಷ್ಣ ಜನ್ಮಾಷ್ಟಮಿಯ ಸಡಗರ, ಸಂಭ್ರಮ ಎಲ್ಲೆಡೆ ಕಳೆಗಟ್ಟಿದ್ದು ಭಕ್ತರು ಶ್ರೀಕೃಷ್ಣನ ಸನ್ನಿಧಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಈ ಎಲ್ಲದರ ನಡುವೆ ಪೋಷಕರು ತಮ್ಮ ಮಕ್ಕಳನ್ನು ಜನ್ಮಾಷ್ಟಮಿಯಂದು ಕೃಷ್ಣ-ರಾಧೆಯಂತೆ ಸಿಂಗಾರ ಮಾಡಿ ಖುಷಿ ಪಡುತ್ತಾರೆ. ಅದರಂತೆ ಸ್ಯಾಂಡಲ್​ವುಡ್​ನ ಕ್ಯೂಟ್​ ನಟಿ ಎಂದೇ ಖ್ಯಾತಿ ಪಡೆದಿದ್ದ ಅಮೂಲ್ಯ ಅವರು ತಮ್ಮ ಮುದ್ದಾದ ಟ್ವಿನ್ಸ್​ ಮಕ್ಕಳಿಗೆ ಶ್ರೀಕೃಷ್ಣನ ರೀತಿ ಕಾಣುವಂತೆ ರೆಡಿ ಮಾಡಿ ವಿಧ, ವಿಧವಾದ ಪೋಟೋಗಳನ್ನು ಕ್ಲಿಕ್ ಮಾಡಿ ಹಂಚಿಕೊಂಡಿದ್ದಾರೆ.

ಭಗವಾನ್ ಶ್ರೀ ಕೃಷ್ಣನ ಆರಾಧನೆಗೆ ಸಂಬಂಧಿಸಿದ ಪ್ರಮುಖ ಹಬ್ಬವೆಂದರೆ ಅದು ಕೃಷ್ಣ ಜನ್ಮಾಷ್ಟಮಿ. ಈ ದಿನದಂದು ವಿಶೇಷವಾಗಿ ಕೃಷ್ಣನ ಭಕ್ತರು ಕೃಷ್ಣನಿಗೆ ಸಂಬಂಧಿಸಿದ ದೇವಾಲಯಕ್ಕೆ, ಯಾತ್ರಾ ಸ್ಥಳಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. ಶ್ರೀಕೃಷ್ಣನು ಹುಟ್ಟಿದ ದಿನವನ್ನೇ ಕೃಷ್ಣ ಜನ್ಮಾಷ್ಟಮಿ ಎಂದು ಆಚರಣೆ ಮಾಡಲಾಗುತ್ತದೆ. ಈ ದಿನವನ್ನು ಭಾರತ ಸೇರಿದಂತೆ ವಿಶ್ವದ್ಯಾಂತ ಇರೋ ಕೃಷ್ಣ ಭಕ್ತರು ವೈಭವದಿಂದ ಆಚರಣೆಯಲ್ಲಿ ತೊಡಗುತ್ತಾರೆ.

ನಟಿ ಅಮೂಲ್ಯ ಅವರು ತಮ್ಮ ಅವಳಿ ಮಕ್ಕಳಿಗೆ ಶ್ರೀಕೃಷ್ಣನಂತೆ ಸಿಂಗಾರ ಮಾಡಿ ಮುದ್ದಾಡುತ್ತಿದ್ದಾರೆ. ಈ ವೇಳೆ ಒಂದು ಮಗು ಕ್ಯಾಮೆರಾ ನೋಡಿ ನಗುತ್ತಿದ್ದರೆ, ಇನ್ನೊಂದು ಮಗು ಕೊಳಲನ್ನು ಹಿಡಿದುಕೊಂಡಿದೆ.

ಸ್ಯಾಂಡಲ್​ವುಡ್​ನ ನಟಿ ತನ್ನ ಮಕ್ಕಳಿಂದ ಕರುವಿಗೆ ಮೇವನ್ನು ತಿನ್ನಿಸುತ್ತಿರುವ ದೃಶ್ಯಗಳನ್ನು ಕಾಣಬಹುದು. ಮೊದಲ ಫೋಟೋದಲ್ಲಿ ಕರುವನ್ನು ಮಗು ಮುಟ್ಟಿ ಖುಷಿ ವ್ಯಕ್ತಪಡಿಸಿದೆ.

ಶ್ರೀಕೃಷ್ಣ ಜನ್ಮಾಷ್ಟಮಿಯ ಸಡಗರಕ್ಕೆ ಅದ್ಭುತವಾಗಿ ಸಿದ್ಧ ಮಾಡಿರುವ ಸ್ಥಳದಲ್ಲಿ ಕೂತು ಅಮೂಲ್ಯ ಅವರು ತನ್ನ ಒಂದು ಮಗುವಿನ ಜೊತೆ ಫೋಟೋಗೆ ಫೋಸ್ ಕೊಟ್ಟಿರುವ ಕ್ಷಣ.

ಕೃಷ್ಣನಂತೆ ರೆಡಿ ಮಾಡಿರುವ ಮುದ್ದಾದ ತನ್ನ ಮಗನಿಗೆ ಅಮೂಲ್ಯ ಅವರು ಬೆಣ್ಣೆಯನ್ನು ತಿನ್ನಿಸುವಂತೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಮಗು ಫೋಟೋದಲ್ಲಿ ಕೊಳಲನ್ನು ಹಿಡಿದು ಅಮ್ಮನ ಮೇಲೆ ಕುಳಿತುಕೊಂಡಿದೆ.

ಅಮೂಲ್ಯ ಅವರು ಅವಳಿ ಮಕ್ಕಳ ಎತ್ತುಕೊಂಡು ಕುಳಿತುಕೊಂಡಿದ್ದು ಒಂದು ಮಗುವಿಗೆ ಮುದ್ದು ಮಾಡುತ್ತಿದ್ದಾರೆ. ಪಕ್ಕದಲ್ಲಿ ಎರಡು ಬೆಣ್ಣೆಯನ್ನು ತುಂಬಿದ ಬಿಂದಿಗೆ ಹಾಗೂ ಎರುಡು ಹಸುಗಳು ಮೇಯಿತ್ತಿರುವ ಫೋಟೋ ಸೊಗಸಾಗಿ ಬಂದಿದೆ.

ಮಕ್ಕಳೊಂದಿಗೆ ಹೇಗಿದೆ ಫೋಟೋಗಳು ಎಂದು ಹೇಳುವಂತೆ ಉಲ್ಲಾಸಭರಿತವಾಗಿ ಅಮೂಲ್ಯ ಮಕ್ಕಳೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ.. ನಟಿ ಅಮೂಲ್ಯ ಮಕ್ಕಳ ಮುದ್ದಾದ ಫೋಟೋಸ್ ಹೀಗಿವೆ​.!

https://newsfirstlive.com/wp-content/uploads/2023/09/AMULYA.jpg

Load More