newsfirstkannada.com

ಹನುಮಧ್ವಜ ತೆರವು ವಿವಾದ; ಇಂದು ಮಂಡ್ಯ, ಕೆರಗೋಡು ಗ್ರಾಮ ಬಂದ್

Share :

Published February 9, 2024 at 7:01am

  ಸಿಲ್ವರ್ ಜುಬಿಲಿ ಪಾರ್ಕ್‌ನಿಂದ ಡಿಸಿ ಕಚೇರಿವರೆಗೆ ಪ್ರತಿಭಟನೆ ಱಲಿ

  ಪ್ರತಿಭಟನೆಯಲ್ಲಿ ಬಿಜೆಪಿ ಹಾಗೂ ಹಿಂದೂಪರ ಕಾರ್ಯರ್ತರು ಭಾಗಿ

  ಹನುಮಧ್ವಜ ಪ್ರತಿಭಟನೆಯಿಂದ ಜೆಡಿಎಸ್ ಹಿಂದೆ ಸರಿದಿದ್ದು ನಿಜನಾ?

ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ತೆರವು ಕಿಚ್ಚು ತಣ್ಣಗಾಗುವ ಲಕ್ಷಣ ಕಾಣ್ತಿಲ್ಲ. ಬಾವುಟ ತೆರವು ಮಾಡಿದ ಕ್ಷಣದಿಂದಲೂ ಬೂದಿಮುಚ್ಚಿದ ಕೆಂಡದಂತಿರೋ ಕೆರಗೋಡು ಗ್ರಾಮದಲ್ಲಿ ಇಂದು ಪ್ರತಿಭಟನೆಯ ಬಿಸಿ ತಟ್ಟಲಿದೆ. ಇದಕ್ಕೆ ಕಾರಣ ಹಿಂದೂಪರ ಸಂಘಟನೆಗಳು ಮಂಡ್ಯ ನಗರ ಹಾಗೂ ಕೆರಗೋಡು ಗ್ರಾಮ ಬಂದ್​ಗೆ ಕರೆ ಕೊಟ್ಟಿರೋದು.

ಇದು ಹನುಮ ಧ್ವಜ ಹೋರಾಟದಿಂದ ವಾರದ ಹಿಂದೆ ಕೆರಗೋಡದಲ್ಲಿ ಹೊತ್ತಿಕೊಂಡಿದ್ದ ಆಕ್ರೋಶ ಇನ್ನೂ ಹಾಗೆಯೇ ಇದೆ. ಜನವರಿ 28 ರಂದು ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ವಿಚಾರಕ್ಕೆ ಗಲಾಟೆ ಆಗಿತ್ತು. ಬಳಿಕ ಆವೇಶ ತಗ್ಗಿದ್ದರೂ ಆಕ್ರೋಶ ತಗ್ಗಿರಲಿಲ್ಲ. ಇಂದು ಮಂಡ್ಯ ನಗರ ಹಾಗೂ ಕೆರಗೋಡು ಬಂದ್ ಆಗಲಿದೆ.

ಬಂದ್​ನ ಬಿಸಿ ಸಂಜೆ 6 ಗಂಟೆಯವರೆಗೆ ಇರಲಿದೆ

ಭಜರಂಗದಳ, ವಿಶ್ವ ಹಿಂದೂಪರಿಷತ್ ಹಾಗೂ ಶ್ರೀರಾಮ ಭಜನಾ ಮಂಡಳಿ ಮಂಡ್ಯ ನಗರ ಹಾಗೂ ಕೆರಗೋಡು ಗ್ರಾಮ ಬಂದ್​ಗೆ ಮುಂದಾಗಿವೆ. ಸಂಜೆ 6 ಗಂಟೆಯವರೆಗೂ ಈ ಬಂದ್​ನ ಬಿಸಿ ಇರಲಿದೆ. ಮೊದಲು ಪ್ರತಿಭಟನೆ ನಡೆಸಲಿರೋ ಹಿಂದೂ ಪರ ಕಾರ್ಯಕರ್ತರು, ಬಳಿಕ ಅಲ್ಲಿಂದ ನೂರಾರು ಬೈಕ್​ಗಳ ಮೂಲಕ ಮಂಡ್ಯಕ್ಕೆ ಬರಲಿದ್ದಾರೆ. ಸಿಲ್ವರ್ ಜುಬಿಲಿ ಪಾರ್ಕ್‌ನಲ್ಲಿರುವ ಆಂಜನೇಯನ ದೇವಾಲಯದಿಂದ ಡಿಸಿ ಕಚೇರಿವರೆಗೆ ಪ್ರತಿಭಟನೆ ಱಲಿ ನಡೆಸಲಿದ್ದಾರೆ. ಇನ್ನು, ಈ ಬಂದ್​ಗೆ ಬಿಜೆಪಿ ಬಾಹ್ಯ ಬೆಂಬಲ ಸೂಚಿಸಿದ್ದು, ಬೈಕ್ ಱಲಿಯಲ್ಲಿ ಹಾಗೂ ಪ್ರತಿಭಟನಾ ಮೆರವಣಿಗೆಯಲ್ಲಿ ಮಾತ್ರ ಪಾಲ್ಗೊಳ್ತಿದೆ.

ಹಿಂದೆ ಸರಿಯಿತಾ ಜೆಡಿಎಸ್..?

ಇದರ ನಡುವೆ ಮಂಡ್ಯದ ಕೆರೆಗೋಡು ಹನುಮಧ್ವಜ ವಿವಾದದಿಂದ ಇದೀಗ ಜೆಡಿಎಸ್ ಹಿಂದೆ ಸರಿದಂತೆ ಕಾಣ್ತ್ತಿದೆ. ಅಲ್ಲದೆ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳಿಂದಲೂ ಕೂಡ ಅಂತರ ಕಾಯ್ದುಕೊಂಡಿದೆ. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು, ಕುಮಾರಸ್ವಾಮಿ ಪ್ರತಿಭಟನೆ ವೇಳೆ ಕೇಸರಿ ಶಾಲು ಹಾಕಬಾರದಿತ್ತು. ಬದಲಿಗೆ ಹಸಿರು ಶಾಲು ಹಾಕಬೇಕಿತ್ತು ಎಂದಿದ್ದರು. ಆದಾದ ಬಳಿಕ ಜೆಡಿಎಸ್ ನಾಯಕರು ಈ ವಿವಾದದಿಂದ ದೂರ ಸರಿದಂತೆ ಕಾಣ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹನುಮಧ್ವಜ ತೆರವು ವಿವಾದ; ಇಂದು ಮಂಡ್ಯ, ಕೆರಗೋಡು ಗ್ರಾಮ ಬಂದ್

https://newsfirstlive.com/wp-content/uploads/2024/01/MND_HANUMA_1.jpg

Load More