/newsfirstlive-kannada/media/post_attachments/wp-content/uploads/2025/05/KOHLI-21.jpg)
ಐಪಿಎಲ್-2025 ಅಂತಿಮ ಹಂತದಲ್ಲಿದೆ. ಲೀಗ್ ಹಂತದ ಎಲ್ಲಾ 70 ಪಂದ್ಯ ಮುಗಿದಿದ್ದು, ಇಂದು ಫೈನಲ್ ಪ್ರವೇಶಕ್ಕಾಗಿ ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೆಣಸಾಟ ನಡೆಸಲಿವೆ.
ಎಲ್ಲಿ ನಡೆಯುತ್ತೆ ಪಂದ್ಯ..?
ಇಂದಿನ ಪಂದ್ಯವು ನ್ಯೂ ಚಂಡೀಗಢದ ಮುಲ್ಲನ್‌ಪುರ ಕ್ರೀಡಾಂಗಣದಲ್ಲಿ ನಡೆಯಲಿದೆ. ಗೆಲ್ಲುವ ತಂಡ ನೇರವಾಗಿ ಫೈನಲ್ ಪ್ರವೇಶಿಸಲಿದೆ. ಸೋತ ತಂಡವು ಎಲಿಮಿನೇಟರ್‌ನ ವಿಜೇತರ ವಿರುದ್ಧ ಎರಡನೇ ಕ್ವಾಲಿಫೈಯರ್ನಲ್ಲಿ ಆಡಲಿದೆ.
ಯಾರು ಮುಂದಿದ್ದಾರೆ?
ಬೆಂಗಳೂರು ಮತ್ತು ಪಂಜಾಬ್ ನಡುವೆ ತೀವ್ರ ಪೈಪೋಟಿ ಕಂಡುಬರುತ್ತಿದೆ. ಪಂಜಾಬ್ ಕಿಂಗ್ಸ್ ತಂಡ ಆರ್‌ಸಿಬಿಯನ್ನು 18 ಬಾರಿ ಸೋಲಿಸಿದ್ದರೆ, ಬೆಂಗಳೂರು ತಂಡ ಪಂಜಾಬ್ ಅನ್ನು 17 ಬಾರಿ ಸೋಲಿಸಿದೆ. ಅಂತಹ ಪರಿಸ್ಥಿತಿಯಲ್ಲಿ ಕ್ವಾಲಿಫೈಯರ್ -1 ರಲ್ಲೂ ಕಠಿಣ ಸ್ಪರ್ಧೆ ಇರುತ್ತದೆ.
ಮುಲ್ಲನ್ಪುರ ಪಿಚ್ ವರದಿ
ಈ ಮೈದಾನದಲ್ಲಿ ಬಿಗ್ ಸ್ಕೋರ್‌ಗಳು ದಾಖಲಾಗಿಲ್ಲ. ಮೊದಲ ಇನ್ನಿಂಗ್ಸ್‌ನ ಸರಾಸರಿ ಸ್ಕೋರ್ 173 ರನ್‌ಗಳು. ಈ ಋತುವಿನಲ್ಲಿ ಮೊದಲು ಬ್ಯಾಟ್ ಮಾಡಿದ ತಂದ ಮೂರು ಬಾರಿ ಗೆದ್ದಿದೆ. ಬೌಲರ್‌ಗಳಿಗೆ ಈ ಪಿಚ್ ಸಹಾಯಕವಾಗಿದೆ. ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರೆ ಒಳ್ಳೆಯದು.
ಪಂದ್ಯದ ಭವಿಷ್ಯ
ಎರಡೂ ತಂಡಗಳ ಮಧ್ಯೆ ಕಠಿಣ ಸ್ಪರ್ಧೆ ನಡೆಯಲಿದೆ. ಆರ್‌ಸಿಬಿ ತವರಿನಾಚೆ ಸತತವಾಗಿ 7 ಪಂದ್ಯಗಳನ್ನು ಗೆದ್ದುಕೊಂಡಿದೆ. ಬೆಂಗಳೂರು ತಂಡ ಮುಲ್ಲನ್ಪುರದಲ್ಲಿ ಗೆಲುವು ದಾಖಲಿಸುವ ನಿರೀಕ್ಷೆ ಇದೆ.
RCB ಸಂಭಾವ್ಯ ಪ್ಲೇಯಿಂಗ್ XI - ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ , ಟಿಮ್ ಸೀಫರ್ಟ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಮಯಾಂಕ್ ಅಗರ್ವಾಲ್, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಜೋಶ್ ಹೇಜಲ್ವುಡ್, ಭುವನೇಶ್ವರ್ ಕುಮಾರ್ ಮತ್ತು ಯಶ್ ದಯಾಲ್.
ಇದನ್ನೂ ಓದಿ: RCB vs PBKS; ಮಳೆ ಬಂದು ಪಂದ್ಯ ವಾಶ್ಔಟ್ ಆದರೆ ನೇರ ಫೈನಲ್ಗೆ ಹೋಗೋದು ಯಾರು..?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ