/newsfirstlive-kannada/media/post_attachments/wp-content/uploads/2024/07/Money.jpg)
ಇಂದು ಮೇ ಒಂದು. ದೇಶದ ಆರ್ಥಿಕತೆ ಹಾಗೂ ವಿವಿಧ ವಲಯಗಳಲ್ಲಿ ಪರಿಣಾಮಕಾರಿ ಬದಲಾವಣೆಗಳು ಆಗಿವೆ. ಕೆಲವು ಬದಲಾವಣೆಗಳು ಜನರ ಜೇಬುಗೆ ಕತ್ತರಿ ಹಾಕಿದರೆ, ಇನ್ನೂ ಕೆಲವು ನಿರ್ಧಾರಗಳು ಅನುಕೂಲ ಆಗಲಿದೆ.
ಇಂದಿನಿಂದ ಏನೆಲ್ಲ ಬದಲಾವಣೆ..?
ATM ವಿತ್ಡ್ರಾ ಶುಲ್ಕ ಏರಿಕೆ: ಇಂದಿನಿಂದ ಎಟಿಂಎಂಗಳಲ್ಲಿ ವಿತ್ ಡ್ರಾ ಮಿತಿ ಶುಲ್ಕ ಹೆಚ್ಚಾಗಲಿದೆ. ಉಚಿತ ಮಿತಿಯನ್ನು ಮೀರಿದ ನಂತರ ಪ್ರತಿ ವಹಿವಾಟಿಗೆ 2 ರೂಪಾಯಿ ಶುಲ್ಕ ಹೆಚ್ಚಳದೊಂದಿಗೆ 23 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ.
ವಾಣಿಜ್ಯ ವಾಹನ ಬೆಲೆ ಏರಿಕೆ
10 ಲಕ್ಷ ರೂಪಾಯಿ ಒಳಗಿನ ಯೆಲ್ಲೋ ಬೋರ್ಡ್ ವಾಹನಗಳ ಮೇಲೆ ಕರ್ನಾಟಕ ಸರ್ಕಾರ ಶೇಕಡಾ 5 ರಷ್ಟು ಜೀವಿತಾವಧಿ ತೆರಿಗೆ ಹಾಕಿದೆ. 25 ರೂಪಾಯಿಗಿಂತ ಅಧಿಕ ಮೌಲ್ಯದ ಎಲೆಕ್ಟ್ರಿಕ್ ವಾಣಿಜ್ಯ ವಾಹನಕ್ಕೆ ಶೇಕಡಾ 10 ರಷ್ಟು ತೆರಿಗೆ ಬೀಳಲಿದೆ.
ಸಾಲದ ಬಡ್ಡಿ ಇಳಿಕೆ..
ಆರ್ಬಿಐ ಸದ್ಯ ರೆಪೋ ದರವನ್ನು ಶೇಕಡಾ 0.25ಕ್ಕೆ ಇಳಿಸಿದೆ. ಇದರಿಂದ ಬ್ಯಾಂಕ್ಗಳುಸಾಲದ ಬಡ್ಡಿದರ ಮತ್ತು ಠೇವಣಿಗಳ ಮೇಲಿನ ಬಡ್ಡಿದರ ಕಡಿತ ಮಾಡಿವೆ.
ರಾಜ್ಯಕ್ಕೆ ಒಂದು ಪ್ರಾದೇಶಿಕ ಬ್ಯಾಂಕ್
ಇಂದಿನಿಂದ ಒಂದು ರಾಜ್ಯಕ್ಕೆ ಒಂದು ಪ್ರಾದೇಶಿಕ ಬ್ಯಾಂಕ್ ಇರಲಿದೆ. ಅದರಂತೆ ರಾಜ್ಯದ ಕರ್ನಾಟಕ ಬ್ಯಾಂಕ್ ಮತ್ತು ಕರ್ನಾಟಕ ಗ್ರಾಮೀಣ ಬ್ಯಾಂಕ್ ವಿಲಿನಗೊಳ್ಳುತ್ತಿವೆ. ಪ್ರಸ್ತುತ ದೇಶದಲ್ಲಿರುವ 43 ಪ್ರಾದೇಶಿಕ ಬ್ಯಾಂಕ್ಗಳು ವಿಲಿನಗೊಂಡು 28ಕ್ಕೆ ಇಳಿಕೆ ಆಗುತ್ತಿವೆ.
ಇದನ್ನೂ ಓದಿ: ಲಾಸ್ಯ ನಾಗರಾಜ್ ಕುಟುಂಬದಲ್ಲಿ ಕಲಹ.. ಅಮ್ಮನ ಮೇಲೆ ಚಿಕ್ಕಮ್ಮನಿಂದ ಮಾರಣಾಂತಿಕ ಹಲ್ಲೆ ಎಂದ ನಟಿ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ