ಆರ್​ಸಿಬಿಗೆ ಐದು ವೀಕ್ನೆಸ್.. ಕೊಂಚ ಯಾಮಾರಿದ್ರೂ ಗೆಲುವು ಕಷ್ಟ, ಇರಲಿ ಎಚ್ಚರಿಕೆ..!

author-image
Ganesh
Updated On
ಆರ್​ಸಿಬಿಗೆ ಐದು ವೀಕ್ನೆಸ್.. ಕೊಂಚ ಯಾಮಾರಿದ್ರೂ ಗೆಲುವು ಕಷ್ಟ, ಇರಲಿ ಎಚ್ಚರಿಕೆ..!
Advertisment
  • ಅಂತಿಮ ಘಟ್ಟ ತಲುಪಿದ ಐಪಿಎಲ್-2025
  • ಐಪಿಎಲ್ ಫೈನಲ್ ಎಂಟ್ರಿಗಾಗಿ RCB vs PBKS
  • ಸಂಜೆ 7.30 ರಿಂದ ಕ್ವಾಲಿಫೈಯರ್ ಪಂದ್ಯ ಆರಂಭ

ಐಪಿಎಲ್-2025 ಅಂತಿಮ ಘಟ್ಟ ತಲುಪಿದೆ. ಚಂಡಿಗಢದ ಮಲ್ಲನ್​ಪುರದಲ್ಲಿ ಇಂದು ಫೈನಲ್ ಪ್ರವೇಶಕ್ಕಾಗಿ ಮೊದಲ ಕ್ವಾಲಿಫೈಯರ್ ಮ್ಯಾಚ್ ನಡೆಯಲಿದೆ. ಇಲ್ಲಿ ಗೆದ್ದವರು ನೇರವಾಗಿ ಫೈನಲ್ ಪ್ರವೇಶ ಮಾಡಲಿದ್ದಾರೆ.

ಸೋತ ತಂಡಕ್ಕೆ ಇನ್ನೊಂದು ಅವಕಾಶ ಸಿಗಲಿದೆ. ನಾಳೆ ಗುಜರಾತ್ ಟೈಟನ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ಎಲಿಮಿನೇಟರ್ ಮ್ಯಾಚ್ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡವು, ಕ್ವಾಲಿಫೈಯರ್​ ಒಂದರಲ್ಲಿ ಸೋತಿರುವ ತಂಡದೊಂದಿಗೆ ಸೆಣಸಾಟ ನಡೆಸಲಿದೆ.

ಇದನ್ನೂ ಓದಿ: RCB vs PBKS ಪಂದ್ಯ​.. ಮಳೆ ಬರುವ ಬಗ್ಗೆ ಹವಾಮಾನ ಇಲಾಖೆ ಹೇಳಿದ್ದೇನು..?

ಇನ್ನು, ಮೊದಲ ಕ್ವಾಲಿಫೈಯರ್​ನಲ್ಲಿ ಆರ್​ಸಿಬಿ ಮತ್ತು ಪಂಜಾಬ್ ಕಿಂಗ್ಸ್ ಫೈಟ್ ನಡೆಸಲಿವೆ. ಪಾಯಿಂಟ್ಸ್​ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಆರ್​ಸಿಬಿಗೆ ಕೆಲವು ವಿಚಾರಗಳು ಚಿಂತೆ ಮಾಡುವಂತೆ ಆಗಿದೆ. ಈ ಆರು ನೆಗೆಟೀವ್ ವಿಚಾರಗಳು ಆರ್​ಸಿಬಿಗೆ ನೆಗೆಟಿವ್ ಆದರೂ ಅಚ್ಚರಿ ಇಲ್ಲ. ಹೀಗಾಗಿ ಆರ್​ಸಿಬಿ ಇಂದು ಎಚ್ಚರಿಕೆಯಿಂದ ಆಡಿ, ಮೊದಲ ಸುತ್ತಿನಲ್ಲೇ ಫೈನಲ್ ಪ್ರವೇಶ ಮಾಡಬೇಕಿದೆ.

ಆರ್​ಸಿಬಿ ವೀಕ್ನೆಸ್

  • ರಜತ್ ಪಟಿದಾರ್ ಅಸ್ಥಿರ ಬ್ಯಾಟಿಂಗ್
  •  ಮಿಡಲ್ ಆರ್ಡರ್​ನ ನಂಬಿಕೊಳ್ಳುವಂತಿಲ್ಲ
  •  ಒತ್ತಡದಲ್ಲಿ ಬೌಲರ್ಸ್ ಕೈಕೊಡುವ ಭೀತಿ
  •  ವಿಕೆಟ್ ಬೇಟೆಯಾಡ್ತಿಲ್ಲ​​​​​​​​​ ಸುಯಾಶ್​, ಕೃನಾಲ್
  •  ಗೆಲುವಿನ ಅತಿಯಾದ ಆತ್ಮವಿಶ್ವಾಸ ಮುಳುವು

ಲೀಗ್​ ಹಂತದಲ್ಲಿ ಅದ್ಭುತ ಆಟವಾಡಿರುವ ಉಭಯ ತಂಡಗಳು ಈಗ ಐಪಿಎಲ್​ ಫೈನಲ್​ ಕನವರಿಕೆಯಲ್ಲಿವೆ. 2014ರ ಬಳಿಕ ಫೈನಲ್​​ಗೇರುವ ಸುವರ್ಣವಕಾಶ ಹೊಂದಿರುವ ಪಂಜಾಬ್ ಕಿಂಗ್ಸ್​, ಶತಯಗತಾಯ ಈ ಅವಕಾಶ ಸದ್ಭಳಕೆ ಮಾಡಿಕೊಳ್ಳುವ ಉತ್ಸಾಹದಲ್ಲಿದೆ. ಇತ್ತ 2016ರ ಬಳಿಕ ಕ್ವಾಲಿಫೈಯರ್ ಆಡ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಹ, 9 ವರ್ಷಗಳ ಬಳಿಕ ಐಪಿಎಲ್​​ನಲ್ಲಿ ಪ್ರಶಸ್ತಿ ಸುತ್ತಿಗೇರುವ ಚಾನ್ಸ್​ ಇದೆ.

ಇದನ್ನೂ ಓದಿ: ಬಿಗ್​ಬಾಸ್ ಖ್ಯಾತಿಯ​ ದೀಪಿಕಾಗೆ ಕ್ಯಾನ್ಸರ್; ನೋವಿನ ಯಾತನೆ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟ ನಟಿ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment