ಮಳೆಯನ್ನೇ ನಂಬಿ ಕುಳಿತ ರೈತರು.. ಇಂದು KRS ಡ್ಯಾಂನ ನೀರಿನ ಮಟ್ಟ, ಒಳ ಹರಿವು ಎಷ್ಟಿದೆ?

author-image
AS Harshith
Updated On
ಕಾವೇರಿದ ಕಾವೇರಿ ಕಿಚ್ಚು; ನಾಳೆ ಬಂದ್​​; ಕಾಂಗ್ರೆಸ್​ ಸರ್ಕಾರದ ವಿರುದ್ಧ ಬೀದಿಗಿಳಿದ ಸುಮಲತಾ ಅಂಬರೀಶ್​
Advertisment
  • ಕೆಆರ್​ಎಸ್​ ಡ್ಯಾಂನ ಇಂದಿನ ಸಾಮರ್ಥ್ಯ ಎಷ್ಟಿದೆ?
  • ಇಂದು ಕೃಷ್ಣರಾಜ ಸಾಗರದ ಹೊರ ಹರಿವು ಎಷ್ಟಿದೆ?
  • KRS ಡ್ಯಾಂನ ನೀರಿನ ಮಟ್ಟದ ಬಗ್ಗೆ ಮಾಹಿತಿ ಇಲ್ಲಿದೆ

ಮಂಡ್ಯ: ರಾಜ್ಯದ ಹಲವೆಡೆ ಮಳೆ ಸುರಿಯುತ್ತಿದೆ. ಇನ್ನು ಕೆಲವೆಡೆ ಮಳೆಯೇ ಅಪರೂಪವಾಗಿದೆ. ಬಿತ್ತನೆ ಹಾಕಿ ರೈತರು ಮಳೆಗಾಗಿ ಕಾಯುವ ಪರಿಸ್ಥಿತಿ ಉಂಟಾಗಿದೆ. ಇನ್ನು ಕೆಲವೆಡೆ ಮಳೆ ಬಾರದೆ ಜನರು ಮೂಢನಂಬಿಕೆಗೆ ಮರಳಾಗುತ್ತಿದ್ದಾರೆ.

ಮಳೆ ಬಂದರೆ ರಾಜ್ಯದ ಅಣೆಕಟ್ಟುಗಳು ತುಂಬುತ್ತವೆ. ಆದರೆ ಮಳೆ ಅಪರೂಪವಾದರೆ ರೈತರು ಕಂಗಲಾಗುತ್ತದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಕೊಂಚ ಮಳೆಯಾಗುತ್ತಿದ್ದು, ಕೆಆರ್​ಎಸ್​ ಡ್ಯಾಂನಲ್ಲಿ ನಿನ್ನೆಗಿಂತ ಇಂದು ನೀರಿನ ಒಳಹರಿವು ಹೆಚ್ಚಾಗಿದೆ. ಅಂದಹಾಗೆಯೇ ಕೃಷ್ಣರಾಜ ಸಾಗರ ಅಣೆಕಟ್ಟಿನ ನೀರಿನ ಮಟ್ಟವನ್ನು ಗಮನಿಸುವುದಾದರೆ..

ಇಂದಿನ ಕೆಆರ್‌ಎಸ್ ನೀರಿನ ಮಟ್ಟ

ಗರಿಷ್ಠ ಮಟ್ಟ - 124.80 ಅಡಿ.
ಇಂದಿನ ಮಟ್ಟ - 87.65 ಅಡಿ.
ಗರಿಷ್ಠ ಸಾಮರ್ಥ್ಯ - 49.452 ಟಿಎಂಸಿ
ಇಂದಿನ ಸಾಮರ್ಥ್ಯ- 14.586 ಟಿಎಂಸಿ
ಒಳ ಹರಿವು - 1,279 ಕ್ಯೂಸೆಕ್
ಹೊರ ಹರಿವು - 984 ಕ್ಯೂಸೆಕ್

ಇದನ್ನೂ ಓದಿ: ಸೆರೆಯಾದ ಚಿರತೆ ಜೊತೆಗೆ ಸೆಲ್ಫಿ ತೆಗೆಯೋ ಹುಚ್ಚಾಟ! ದಾಳಿಗೆ ಒಳಗಾಗಿ ಆಸ್ಪತ್ರೆ ಸೇರಿದ

ನಿನ್ನೆ ಕೆಆರ್‌ಎಸ್ ನೀರಿನ ಮಟ್ಟ ಎಷ್ಟಿತ್ತು?

ಗರಿಷ್ಠ ಮಟ್ಟ – 124.80 ಅಡಿ.
ಇಂದಿನ ಮಟ್ಟ – 87.62 ಅಡಿ.
ಗರಿಷ್ಠ ಸಾಮರ್ಥ್ಯ – 49.452 ಟಿಎಂಸಿ
ಇಂದಿನ ಸಾಮರ್ಥ್ಯ- 14.569 ಟಿಎಂಸಿ
ಒಳ ಹರಿವು – 1,214 ಕ್ಯೂಸೆಕ್
ಹೊರ ಹರಿವು – 983 ಕ್ಯೂಸೆಕ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment