/newsfirstlive-kannada/media/post_attachments/wp-content/uploads/2023/07/KRS-dam-2.jpg)
ಮಂಡ್ಯ: ಕಾವೇರಿ ಜೀವ ನದಿ. ಕನ್ನಡಿಗರ ಬಾಯಾರಿಕೆ ನೀಗಿಸುವ ನದಿ. ಮಳೆ ಬಂದರೆ ಮಾತ್ರ ಈ ನದಿ ತುಂಬುತ್ತದೆ. ಜಲಾಶಯ ಭರ್ತಿಯಾಗುತ್ತದೆ. ಆದರೆ ಕೆಲ ದಿನಗಳಿಂದ ಮಳೆ ಕೊಂಚ ಅಪರೂಪವಾಗಿದೆ. ಇನ್ನು ಕಾವೇರಿ ಜಲಾನಯನ ಪ್ರದೇಶದಲ್ಲಿ ಆಗೊಮ್ಮೆ ಈಗೊಮ್ಮೆ ಮಳೆ ಬಂದು ಹೋಗುತ್ತಿದೆ.
ರೈತರು ಮಳೆಯನ್ನು ಅವಲಂಬಿತರಾಗಿದ್ದಾರೆ. ಇತ್ತ ಕಾವೇರಿ ಜಲಾನಯನ ಪ್ರದೇಶದಲ್ಲೂ ರೈತರು ಮಳೆಯನ್ನೇ ನಂಬಿದ್ದಾರೆ. ಕಾರಣ ಸರಿಯಾಗಿ ಮಳೆ ಬಿದ್ದ ಕೆಆರ್​​ಎಸ್​​ ಜಲಾಶಯ ತುಂಬುತ್ತದೆ. ಆದರೆ ಮಳೆ ಕೈ ಕೊಟ್ಟರೆ ಬರಗಾಲ ಖಂಡಿತಾ. ಆದರೆ ಇಂದು ಕೃಷ್ಣರಾಜ ಸಾಗರ ಜಲಾಶಯದಲ್ಲಿ ನೀರಿನ ಮಟ್ಟ ಎಷ್ಟಿದೆ ಎಂದು ಗಮನಿಸುವುದಾದರೆ..
ಇಂದಿನ ಕೆಆರ್‌ಎಸ್ ನೀರಿನ ಮಟ್ಟ
ಗರಿಷ್ಠ ಮಟ್ಟ - 124.80 ಅಡಿ.
ಇಂದಿನ ಮಟ್ಟ - 87.40 ಅಡಿ.
ಗರಿಷ್ಠ ಸಾಂದ್ರತೆ - 49.452 ಟಿಎಂಸಿ
ಇಂದಿನ ಸಾಂದ್ರತೆ - 14.447 ಟಿಎಂಸಿ
ಒಳ ಹರಿವು - 1,210 ಕ್ಯೂಸೆಕ್
ಹೊರ ಹರಿವು - 467 ಕ್ಯೂಸೆಕ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us