ಇವತ್ತು ಪ್ರಜ್ವಲ್ ರೇವಣ್ಣ ಭವಿಷ್ಯ ತೀರ್ಮಾನ.. ಅಪರಾಧಿ ಎಂದು ತೀರ್ಪು ಬಂದ್ರೆ ರಾಜಕೀಯ ಭವಿಷ್ಯ ಖತಂ

author-image
Ganesh
Updated On
ಪ್ರಜ್ವಲ್​ ರೇವಣ್ಣಗೆ ಮತ್ತೆ ಬಿಗ್​ ಶಾಕ್​.. ಜಾಮೀನು ಅರ್ಜಿ ವಜಾ ಮಾಡಿದ ನ್ಯಾಯಾಲಯ
Advertisment
  • ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಪ್ರಕರಣ
  • ಜನಪ್ರತಿನಿಧಿಗಳ ಕೋರ್ಟ್​ನಿಂದ ಅರ್ಜಿಗಳ ತೀರ್ಪು
  • ಪ್ರಜ್ವಲ್ ರೇವಣ್ಣ ವಿರುದ್ಧ ಒಟ್ಟು 4 ಕೇಸ್​ಗಳು ದಾಖಲು

ಹಾಸನ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ತೀರ್ಪು ಪ್ರಕಟಿಸಲಿದೆ. ಈ ತೀರ್ಪು ಪ್ರಜ್ವಲ್ ರೇವಣ್ಣ ಭವಿಷ್ಯದ ಪಾಲಿಗೆ ಮಹತ್ವ ಪಡೆದುಕೊಂಡಿದೆ.

ಪ್ರಜ್ವಲ್ ರೇವಣ್ಣ ವಿರುದ್ಧ ಒಟ್ಟು 4 ಕೇಸ್​ಗಳು ದಾಖಲಾಗಿವೆ. ಈ 4 ಕೇಸ್​ಗಳ ಪೈಕಿ ಈಗ ಮೊದಲ ಕೇಸ್​ನ ತೀರ್ಪು ಇವತ್ತು ಪ್ರಕಟ ಆಗಲಿದೆ. ಪ್ರಕರಣ ಸಂಬಂಧ ಈಗಾಗಲೇ ವಾದ- ಪ್ರತಿವಾದ ಮುಗಿದಿದೆ. ಕೇಸ್​​​ನಲ್ಲಿ ಸಾಕ್ಷ್ಯಗಳ ವಿಚಾರಣೆ ಕೂಡ ಕೋರ್ಟ್​​​ ಆಲಿಸಿದೆ. ಬಳಿಕ ಕಾಯ್ದಿರಿಸಿರುವ ಕೇಸ್ ತೀರ್ಪನ್ನ ಇವತ್ತು ಕೋರ್ಟ್​​​ ಪ್ರಕಟಿಸಲಿದೆ.

ಇದನ್ನೂ ಓದಿ: ನಿಮ್ಮ ಸ್ಥಾನದಿಂದ ಗೌರವ, ಪುರಸ್ಕಾರ ದೊರೆಯಬಹುದು.. ಕುಟುಂಬ ಇಷ್ಟ ಪಡುತ್ತದೆ; ಇಲ್ಲಿದೆ ಇಂದಿನ ಭವಿಷ್ಯ!

ಪ್ರಜ್ವಲ್ ರೇವಣ್ಣ ಪರ ತೀರ್ಪು ಬಂದರೆ..

ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್​ನಿಂದ ಇವತ್ತು ಪ್ರಜ್ವಲ್​​ ರೇವಣ್ಣ ಭವಿಷ್ಯ ನಿರ್ಧಾರ ಆಗಲಿದೆ. ಒಂದ್ವೇಳೆ ಅಪರಾಧಿ ಎಂದು ತೀರ್ಪು ನೀಡಿದ್ರೆ, ದೊಡ್ಡ ಹಿನ್ನಡೆ ಆಗಲಿದೆ. ತೀರ್ಪು ಬಳಿಕ ಶಿಕ್ಷೆಯ ಪ್ರಮಾಣವನ್ನ ನ್ಯಾಯಾಲಯ ಪ್ರಕಟಿಸಬೇಕಾಗುತ್ತೆ. ಅಂದ್ರೆ ಶಿಕ್ಷೆಯ ಪ್ರಮಾಣದ ಬಗ್ಗೆಯೂ ಕೋರ್ಟ್​​​ ವಾದ- ಪ್ರತಿವಾದವನ್ನ ಆಲಿಸಲಿದೆ. ಗರಿಷ್ಠ ಶಿಕ್ಷೆ ವಿಧಿಸಬೇಕು ಅಂತ ಪ್ರಾಸಿಕ್ಯೂಷನ್ ಪರ ವಕೀಲರ ವಾದ ಮಂಡಿಸಲಿದ್ದಾರೆ. ಕಡಿಮೆ ಶಿಕ್ಷೆ ನೀಡಿ ಅಂತ ಪ್ರಜ್ವಲ್ ರೇವಣ್ಣ ಪರ ವಕೀಲರು ಮನವಿ ಮಾಡುವ ಸಾಧ್ಯತೆ ಇದೆ. ಒಂದ್ವೇಳೆ ಪ್ರಜ್ವಲ್​ ವಿರುದ್ಧ ತೀರ್ಪು ಬಂದ್ರೆ ಇಷ್ಟೆಲ್ಲಾ ಕೋರ್ಟ್​ನಲ್ಲಿ ನಡೆಯಲಿದೆ.

ಇದನ್ನೂ ಓದಿ: ಡಿಕೆಶಿ ಹೊರಗಿಟ್ಟು CM ಸಭೆ; ಸಿದ್ದು ಎದುರಲ್ಲೇ ರಾಜಣ್ಣ- ಗುಬ್ಬಿ ಶಾಸಕ ಶ್ರೀನಿವಾಸ್ ಜಟಾಪಟಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment