ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಇಂದು ಸಮಾರೋಪ.. ಬಳ್ಳಾರಿಯಲ್ಲಿ ಮುಂದಿನ ನುಡಿ ಜಾತ್ರೆ!

author-image
Bheemappa
Updated On
ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಇಂದು ಸಮಾರೋಪ.. ಬಳ್ಳಾರಿಯಲ್ಲಿ ಮುಂದಿನ ನುಡಿ ಜಾತ್ರೆ!
Advertisment
  • ಮುಂದಿನ 88ನೇ ಸಾಹಿತ್ಯ ಸಮ್ಮೇಳನ ನಡೆಯುವ ಜಿಲ್ಲೆ ಯಾವುದು?
  • ಸಮ್ಮೇಳನ 3ನೇ ದಿನ, ಭಾರೀ ಪ್ರಮಾಣದಲ್ಲಿ ಜನ ಸೇರುವ ಸಾಧ್ಯತೆ
  • ಸಮಾರೋಪದ ಕಡೆಯಲ್ಲಿ ಸಮ್ಮೇಳನದ ನಿರ್ಣಯ ಮಂಡನೆ ಆಗುತ್ತೆ

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕಳೆದ ಎರಡು ದಿನಗಳಿಂದ ಸಕ್ಕರೆನಾಡಿನಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಇಂದು ಕೊನೆ ದಿನ ಜೊತೆಗೆ ಭಾನುವಾರ ಆಗಿದ್ದರಿಂದ ಭಾರೀ ಮಟ್ಟದಲ್ಲಿ ಸಾಹಿತ್ಯಾಸಕ್ತರು ಸೇರುವ ನಿರೀಕ್ಷೆ ಇದೆ.

ಡಿಸೆಂಬರ್ 20 ಹಾಗೂ 21 ರಂದು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದಾಖಲೆ ಪ್ರಮಾಣದ ಜನರು ಆಮಿಸಿದ್ದರು. 4 ಲಕ್ಷಕ್ಕೂ ಅಧಿಕ ಜನರು ಅಕ್ಷರ ಜಾತ್ರೆಯಲ್ಲಿ ಭಾಗಿಯಾಗಿ ತಮ್ಮ ಖುಷಿ ಹಂಚಿಕೊಂಡಿದ್ದರು. ಇಂದು ಕೊನೆ ದಿನವಾದ ಹಿನ್ನೆಲೆಯಲ್ಲಿ ರಾಜ್ಯದ ಬೇರೆ ಬೇರೆ ಭಾಗಗಳಿಂದ 2 ಲಕ್ಷಕ್ಕೂ ಹೆಚ್ಚಿನ ಸಾಹಿತ್ಯಾಸಕ್ತರು ಸೇರುವ ಸಾಧ್ಯತೆ ಇದೆ. ಇವತ್ತು ಒಟ್ಟು 7 ವಿಚಾರಗೋಷ್ಠಿ, ಒಂದು ಕವಿಗೋಷ್ಠಿ‌ ಹಾಗೂ ಬಹಿರಂಗ ಅಧಿವೇಶನ ಇರಲಿದೆ. ಅಲ್ಲದೇ ಸಾಹಿತ್ಯ ಅಭಿಮಾನಿಗಳಿಗೆ ಕಡೆಯ ದಿನ ಭರ್ಜರಿ ಆತಿಥ್ಯ ಕೂಡ ಇರುತ್ತದೆ.

publive-image

ಸಂಜೆ ಸಮಾರೋಪ ಸಮಾರಂಭ

ಇವತ್ತು ಬಹಿರಂಗ ಅಧಿವೇಶನ ಮುಗಿದ ಬಳಿಕ ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದ ಸ್ವಾಮೀಜಿ ಸಾನಿಧ್ಯದಲ್ಲಿ ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಈ ಸಮಾರೋಪ ಸಮಾರಂಭದ ಕಡೆಯಲ್ಲಿ ಸಮ್ಮೇಳನದ ನಿರ್ಣಯ ಮಂಡನೆ ಮಾಡಲಿದ್ದಾರೆ.

ನಿನ್ನೆ ನಡೆದ ಎಲ್ಲಾ ಜಿಲ್ಲೆಗಳ ಕಸಾಪ ಪ್ರತಿನಿಧಿಗಳ ಸಭೆಯಲ್ಲಿ ಮುಂದಿನ ಅಂದರೆ 88ನೇ ಸಾಹಿತ್ಯ ಸಮ್ಮೇಳನವನ್ನು ಗಡಿನಾಡು ಬಳ್ಳಾರಿಯಲ್ಲಿ ನಡೆಸಲು ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಗಿದೆ.

ಈ ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಹೆಚ್​​.ಡಿ ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಸೇರಿದಂತೆ ಹಲವು ಸಚಿವರು, ಶಾಸಕರು ಭಾಗಿಯಾಗಲಿದ್ದಾರೆ. ಸಮ್ಮೇಳನಾಧ್ಯಕ್ಷ ನಾಡೋಜ ಡಾ.ಗೊ.ರು ಚನ್ನಬಸಪ್ಪ, ಕಸಾಪ ಅಧ್ಯಕ್ಷ ಡಾ.ಮಹೇಶ್ ಜೋಶಿ ಉಪಸ್ಥಿತಿ ಇರಲಿದ್ದಾರೆ.

ಇಂದಿನ ಕಾರ್ಯಕ್ರಮಗಳು ಏನೇನು..?

publive-image

ಪ್ರಧಾನ ವೇದಿಕೆಯಲ್ಲಿ ವಿಚಾರಗೋಷ್ಠಿ

  • ಬೆಳ್ಳಗೆ 9.30ಕ್ಕೆ ಜಾಗತೀಕ ನೆಲೆಯಲ್ಲಿ ಕನ್ನಡ ಕಟ್ಟುವ ಬಗೆ ವಿಚಾರಗೋಷ್ಠಿ
  • ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗ ಅಮರ್​ನಾಥ್ ಗೌಡ ಅಧ್ಯಕ್ಷತೆಯಲ್ಲಿ ಗೋಷ್ಠಿ
  • ಬೆಳಗ್ಗೆ 11 ಗಂಟೆಗೆ ಸ್ತ್ರೀ ಎಂದರೇ ಅಷ್ಟೇ ಸಾಕೆ? ಎನ್ನುವ ಗೋಷ್ಠಿ ಇದೆ
  • ಇದಕ್ಕೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅಧ್ಯಕ್ಷತೆ
  • ಬೆಳಗ್ಗೆ 12.30ಕ್ಕೆ ಸರ್ಕಾರಿ ಶಾಲೆಗಳ ಸಬಲೀಕರಣ: ಸಾಧ್ಯತೆ ಮತ್ತು ಸವಾಲು
  • ಕನ್ನಡ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ್ ಬಿಳಿಮಲೆ ಅಧ್ಯಕ್ಷತೆ
  • ಮಧ್ಯಾಹ್ನ 2.10ಕ್ಕೆ ವಿವಿಧ ಕ್ಷೇತ್ರದ ಸಾಧಕರಿಗೆ ಸಮ್ಮೇಳದಲ್ಲಿ ಸನ್ಮಾನ
  • 46 ಸಾಧಕರಿಗೆ ಸನ್ಮಾನಿಸಿ ಗೌರವ ಸಮರ್ಪಣೆ ಮಾಡಲಾಗುತ್ತದೆ

ಇದನ್ನೂ ಓದಿ:20 ಸಿಕ್ಸ್,​ ಕೇವಲ 97 ಎಸೆತಗಳಲ್ಲಿ ಡಬಲ್​ ಹಂಡ್ರೆಡ್​​.. ಡೆಲ್ಲಿ ಪ್ಲೇಯರ್​ ಬ್ಯಾಟಿಂಗ್​​ಗೆ ಕ್ರಿಕೆಟ್ ಲೋಕ ಫಿದಾ

publive-image

ಸಮಾನಂತರ ವೇದಿಕೆ-1

  • ಬೆಳಗ್ಗೆ 9.30 ಕ್ಕೆ ಪುನಶ್ಚೇತನ ಆಗಬೇಕಿರುವ ಸಾಹಿತ್ಯ ಪ್ರಕಾರಗಳು
  • ಹಿರಿಯ ಲೇಖಕಿ ಭಾನು ಮುಷ್ತಾಕ್ ಅಧ್ಯಕ್ಷತೆಯಲ್ಲಿ ಗೋಷ್ಠಿ
  • ಬೆಳಗ್ಗೆ 11 ಗಂಟೆಗೆ ಸಮಾನತೆ ಸಾರಿದ ದಾರ್ಶನಿಕರು ಕುರಿತ ಗೋಷ್ಠಿ
  • ಸಾಂಸ್ಕೃತಿಕ ಚಿಂತಕ ಶಂಕರ್ ದೇವನೂರು ಅಧ್ಯಕ್ಷತೆ
  • ಬೆಳಗ್ಗೆ 12.30ಕ್ಕೆ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ: 2022 ಪರಿಣಾಮಕಾರಿ ಅನುಷ್ಠಾನ
  • ಕಾನೂನು ಆಯೋಗದ ಸದಸ್ಯ ನ್ಯಾ.ಅಶೋಕ ನಿಜಗಣ್ಣನವರ ಅಧ್ಯಕ್ಷತೆ

ಸಮಾನಂತರ ವೇದಿಕೆ- 2

  • ಬೆಳಗ್ಗೆ 9.30ಕ್ಕೆ ಹೊಸ ತಲೆಮಾರಿನ ಸಾಹಿತ್ಯ
  • ಖ್ಯಾತ ವಿಮರ್ಶಕ ವಿಕ್ರಮ್ ವಿಸಾಜಿ ಅಧ್ಯಕ್ಷತೆ
  • ಬೆಳಗ್ಗೆ 11 ಗಂಟೆಗೆ ಸಂಕೀರ್ಣ ನೆಲೆಗಳು- 2
  • ಪ್ರಾಧ್ಯಾಪಕ ಡಾ.ಡೊಮೆನಿಕ್ ಅಧ್ಯಕ್ಷತೆ
  • 12 ಗಂಟೆಗೆ ಡಾ.ಮಾನಸ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment