ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಪ್ರಕರಣ.. ಇಂದು ದಕ್ಷಿಣ ಕನ್ನಡ ಜಿಲ್ಲೆ ಬಂದ್

author-image
Ganesh
Updated On
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಪ್ರಕರಣ.. ಇಂದು ದಕ್ಷಿಣ ಕನ್ನಡ ಜಿಲ್ಲೆ ಬಂದ್
Advertisment
  • ಮಂಗಳೂರು ಬಂದ್​ಗೆ ಕರೆ ಕೊಟ್ಟ ಶರಣ್ ಪಂಪ್ ವೆಲ್
  • ಕೃತ್ಯದ ಹಿಂದೆ ನಿಷೇಧಿತ PFI ಕೈವಾಡ ಎಂದ ಪಂಪ್ ವೆಲ್
  • ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಬಂದ್

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಪ್ರಕರಣ ಖಂಡಿಸಿ ಇಂದು ದಕ್ಷಿಣ ಕನ್ನಡ ಜಿಲ್ಲಾ ಬಂದ್​​ಗೆ ವಿಶ್ವ ಹಿಂದೂ ಪರಿಷತ್ ದಕ್ಷಿಣ ಪ್ರಾಂತ ಸಂಚಾಲಕ ಶರಣ್ ಪಂಪ್ ವೆಲ್ ಕರೆ ಕೊಟ್ಟಿದ್ದಾರೆ.

ಇಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಜಿಲ್ಲೆಯಲ್ಲಿ ಎಲ್ಲಾ ವ್ಯಾಪಾರ ವಹಿವಾಟು, ವಾಹನಗಳ ಸಂಚಾರವೂ ಬಂದ್​ ಆಗಲಿದೆ. ಸುಹಾಸ್ ಶೆಟ್ಟಿ ಹಾಗೂ ಐದು ಜನ ಕಾರ್ಯಕರ್ತರು ಅವರ ಕಾರಿನಲ್ಲಿ ಹೋಗ್ತಾ ಇರುವಾಗ ಜಿಹಾದಿ ಇಸ್ಲಾಮಿಕ್ ಭಯೋತ್ಪಾದಕ ಮುಸಲ್ಮಾನರು ದಾಳಿ ಮಾಡಿ ಮುಗಿಸಿದ್ದಾರೆ. ಇದೊಂದು ಪೂರ್ವ ಯೋಜಿತ ಕೃತ್ಯ, ಇದರ ಹಿಂದೆ ನಿಷೇಧಿತ ಪಿಎಫ್ಐ ಕೈವಾಡ ಇದೆ ಎಂದು ಶರಣ್​ ಆರೊಪಿಸಿದ್ದಾರೆ.

ಇದನ್ನೂ ಓದಿ: ಮಂಗಳೂರಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನ ಕೊಚ್ಚಿ ಕೊಂದ 6 ದುಷ್ಕರ್ಮಿಗಳು

publive-image

ನಿನ್ನೆ ರಾತ್ರಿ ಸ್ನೇಹಿತರ ಜೊತೆ ಇನ್ನೋವಾ ಕಾರಿನಲ್ಲಿ ಸುಹಾಸ್ ಶೆಟ್ಟಿ ಮಂಗಳೂರು ಹೊರವಲಯದ ಕಿನ್ನಿಪದವು ಬಳಿ ಬರುತ್ತಿದ್ದ. ಇದನ್ನ ಗಮನಿಸಿದ್ದ ಹಂತಕರು ಮೀನಿನ ಟೆಂಪೋ, ಸ್ವಿಫ್ಟ್ ಕಾರಲ್ಲಿ ಹಿಂಬಾಲಿಸಿಕೊಂಡು ಬಂದಿದ್ದರು. ಹಾಗೆ ಬಂದವರು, ಸುಹಾಸ್ ಇದ್ದ ಇನ್ನೋವಾ ಕಾರಿಗೆ ಮೀನಿನ ಟೆಂಪೋದಿಂದ ಡಿಕ್ಕಿ ಹೊಡೆದಿದ್ದಾರೆ. ಸ್ವಿಫ್ಟ್ ಕಾರಿನಿಂದ ಇಳಿದ ದುಷ್ಕರ್ಮಿಗಳು ಸುಹಾಸ್ ಶೆಟ್ಟಿ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಲು ಶುರು ಮಾಡಿದ್ದಾರೆ. 6 ಜನ ಗ್ಯಾಂಗ್​ನಲ್ಲಿದ್ದ ಕೆಲವರು ಕೊಚ್ಚಿ ಕೊಚ್ಚಿ ಹಲ್ಲೆ ಮಾಡ್ತಿದ್ರೆ ಉಳಿದವರು ಬೇರೆಯವರು ಹತ್ತಿರ ಸುಳಿಯದಂತೆ ಮಚ್ಚು ಹಿಡಿದು ಬೆದರಿಸ್ತಿದ್ರು. ಮನಸೋ ಇಚ್ಛೆ ಹಲ್ಲೆ ಮಾಡಿದ ದುರುಳರು ಸ್ಥಳದಿಂದ ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸುಹಾಸ್ ಶೆಟ್ಟಿ ದಾರುಣ ಅಂತ್ಯ ಕಂಡಿದ್ದಾನೆ.

ಇದನ್ನೂ ಓದಿ: ಮಂಗಳೂರಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನ ಕೊಚ್ಚಿ ಕೊಂದ 6 ದುಷ್ಕರ್ಮಿಗಳು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment