newsfirstkannada.com

Good bye: ಬೆಂಗಳೂರು ಉದ್ಯಮಿ ಕನಸಿನ Koo ಆ್ಯಪ್ ಜಗತ್ತಿನಾದ್ಯಂತ ದಿಢೀರ್ ಸ್ಥಗಿತ; ಕಾರಣವೇನು?

Share :

Published July 3, 2024 at 9:38pm

Update July 3, 2024 at 9:56pm

    ದೈತ್ಯ ಟ್ವಿಟರ್ ಕಂಪನಿಗಳಿಗೆ ಸೆಡ್ಡು ಹೊಡೆದಿದ್ದ ಆ್ಯಪ್‌ ಕೂ ಇನ್ನಿಲ್ಲ

    ಕೂ ಆ್ಯಪ್ ಮುಚ್ಚಲು ಪ್ರಮುಖವಾದ ಕಾರಣಗಳು ಯಾವ್ಯಾವು?

    ಕೇವಲ 4 ವರ್ಷದ ಹಿಂದೆ ಸ್ಥಾಪನೆಗೊಂಡ ‘ಕೂ’ ಗೆ ಏನಾಯಿತು?

ಬೆಂಗಳೂರು ಮೂಲದ ಉದ್ಯಮಿ ಅಪ್ರಮೇಯ ರಾಧಾಕೃಷ್ಣ ಅವರ ಕನಸಿನ ಕೂಸು ಕೂಗುವುದನ್ನೇ ನಿಲ್ಲಿಸಿದೆ. ಇಂಟರ್​ನೆಟ್​ ಕಂಪನಿಗಳು ಹಾಗೂ ಇತರೆ ಸಂಸ್ಥೆಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಳ್ಳಲು ವಿಫಲವಾದ ಹಿನ್ನೆಲೆಯಲ್ಲಿ ಸ್ವದೇಶಿ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಕೂ (KOO) ಆ್ಯಪ್ ಅನ್ನು ಸ್ಥಗಿತ ಮಾಡಲಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ 3 ದಿನ ಧಾರಾಕಾರ ಮಳೆ.. ಯಾವ್ಯಾವ ಜಿಲ್ಲೆಗಳಿಗೆ ಭಾರೀ ಅಲರ್ಟ್?

2021ರಲ್ಲಿ ಕೇಂದ್ರ ಸರ್ಕಾರವು ಟ್ವಿಟರ್ ಕಂಪನಿಯ ಜೊತೆ ಘರ್ಷಣೆಯಲ್ಲಿ ತೊಡಗಿತ್ತು. ಈ ವೇಳೆ ಕೂ ಆ್ಯಪ್​ ಭಾರೀ ಖ್ಯಾತಿ ಗಳಿಸಿ ದೇಶ, ವಿದೇಶದೆಲ್ಲೆಡೆ ಬಹುಬೇಗ ಪ್ರಚಾರ ಪಡೆದುಕೊಂಡು ಬಳಕೆಯಲ್ಲಿ ಜನರ ಮನ ಗೆದ್ದಿತ್ತು. ಕೂ ಆ್ಯಪ್​ನ ವಿಶೇಷ ಏನೆಂದರೆ ಈ ಆ್ಯಪ್​ ಅನ್ನು ಸ್ಥಾಪನೆ ಮಾಡಿದವರು ಕನ್ನಡಿಗ, ಬೆಂಗಳೂರಿನ ಉದ್ಯಮಿ ಅಪ್ರಮೇಯ ರಾಧಾಕೃಷ್ಣ ಅವರು. 4 ವರ್ಷದ ಹಿಂದೆ ಸ್ಥಾಪನೆ ಮಾಡಿದ್ದ ತಮ್ಮ ನೆಚ್ಚಿನ ಕೂ ಅನ್ನು ಸದ್ಯ ಸ್ಥಗಿತ ಮಾಡುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಟೀಂ ಇಂಡಿಯಾ ತವರಿಗೆ ಆಗಮಿಸೋ ಟೈಮ್‌ ಫಿಕ್ಸ್.. ನಾಳೆ ಭರ್ಜರಿ ಸ್ವಾಗತ; ಕಾರ್ಯಕ್ರಮಗಳ ಲಿಸ್ಟ್​ ಇಲ್ಲಿದೆ

ಆತ್ಮನಿರ್ಭರ್ ಪರಿಕಲ್ಪನೆ ದೇಶದಲ್ಲಿ ಕ್ರಾಂತಿ ಮಾಡುತ್ತಿದ್ದಂತೆ ಬೆಂಗಳೂರಿನ ಮೂಲಕ ಕಂಪನಿ ಟ್ವಿಟರ್ ರೀತಿಯ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಕೂ ಆ್ಯಪ್ ಆರಂಭಿಸಿತ್ತು. 4 ವರ್ಷದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸ್ಪರ್ಧೆ ಎದುರಿಸಿದ್ದ ಕೂ ಆ್ಯಪ್ ಇಂದಿಗೆ ಕೊನೆಯಾಗಿದೆ. ಇಂಟಲಿಜೆನ್ಸ್, ಆರ್ಟಿಫೀಶಿಯಲ್, ಪ್ರತಿಸ್ಪರ್ಧೆ, ಗ್ಲೋಬಲ್ ಮಾರ್ಕೆಟ್ ಸೇರಿದಂತೆ ಹಲವು ಚಾಲೆಂಜ್ ಎದುರಿಸಲು ಕೂ ಗೆ ಆಗಲಿಲ್ಲ. ಹೀಗಾಗಿ ಇನ್ಮುಂದೆ ನಿಮಗೆ ಈ ಆ್ಯಪ್ ಸಿಗುವುದಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ಕಾಲೇಜು ವಿದ್ಯಾರ್ಥಿಯಿಂದ ಸೆಕ್ಯುರಿಟಿ ಗಾರ್ಡ್ ಬರ್ಬರ ಹತ್ಯೆ.. ಅಸಲಿಗೆ ಆಗಿದ್ದೇನು?

ಈ ಆ್ಯಪ್‌ ಅನ್ನು ಇತರ ಕಂಪನಿಗಳ ಜೊತೆ ವಿಲೀನ ಮಾಡಲು ಯತ್ನಿಸಲಾಗಿತ್ತು. ಈ ಬಗ್ಗೆ ಕಂಪನಿಗಳ ಜೊತೆ ಚರ್ಚೆ ನಡೆಸಲಾಗಿತ್ತು. ಆದರೆ ಯಾವುದು ನಮಗೆ ಕೈಗೂಡಿಬರಲಿಲ್ಲ. ಬೇಸರದಲ್ಲೇ ನೆಚ್ಚಿನ ಕೂ ಆ್ಯಪ್ ಅನ್ನು ಕ್ಲೋಸ್ ಮಾಡುತ್ತಿದ್ದೇವೆ ಎಂದು ಕೂ ಸಂಸ್ಥಾಪಕ ಅಪ್ರಮೇಯ ರಾಧಾಕೃಷ್ಣ ಹಾಗೂ ಸಹ ಸಂಸ್ಥಾಪಕ ಮಯಾಂಕ್ ಬೈದವಟ್ಕ್​ ಅವರು ಮಾಹಿತಿ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Good bye: ಬೆಂಗಳೂರು ಉದ್ಯಮಿ ಕನಸಿನ Koo ಆ್ಯಪ್ ಜಗತ್ತಿನಾದ್ಯಂತ ದಿಢೀರ್ ಸ್ಥಗಿತ; ಕಾರಣವೇನು?

https://newsfirstlive.com/wp-content/uploads/2024/07/KOO_2.jpg

Load More