newsfirstkannada.com

ವಾಹನ ಸವಾರರ ಗಮನಕ್ಕೆ: ಇಂದು ಲೀಟರ್​ ಪೆಟ್ರೋಲ್​​, ಡೀಸೆಲ್​ ಬೆಲೆ ಎಷ್ಟು ಗೊತ್ತೇ?

Share :

Published August 10, 2023 at 7:08pm

    ತರಕಾರಿ ಬೆಲೆ ಏರಿಕೆಗೆ ತತ್ತರಿಸಿದ ಜನ..!

    ಇಂದಿನ ಪೆಟ್ರೋಲ್​​ ಡೀಸೆಲ್​​ ಬೆಲೆ ಎಷ್ಟು?

    ರಾಜ್ಯದ ಜನ ಓದಲೇಬೇಕಾದ ಸ್ಟೋರಿ!

ಬೆಂಗಳೂರು: ಕಳೆದೊಂದು ತಿಂಗಳಿನಿಂದ ಎಡಬಿಡದೆ ಸುರಿಯುತ್ತಿರುವ ಮಳೆಗೆ ಜನ ತತ್ತರಿಸಿ ಹೋಗಿದ್ದಾರೆ. ಅದರಲ್ಲೂ ಕೆಲಸಕ್ಕೆ ಹೋಗುವ ಜನ ಕಾರಿಲ್ಲದೆ ಹೊರಗೆ ಹೋಗಲು ಆಗುತ್ತಲೇ ಇಲ್ಲ. ಹೀಗಾಗಿ ಮಳೆಗಾಲದಲ್ಲೂ ಪೆಟ್ರೋಲ್​​, ಡೀಸೆಲ್​​ಗೆ ಭಾರೀ ಡಿಮ್ಯಾಂಡ್​. ಪ್ರತಿಯೊಬ್ಬರ ಮನೆಯಲ್ಲೂ ಕಾರು, ಬೈಕ್​ ಇದ್ದೇ ಇದೆ. ಯಾರೂ ಈಗ ಬಸ್​​, ಟ್ಯಾಕ್ಸಿಗಾಗಿ ಹೆಚ್ಚು ಕಾಯಲ್ಲ. ಮನೆಯಿಂದ ಬಸ್​​ ನಿಲ್ದಾಣಕ್ಕೆ ಆಟೋದಲ್ಲಿ ಕನಿಷ್ಠ 50 ರೂಪಾಯಿ ಬೇಕು. ಅದೇ ದುಡ್ಡಲ್ಲಿ ಪೆಟ್ರೋಲ್​ ಹಾಕಿಸಿಕೊಂಡು ಕೆಲಸಕ್ಕೆ ಎಂಬುದು ಬಹುತೇಕ ಮಂದಿ ಪ್ಲಾನ್​​.

ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದ ಜನರಿಗೆ ಇತ್ತೀಚೆಗೆ ಪೆಟ್ರೋಲ್​​, ಡೀಸೆಲ್​ ಖರೀದಿಗೂ ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಾರಣ ಮಳೆಗಾಲದಲ್ಲಿ ತರಕಾರಿ ಬೆಲೆ ಏರಿಕೆಯಿಂದ ತೀವ್ರವಾಗಿ ಗಾಯಗೊಂಡಿರೋ ಜನರ ಮೇಲೆ ಪೆಟ್ರೋಲ್​, ಡೀಸೆಲ್​​ ದರ ಬರೆ ಎಳೆದಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 80ಕ್ಕೂ ಹೆಚ್ಚು ಡಾಲರ್‌ಗೆ ತಲುಪಿದೆ. ಇದರ ಪರಿಣಾಮ ಎಂದಿನಂತೆಯೇ ಪೆಟ್ರೋಲ್​​, ಡೀಸೆಲ್​​ ಬೆಲೆ ಮತ್ತೆ ಹೆಚ್ಚಳವಾಗಿತ್ತು. ಆದರೀಗ ದೇಶಾದ್ಯಂತ ಪೆಟ್ರೋಲ್, ಡೀಸೆಲ್ ದರ ಕಡಿಮೆ ಆಗಿದೆ. ಹಾಗೆಯೇ ಕರ್ನಾಟಕದಲ್ಲೂ ಎಲ್ಲೆಡೆ ಪೆಟ್ರೋಲ್, ಡೀಸೆಲ್​ ದರ ಕೊಂಚ ತಗ್ಗಿದೆ.

ಭಾರತದ ವಿವಿಧ ಮಹಾ ನಗರಗಳಲ್ಲಿ ಇಂಧನ ಬೆಲೆ ಹೀಗಿದೆ..!

ಸಿಲಿಕಾನ್​ ಸಿಟಿ ಬೆಂಗಳೂರಲ್ಲಿ ಇಂದು ಪೆಟ್ರೋಲ್ ರೂ. 101.94, ಡೀಸೆಲ್ ದರ ರೂ. 87.89 ಆಗಿದೆ. ಹಾಗೆಯೇ ಚೆನ್ನೈ, ಮುಂಬೈನಲ್ಲಿ ಪೆಟ್ರೋಲ್ ದರ ಕ್ರಮವಾಗಿ ರೂ.102.63, ರೂ. 106.31 ಆಗಿದೆ. ಜತೆಗೆ ಡೀಸೆಲ್ ದರ ಕ್ರಮವಾಗಿ ರೂ. 94.24, ರೂ. 94.27 ಇದೆ. ಇನ್ನು, ಕೊಲ್ಕತ್ತಾ ಮತ್ತು ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ಕ್ರಮವಾಗಿ ರೂ. 106.03, ರೂ. 96.72 ಇದ್ದರೆ, ಡೀಸೆಲ್ ದರ ರೂ. 92.76, ರೂ. 89.62 ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಾಹನ ಸವಾರರ ಗಮನಕ್ಕೆ: ಇಂದು ಲೀಟರ್​ ಪೆಟ್ರೋಲ್​​, ಡೀಸೆಲ್​ ಬೆಲೆ ಎಷ್ಟು ಗೊತ್ತೇ?

https://newsfirstlive.com/wp-content/uploads/2023/06/petrol-1.jpg

Load More