/newsfirstlive-kannada/media/post_attachments/wp-content/uploads/2025/01/MODI-3.jpg)
23 ದಿನಗಳಿಂದ ನಡೀತಿರೋ ಪ್ರಯಾಗ್ರಾಜ್ನ ಮಹಾಕುಂಭಮೇಳದಲ್ಲಿ ಕೋಟಿ ಕೋಟಿ ಭಕ್ತರು ಪುಣ್ಯ ಸ್ನಾನ ಮಾಡಿದ್ದಾರೆ. ಲಕ್ಷಾಂತರ ಸಾಧು-ಸಂತರು ನಾಗಸಾಧುಗಳು, ದೇಶದ ಮೂಲೆ ಮೂಲೆಯ ಭಕ್ತರು.. ದೇಶ ವಿದೇಶದ ಗಣ್ಯರು ಅಮೃತಸ್ನಾನ ಮಾಡಿ ಪಾಪ ತೊಳೆದುಕೊಂಡಿದ್ದಾರೆ. ಈ ಪೂಣ್ಯ ಭೂಮಿಗೆ ಇಂದು ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ.
ಲಕ್ಷವಲ್ಲ, ಕೋಟಿ ಲೆಕ್ಕಕ್ಕೆ ಇಲ್ಲ.. ಉತ್ತರ ಪ್ರದೇಶ ಸರ್ಕಾರದ ಮಾಹಿತಿ ಪ್ರಕಾರ ಈವರೆಗೂ 38 ಕೋಟಿಗೂ ಅಧಿಕ ಭಕ್ತರು ಗಂಗಾ, ಯಮುನಾ ಹಾಗೂ ಸರಸ್ವತಿ ಮಹಾ ನದಿಗಳ ಸಂಗಮ ಕ್ಷೇತ್ರ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ದೇಶದ ಭಕ್ತರು, ಗಣ್ಯರು ಮಾತ್ರವಲ್ಲದೇ 70ಕ್ಕೂ ಅಧಿಕ ದೇಶಗಳ ಜನಸಾಮಾನ್ಯರು ಮತ್ತು ಗಣ್ಯರು ಕೂಡ ಈ ಮಹೋತ್ಸವದಲ್ಲಿ ಮಿಂದೆದ್ದಿದ್ದಾರೆ. ಇದೀಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಯಾಗ್ ರಾಜ್‌ಗೆ ಆಗಮಿಸ್ತಿದ್ದಾರೆ.
ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ ಬಿಗ್ಬಾಸ್ ಮಾಜಿ ಸ್ಪರ್ಧಿ; ಪ್ರಯಾಗ್ರಾಜ್ನ ಅನುಭವದ ಬಗ್ಗೆ ಸಾನ್ಯಾ ಅಯ್ಯರ್ ಹೇಳಿದ್ದೇನು?
ಮಹಾಕುಂಭದಲ್ಲಿ ಮೋದಿ
ಪೂಜೆ ಪುನಸ್ಕಾರ ಅಂದ್ರೆ ಪ್ರಧಾನಿ ನರೇಂದ್ರ ಮೋದಿಗೆ ಎಲ್ಲಿಲ್ಲದ ಭಕ್ತಿ.. ಯಾವುದೇ ಹಬ್ಬ ಆಗ್ಲಿ.. ದೈವಾಚರಣೆ ಆಗ್ಲಿ ಮೊದಲು ನಿಂತಿರುತ್ತಾರೆ. ಈ ವಯಸ್ಸಿನಲ್ಲೂ ಉಪವಾಸ.. ವ್ರತಗಳನ್ನ ಮಾಡೋ ಮೋದಿ ಇಂದು ಅಮೃತ ಸ್ನಾನ ಮಾಡೋದಕ್ಕೆ ವಿಶ್ವದಲ್ಲೇ ಅತಿ ದೊಡ್ಡ ಧಾರ್ಮಿಕ ಉತ್ಸವವಾಗಿರುವ 144 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭಮೇಳದಲ್ಲಿ ಭಾಗಿಯಾಗ್ತಿದ್ದಾರೆ.
‘ನಮೋ’ ಗಂಗೆ
- ಪ್ರಯಾಗ್ ರಾಜ್‌ಗೆ ಭೇಟಿ, ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ
- ಬೆಳಗ್ಗೆ 10:05ಕ್ಕೆ ಪ್ರಯಾಗ್‌ರಾಜ್ ವಿಮಾನ ನಿಲ್ದಾಣಕ್ಕೆ ಆಗಮನ
- ವಿಮಾನ ನಿಲ್ದಾಣದಿಂದ ಡಿಪಿಎಸ್ ಹೆಲಿಪ್ಯಾಡ್‌ನತ್ತ ಪ್ರಯಾಣ
- 10:45ಕ್ಕೆ ಅರೈಲ್ ಘಾಟ್, ಬೋಟ್‌ನಲ್ಲಿ ಮಹಾ ಕುಂಭಕ್ಕೆ ಭೇಟಿ
- ಬೆಳಗ್ಗೆ 11 ರಿಂದ 11:30 ರವರೆಗೆ ನರೇಂದ್ರ ಮೋದಿ ಪವಿತ್ರ ಸ್ನಾನ
- ಅಲ್ಲಿಂದ ನೇರವಾಗಿ ವಿಮಾನ ನಿಲ್ದಾಣಕ್ಕೆ ತೆರಳಿ ದೆಹಲಿಗೆ ವಾಸಪ್
ಈ ಭೇಟಿಯ ಸಮಯದಲ್ಲಿ, ಪ್ರಧಾನಿ ಮೋದಿ ಸಂತರೊಂದಿಗೆ ಸಂವಹನ ನಡೆಸುವ ನಿರೀಕ್ಷೆಯಿದೆ. ಜೊತೆಗೆ 2025 ರ ಮಹಾಕುಂಭದಲ್ಲಿ ಭಾಗವಹಿಸುವ ಲಕ್ಷಾಂತರ ಯಾತ್ರಾರ್ಥಿಗಳಿಗೆ ಮಾಡಲಾದ ವ್ಯವಸ್ಥೆಗಳನ್ನು ಪರಿಶೀಲಿಸುತ್ತಾರೆ. ಪ್ರಧಾನಿಗಳ ಆಗಮನದ ಹಿನ್ನೆಯಲ್ಲಿ ಪ್ರಯಾಗ್ ರಾಜ್‌ನಲ್ಲಿ ಬಿಗಿ ಬಂದೋಬಸ್ತ್ ಹೆಚ್ಚು ಮಾಡಲಾಗಿದೆ.
ಮಹಾ ಕುಂಭ ಮೇಳದ ಮೌನಿ ಅಮಾವಾಸ್ಯೆಯ ಕಾಲ್ತುಳಿತದಲ್ಲಿ 30 ಭಕ್ತರು ಬಲಿಯಾದ ಘಟನೆಯಿಂದ ಎಚ್ಚೆತ್ತುಕೊಂಡಿರುವ ಉತ್ತರ ಪ್ರದೇಶ ಸರ್ಕಾರ ಭಕ್ತರ ರಕ್ಷಣೆಗೆ ಮತ್ತಷ್ಟು ಭದ್ರತೆ ಹೆಚ್ಚಿಸಿದೆ. ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳನ್ನು ನೇಮಿಸಿದೆ. ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಿನ್ನೆಯೇ ಪ್ರಯಾಗ್ರಾಜ್ಗೆ ಭೇಟಿ ನೀಡಿದ್ದು, ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದಿದ್ದಾರೆ.
ಇದನ್ನೂ ಓದಿ: ಖಾಲಿ ಇರೋ 2.5 ಲಕ್ಷ ಹುದ್ದೆಗಳ ನೇಮಕಾತಿಗೆ ಸರ್ಕಾರ ನಿರ್ಧಾರ; ಪದವೀಧರರಿಗೆ ಭರ್ಜರಿ ಗುಡ್ನ್ಯೂಸ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ