ಅವಮಾನ ಮೆಟ್ಟಿ ನಿಲ್ತಾರಾ ಪಾಂಡ್ಯ.. ಹ್ಯಾಟ್ರಿಕ್​ ಸೋಲಿನಿಂದ ತಪ್ಪಿಸಿಕೊಳ್ಳುತ್ತಾ ಮುಂಬೈ ಇಂಡಿಯನ್ಸ್​?

author-image
Bheemappa
Updated On
ಅವಮಾನ ಮೆಟ್ಟಿ ನಿಲ್ತಾರಾ ಪಾಂಡ್ಯ.. ಹ್ಯಾಟ್ರಿಕ್​ ಸೋಲಿನಿಂದ ತಪ್ಪಿಸಿಕೊಳ್ಳುತ್ತಾ ಮುಂಬೈ ಇಂಡಿಯನ್ಸ್​?
Advertisment
  • ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್ ಮ್ಯಾಚ್
  • ಈ ಸಲನೂ ಸೋಲಿನ ಸುಳಿಯಲ್ಲಿ ಸಿಲುಕಿರುವ ಪಾಂಡ್ಯ ತಂಡ
  • ಸತತ ಸೋಲುಗಳಿಂದ ಅವಮಾನಕ್ಕೆ ಒಳಗಾಗಿರುವ ಮುಂಬೈ

ಈ ಐಪಿಎಲ್​ ಟೂರ್ನಿಯಲ್ಲೂ ಮುಂಬೈ ಇಂಡಿಯನ್ಸ್ ಸೋಲಿನ ಬೆನ್ನು ಬಿದ್ದಿದೆ. ಗೆಲುವು ಅನ್ನೋದು ಮರೀಚಿಕೆ ಆದಂತೆ ಆಗಿದೆ. ನಾಯಕ ಹಾರ್ದಿಕ್ ಪಾಂಡ್ಯ ಮಾತ್ರ ತಂಡವನ್ನು ಗೆಲ್ಲಿಸುವುದು ಹೇಗೆಂದು ಆಲೋಚನೆಯಲ್ಲೇ ಮುಳುಗಿದ್ದಾರೆ. ಇದರ ನಡುವೆಯೇ ಇಂದು ಸಂಜೆ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್​ ಅಖಾಡಕ್ಕೆ ಧುಮುಕುತ್ತಿದ್ದು ಗೆಲುವೇ ತಂಡದ ಅಸ್ತ್ರವಾಗಿದೆ.

ಇಡೀ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್​ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ 34 ಪಂದ್ಯಗಳನ್ನು ಆಡಿವೆ. ಆದರೆ ಇದರಲ್ಲಿ ಹೆಚ್ಚು ಬಾರಿ ಮುಂಬೈ ತಂಡವೇ ಗೆಲುವು ಸಾಧಿಸಿದೆ. ಕೆಕೆಆರ್ ಕೇವಲ 11 ಮ್ಯಾಚ್​ಗಳಲ್ಲಿ ಮಾತ್ರ ಗೆದ್ದಿದೆ. ಆದರೆ 2025ರ ಟೂರ್ನಿ ಆರಂಭದಿಂದಲೂ ಮುಂಬೈ ಸೋಲಿನ ಸುಳಿಯಲ್ಲಿ ಸಿಕ್ಕು ಒದ್ದಾಡುತ್ತಿದ್ದರಿಂದ ಕೆಕೆಆರ್ ಗೆಲ್ಲುವ ಫೇವರಿಟ್ ಟೀಮ್ ಎನಿಸಿದೆ.

ಇದನ್ನೂ ಓದಿ:6, 6, 6, 6, 6; ಹೊಡಿಬಡಿ ಬ್ಯಾಟಿಂಗ್​, ರಾಣ ವೇಗದ ಅರ್ಧಶತಕ.. ಚೆನ್ನೈಗೆ ಬಿಗ್ ಟಾರ್ಗೆಟ್ ಕೊಟ್ಟ RR

publive-image

ಇಂದಿನ ಪಂದ್ಯ ಸಂಜೆ 7:30ಕ್ಕೆ ಆರಂಭವಾಗುತ್ತಿದ್ದು ಟಾಸ್ ಯಾವುದೇ ಪರಿಣಾಮ ಬೀರಲ್ಲ ಎಂದು ಹೇಳಲಾಗುತ್ತಿದೆ. ಏಕೆಂದರೆ ವಾಂಖೆಡೆ ಸ್ಟೇಡಿಯಂ ಹೈಸ್ಕೋರಿಂಗ್ ಪಿಚ್ ಆಗಿದ್ದರಿಂದ ಎರಡು ತಂಡಗಳು ಬಲಿಷ್ಠವಾಗಿ ಹೋರಾಡಬೇಕಿದೆ. ಸಣ್ಣ ಮೈದಾನದಲ್ಲಿ ಸಿಕ್ಸ್​, ಫೋರ್ ಬಾರಿಸುವುದರಿಂದ ಅಭಿಮಾನಿಗಳು ಫುಲ್ ಜೋಶ್ ಸಿಗುವುದಂತೂ ಪಕ್ಕಾ. ಟೂರ್ನಿಯಲ್ಲಿ ಒಂದೂ ಪಂದ್ಯ ಗೆಲ್ಲದೇ ಕೊನೆ ಸ್ಥಾನದಲ್ಲಿರುವ ಮುಂಬೈಗೆ ಈ ಪಂದ್ಯ ಹ್ಯಾಟ್ರಿಕ್ ಸೋಲು ಆಗದಿರಲಿ ಎನ್ನುವುದು ಫ್ಯಾನ್ಸ್ ಆಶಯವಾಗಿದೆ.

ಮೊದಲ ಪಂದ್ಯವನ್ನು ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ ಸೋತಿದ್ದ ಮುಂಬೈ ತಂಡ ಎರಡನೇ ಮ್ಯಾಚ್ ಅನ್ನು ಗುಜರಾತ್ ವಿರುದ್ಧ ಸೋತು ಸುಣ್ಣವಾಗಿದೆ. ತಂಡದಲ್ಲಿ ರೋಹಿತ್ ಶರ್ಮಾ, ಸೂರ್ಯಕುಮಾರ್, ತಿಲಕ್ ವರ್ಮಾ, ವಿಲ್ ಜಾಕ್ಸ್​ ಸೇರಿ ಎಲ್ಲರೂ ಉತ್ತಮ ಪರ್ಫಾಮೆನ್ಸ್ ಕೊಡಬೇಕಿದೆ. ಅಭಿಮಾನಿಗಳ ಪ್ರಕಾರ ಹಿಟ್​ಮ್ಯಾನ್ ರೋಹಿತ್ ಅಬ್ಬರಿಸಿದ್ರೆ ಮುಂಬೈಗೆ ಗೆಲುವು ದೊಡ್ಡದೇನು ಅಲ್ಲ ಅಂತಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment