Advertisment

ಇಂದು ಮಣ್ಣೆತ್ತಿನ ಅಮಾವಾಸ್ಯೆ; ಶುಭಕಾರ್ಯ ಸಲ್ಲದು, ಯಾಕಂದ್ರೆ ಈ ದಿನದ ವಿಶೇಷತೆ ಬೇರೇ ಇದೆ!

author-image
Harshith AS
Updated On
ಇಂದು ಮಣ್ಣೆತ್ತಿನ ಅಮಾವಾಸ್ಯೆ; ಶುಭಕಾರ್ಯ ಸಲ್ಲದು, ಯಾಕಂದ್ರೆ ಈ ದಿನದ ವಿಶೇಷತೆ ಬೇರೇ ಇದೆ!
Advertisment
  • ಇಂದು ರೈತರು ಎತ್ತುಗಳಿಗೆ ಗೌರವ ಸಲ್ಲಿಸುವ ಹಬ್ಬವಾಗಿದೆ
  • ಮಣ್ಣೆತ್ತಿನ ಅಮಾವಾಸ್ಯೆ ದಿನ ಏನೆಲ್ಲಾ ಕಾರ್ಯ ಮಾಡ್ಬಾರ್ದು
  • ಇಂದು ಎತ್ತುಗಳನ್ನು ಪೂಜಿಸೋದ್ಯಾಕೆ? ವಿಶೇಷತೆ ಏನು?

ಇಂದು ಮಣ್ಣೆತ್ತಿನ ಅಮಾವಾಸ್ಯೆ. ಈ ಅಮವಾಸ್ಯೆಯನ್ನು ಜೇಷ್ಠ, ಹಲಕಾರಿಣಿ, ದರ್ಶ ಅಮಾವಾಸ್ಯೆ ಎಂದು ನಾನಾ ಹೆಸರುಗಳಿಂದ ಕರೆಯುತ್ತಾರೆ. ಅಂದಹಾಗೆಯೇ ಪ್ರತಿ ವರ್ಷ ಜ್ಯೇಷ್ಠ ಮಾಸದ ಕೃಷ್ಣ ಪಕ್ಷದಂದು ಅಮಾವಾಸ್ಯೆ ಆಚರಿಸಲಾಗುತ್ತದೆ. ಅದರಂತೆ ಇಂದು ಭಾನುವಾರ ಜೂನ್​ 18ರಂದು ಮಣ್ಣೆತ್ತಿನ ಅಮಾವಾಸ್ಯೆ ಆಚರಿಸಲಾಗುತ್ತದೆ.

Advertisment

ಮಣ್ಣೆತ್ತಿನ ಅಮಾವಾಸ್ಯೆ ಎಂದರೇನು?

ಮಣ್ಣೆತ್ತಿನ ಅಮಾವಾಸ್ಯೆ ಭಾರೀ ವಿಶೇಷವಾಗಿದೆ. ಹಲವರು ಇಂದು ಸಮುದ್ರ ಸ್ನಾನ ಅಥವಾ ನದಿಯಲ್ಲಿ ಸ್ನಾನ ಮಾಡುತ್ತಾರೆ. ಈ ಅಮವಾಸ್ಯೆ ವಿಶೇಷ ಎಂದರೆ ಪೂರ್ವಜರಿಗೆ ನೈವೇದ್ಯ ದಾನ ಮಾಡುವುದಾಗಿದೆ. ಒಂದು ವೇಳೆ ದಾನ ಮಾಡಿದರೆ ಅವರು ಸಂತುಷ್ಟರಾಗುತ್ತಾರೆ ಮತ್ತು ಪಿತೃ ದೋಷದಿಂದ ಮುಕ್ತರಾಗುತ್ತಾರೆ ಎಂಬ ನಂಬಿಕೆ ಇದೆ.

publive-image

ಮಣ್ಣು+ಎತ್ತು= ಮಣ್ಣೆತ್ತು

ಮಣ್ಣಿನಲ್ಲಿ ಎತ್ತುಗಳ ರೂಪವನ್ನು ನಿರ್ಮಿಸಿ ಪೂಜಿಸುವ ಹಬ್ಬವೇ ಮಣ್ಣೆತ್ತಿನ ಅಮಾವಾಸ್ಯೆ. ರೈತರು ತಮ್ಮ ಜಮೀನಿನಲ್ಲಿ ದುಡಿಯುವ ಎತ್ತುಗಳಿಗೆ ಗೌರವ ಸಲ್ಲಿಸುವ ಹಬ್ಬ ಇದಾಗಿದೆ.

ಅಂದಹಾಗೆಯೇ, ಇಂದು ರೈತರು ತಮ್ಮ ಜಮೀನಿಗೆ ತೆರಳಿ ಅಲ್ಲಿರುವ ಹದ ಮಣ್ಣು ತೆಗೆದುಕೊಂಡು ಜೋಡಿ ಎತ್ತುಗಳನ್ನು ತಯಾರಿಸುತ್ತಾರೆ. ಬಳಿಕ ಅದನ್ನು ದೇವರ ಕೋಣೆಯಲ್ಲಿ ಇಟ್ಟು ಪೂಜಿಸುತ್ತಾರೆ. ಅಷ್ಟು ಮಾತ್ರವಲ್ಲದೆ, ಕೆಲವು ನೈವೇದ್ಯ ತಯಾರಿಸುತ್ತಾರೆ. ಅಕ್ಕಿ ಪಾಯಸ, ಕಡುಬು ಸೇರಿ ಕೆಲವು ಆಹಾರಗಳನ್ನು ತಯಾರಿಸುತ್ತಾರೆ. ಬಳಿಕ ದೇವರ ಬಳಿ ತಮ್ಮ ಎತ್ತುಗಳಿಗೆ ಯಾವುದೇ ರೋಗ, ತೊಂದರೆ ಬಾರದಂತೆ ಪ್ರಾರ್ಥಿಸುತ್ತಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment