/newsfirstlive-kannada/media/post_attachments/wp-content/uploads/2025/04/RCB-1-1.jpg)
ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಆರ್ಸಿಬಿಗೆ ಪಂಜಾಬ್ ಪಂಚ್ ನೀಡಿತ್ತು. ಆದ್ರೀಗ ಪಂಜಾಬ್ಗೆ ತಿರುಗೇಟು ನೀಡಲು ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚಂಡೀಗಡಕ್ಕೆ ದಂಡೆತ್ತಿ ಹೋಗಿದೆ. ತವರಿಲ್ಲೇ ಸೋಲಿಸಿದ ಪಂಜಾಬ್ಗೆ, ಇವತ್ತು ಅವರದ್ದೇ ನೆಲದಲ್ಲಿ ಸೋಲಿಸುವ ಲೆಕ್ಕಾಚಾರದಲ್ಲಿದೆ.
ಆರ್ಸಿಬಿ ಪಂಜಾಬ್ ರಿವೇಂಜ್ ಫೈಟ್ಗೆ ಕೌಂಟ್ಡೌನ್
ಬೆಂಗಳೂರಲ್ಲಿ ಗೆದ್ದೇ ಗೆಲ್ತೀವಿ ಅನ್ನೋ ನಿರೀಕ್ಷೆಯಲ್ಲಿ ಅಖಾಡಕ್ಕಿಳಿದ್ದ ಆರ್ಸಿಬಿ, ಮತ್ತೊಮ್ಮೆ ಮುಗ್ಗರಿಸಿದೆ. ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್, ಪಂಚ್ಗೆ ಹೋಮ್ ಕಂಡೀಷನ್ಸ್ನಲ್ಲೇ ಹ್ಯಾಟ್ರೀಕ್ ಸೋಲು ಅನುಭವಿಸಿದೆ. ಅಷ್ಟೇ ಅಲ್ಲ, ಪಂಜಾಬ್ ಕಿಂಗ್ಸ್ ತಾಯ್ನಾಡದಲ್ಲೇ ಸೋಲಿನ ಪಂಚ್ ನೀಡಲು ರಣತಂತ್ರ ರೂಪಿಸುತ್ತಿರುವ ಆರ್ಸಿಬಿ, ರಿವೇಂಜ್ ತೀರಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಹೀಗಾಗಿ ಸೂಪರ್ ಸಂಡೇಯ ಸೇಡಿನ ಸಮರದಲ್ಲಿ ಯಾರ್ ಗೆಲ್ತಾರೆ ಅನ್ನೋ ಕ್ಯೂರಿಯಾಸಿಟಿ ಅಭಿಮಾನಿಗಳಲ್ಲಿ ಮನೆ ಮಾಡಿದೆ.
ಇದನ್ನೂ ಓದಿ: ಇಂದು RCB vs PBKS ಪಂದ್ಯ.. ಈ ಹೈವೋಲ್ಟೇಜ್ ಮ್ಯಾಚ್ ಎಷ್ಟು ಗಂಟೆಗೆ, ಎಲ್ಲಿ ನಡೆಯುತ್ತೆ?
ಕೊಹ್ಲಿ, ಸಾಲ್ಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆ
ಚಿನ್ನಸ್ವಾಮಿಯಲ್ಲಿ ಕೊಹ್ಲಿ, ಫಿಲ್ ಸಾಲ್ಟ್ ಸಾಲಿಡ್ ಓಪನಿಂಗ್ ನೀಡದಿರಬಹುದು. ಚಿನ್ನಸ್ವಾಮಿಯ ಹೊರತಾದ ಪಿಚ್ಗಳಲ್ಲಿ ವಿರಾಟ್, ಫಿಲ್ ಸಾಲ್ಟ್ ಅದ್ಬುತ ಇನ್ನಿಂಗ್ಸ್ ಕಟ್ಟಿದ್ದಾರೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಕೊಲ್ಕತ್ತಾ, ವಾಂಖೆಡೆ, ಜೈಪುರದಲ್ಲಿ ಸಿಡಿಸಿರುವ ಕೊಹ್ಲಿ, ಪಂಜಾಬ್ ಎದುರು ಅದ್ಭುತ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ. ಪಂಜಾಬ್ ಎದುರು 1031 ರನ್ ಸಿಡಿಸಿರುವ ಕೊಹ್ಲಿ, ಇವತ್ತು ನರಕ ದರ್ಶನ ತೋರಿಸಿದರೂ ಅಚ್ಚರಿ ಇಲ್ಲ.
ಇದನ್ನೂ ಓದಿ: ಬೆಂಗಳೂರಲ್ಲಿ ತಪ್ಪಿದ ಭಾರೀ ಅನಾಹುತ.. ನಿಂತಿದ್ದ ಇಂಡಿಗೋ ವಿಮಾನಕ್ಕೆ ಗುದ್ದಿದ ಟೆಂಪೋ ಟ್ರಾವೆಲರ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್