newsfirstkannada.com

KRS, ಕಬಿನಿ ಡ್ಯಾಂ ನೀರಿನ ಮಟ್ಟ ಹೇಗಿದೆ.. ಈ ಜಲಾಶಯದಿಂದ ಶೀಘ್ರದಲ್ಲೇ ಶುಭಸುದ್ದಿ..!

Share :

Published July 6, 2024 at 9:46am

    ಪಕ್ಕದ ರಾಜ್ಯದಲ್ಲಿ ಧಾರಾಕಾರ ಮಳೆ, ರಾಜ್ಯಕ್ಕೆ ಹರಿದು ಬಂದ ನೀರು

    KRS ಡ್ಯಾಂನ ಒಳ ಹರಿವು ಏರಿಕೆ ಆಗಿದೆಯಾ, ಇಳಿಕೆ ಆಗಿದೆಯಾ?

    ಕಬಿನಿ ಜಲಾಶಯ ಭರ್ತಿಗೆ ಉಳಿದಿರುವುದು ಇನ್ನು ಎಷ್ಟು ಅಡಿ?

ಮಂಡ್ಯ/ಮೈಸೂರು: ಮಲೆನಾಡು, ಕರಾವಳಿ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಆದರೆ ಇತ್ತ ಕಾವೇರಿ ಜಲಾನಯನ ಪ್ರದೇಶದಲ್ಲಿ ವರುಣರಾಯನ ಆರ್ಭಟ ಕೊಂಚ ತಗ್ಗಿದೆ. ಇದರಿಂದ ಕೆಆರ್‌ಎಸ್ ಡ್ಯಾಂನ ಒಳಹರಿವು ಮತ್ತಷ್ಟು ಇಳಿಕೆಯಾಗಿದೆ. ಮತ್ತೊಂದು ಕಡೆ ಮೈಸೂರಿನ ಕಬಿನಿ ಜಲಾಶಯ ಭರ್ತಿಗೆ ಕೇವಲ ಮೂರೇ 3 ಅಡಿ ಮಾತ್ರ ಬಾಕಿ ಉಳಿದಿದೆ.

ಇದನ್ನೂ ಓದಿ: ಚಾರ್ಮಾಡಿ ಘಾಟ್​ನಲ್ಲಿ ಧುಮ್ಮಿಕ್ಕುತ್ತಿರುವ ಜಲಪಾತಗಳು.. ಕಾಫಿನಾಡಿನತ್ತ ಪ್ರವಾಸಿಗರ ಪಯಾಣ

ಕೆಆರ್‌ಎಸ್ ಡ್ಯಾಂನ ಒಳಹರಿವು ಇಳಿಕೆಯಾಗಿದ್ದು ನಿನ್ನೆ 9,686 ಕ್ಯೂಸೆಕ್ ಇದ್ದ ಒಳ ಹರಿವು ಇಂದು 6,185 ಕ್ಯೂಸೆಕ್​ಗೆ ಇಳಿಕೆಯಾಗಿದೆ. 124.80 ಅಡಿ ಗರಿಷ್ಠ ಮಟ್ಟದ ಡ್ಯಾಂನಲ್ಲಿ ಸದ್ಯ 100.90 ಅಡಿ ನೀರು ಸಂಗ್ರಹವಾಗಿದೆ. 49.452 ಟಿಎಂಸಿ ಸಾಮರ್ಥ್ಯ ಹೊಂದಿರುವ ಡ್ಯಾಂನಲ್ಲಿ 23.523 ಟಿಎಂಸಿ ನೀರು ಸಂಗ್ರಹವಾಗಿದೆ. ಕುಡಿಯುವ ನೀರಿಗಾಗಿ 544 ಕ್ಯೂಸೆಕ್ ನೀರನ್ನ ಡ್ಯಾಂನಿಂದ ಹೊರಕ್ಕೆ ಬಿಡಲಾಗಿದೆ.

ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ

  • ಗರಿಷ್ಠ ಮಟ್ಟ- 124.80 ಅಡಿ
  • ಇಂದಿನ ಮಟ್ಟ- 100.90 ಅಡಿ
  • ಗರಿಷ್ಠ ಸಾಂದ್ರತೆ- 49.452 ಟಿಎಂಸಿ
  • ಇಂದಿನ ಸಾಂದ್ರತೆ- 23.523 ಟಿಎಂಸಿ
  • ಒಳ ಹರಿವು- 6,185 ಕ್ಯೂಸೆಕ್
  • ಹೊರ ಹರಿವು- 544 ಕ್ಯೂಸೆಕ್

ಇದನ್ನೂ ಓದಿ: ಕೆಲವ್ರಿಗೆ ನನ್ನ ನೆನಪಿಸಿಕೊಳ್ಳದಿದ್ರೆ ನಿದ್ದೆಯೂ ಬರಲ್ಲ, ತಲೆಯೂ ಓಡಲ್ಲ -ಕುಮಾರಸ್ವಾಮಿ-ಡಿಕೆಶಿ ಮಧ್ಯೆ ವಾಗ್ಯುದ್ಧ ಹೆಂಗಿದೆ ಗೊತ್ತಾ?

ಕೆಆರ್​ಎಸ್​ ಜಲಾಶಯದಲ್ಲಿ ನೀರಿನಮಟ್ಟ ಇಳಿಕೆ ಕಂಡ್ರೆ, ಮೈಸೂರಿನ ಹೆಚ್.ಡಿ ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮ ಬಳಿಯ ಕಬಿನಿ ಡ್ಯಾಂ ಇನ್ನೇನು ಭರ್ತಿಯಾಗಲು ಕೇವಲ 3 ಅಡಿಗಳು ಮಾತ್ರ ಬಾಕಿ ಇದೆ. ಈ ವರ್ಷ ಇಡೀ ರಾಜ್ಯದಲ್ಲೇ ಮೊದಲು ತುಂಬುವ ಜಲಾಶಯ ಕಬಿನಿಯಾಗಲಿದೆ. ಕೇರಳದ ವೈನಾಡು ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಬಿನಿ ಜಲಾಶಯದ ಒಳಹರಿವಿನಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ. ಶೀರ್ಘದಲ್ಲೇ ಕಬಿನಿ ಮೈದುಂಬಲಿದ್ದಾಳೆ.

ಇಂದಿನ ಕಬಿನಿ ಜಲಾಶಯದ ನೀರಿನ ಮಟ್ಟ

  • ಗರಿಷ್ಠ ಮಟ್ಟ: 2,284 ಅಡಿ
  • ಇಂದಿನ ಮಟ್ಟ: 2,281 ಅಡಿ
  • ಒಳಹರಿವು: 5,509 ಕ್ಯೂಸೆಕ್
  • ಹೊರಹರಿವು: 4,000 ಕ್ಯೂಸೆಕ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

KRS, ಕಬಿನಿ ಡ್ಯಾಂ ನೀರಿನ ಮಟ್ಟ ಹೇಗಿದೆ.. ಈ ಜಲಾಶಯದಿಂದ ಶೀಘ್ರದಲ್ಲೇ ಶುಭಸುದ್ದಿ..!

https://newsfirstlive.com/wp-content/uploads/2024/07/KABINI_DAM_2.jpg

Load More