/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ಪ್ರತಿಪತ್ ತಿಥಿ (ಪಾಡ್ಯ), ಭರಣಿ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.
ಮೇಷ ರಾಶಿ
- ನಿರುದ್ಯೋಗಿಗಳಿಗೆ ಸಮಸ್ಯೆ ದೂರವಾಗಬಹುದು
- ಹಣಕಾಸಿನ ಸ್ಥಿತಿ ಉತ್ತಮವಾಗಿರಲಿದೆ
- ಪ್ರಯಾಣ, ಆರೋಗ್ಯ ಎರಡನ್ನು ಗಮನಿಸಿ
- ಇಂದು ಯಶಸ್ಸಿನ ಆದಿ ಸಿಗಬಹುದು
- ಬೇಸರಕ್ಕೆ ಸ್ವಲ್ಪ ತಡೆಯನ್ನು ಹಾಕಬೇಕು
- ನಿರಂತರವಾದ ಪ್ರಯತ್ನವಿರಲಿ ಒಳ್ಳೆಯ ಮಾರ್ಗವಿರಲಿ
- ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ವೃಷಭ
- ನಿಮ್ಮ ಯೋಗ್ಯತೆಗೆ ನಿಮ್ಮ ಪರಿಶ್ರಮಕ್ಕೆ ಪ್ರತಿಫಲ ಸಿಗಲಿದೆ
- ಇಂದು ನೀವು ಪ್ರಗತಿಯ ಪಥದಲ್ಲಿದ್ದೀರಿ
- ದುಂದು ವೆಚ್ಚಕ್ಕೆ ಸ್ವಲ್ಪ ಕಡಿವಾಣ ಹಾಕಿ
- ನೌಕರಿಯಲ್ಲಿ ಅಸಮಾಧಾನ ಇರಲಿದೆ
- ಹಿರಿಯರ ಸ್ವಾತಿಕ ಕೋಪಕ್ಕೆ ಗುರಿಯಾಗುತ್ತೀರಿ
- ಸ್ವಯಂ ಉದ್ಯೋಗದವರಿಗೆ ಲಾಭವಿದೆ
- ಕುಲದೇವತಾ ಆರಾಧನೆ ಮಾಡಿ
ಮಿಥುನ
- ರಾಜಕೀಯದಲ್ಲಿ ಆಸಕ್ತಿ ಬೇಡ
- ಶಾರೀರಿಕವಾಗಿ ಗಾಯವಾಗಬಹುದು ಜಾಗ್ರತೆವಹಿಸಿ
- ಅತಿಯಾದ ಕೋಪ ಒಳ್ಳೆಯದಲ್ಲ
- ಹೊಸ ಆಸ್ತಿ ಖರೀದಿಗೆ ಮನಸ್ಸು ಮಾಡುತ್ತೀರಿ
- ಇಂದು ಮಕ್ಕಳಿಗೆ ಅನುಕೂಲವಿದೆ
- ಬಂಧುಗಳಿಂದ ಶುಭವಾರ್ತೆ ಬರಬಹುದು
- ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ
ಕಟಕ
- ಕಾರ್ಯಸಿದ್ಧಿಯಿಂದ ಸಮಾಧಾನ ಆಗಲಿದೆ
- ಬಂಧುಗಳ ಆಗಮನದಿಂದ ಸಂತೋಷ ಪಡುತ್ತೀರಿ
- ನಿರೀಕ್ಷಿತ ಕಾರ್ಯಗಳಿಂದ ಶುಭವಿದೆ
- ಮಕ್ಕಳಿಂದ ಸಹಕಾರ ತೃಪ್ತಿ ಸಿಗಲಿದೆ
- ಹಲವಾರು ಹೊಸ ಯೋಜನೆಗಳಿಗೆ ಚಿಂತನೆ ಮಾಡುತ್ತೀರಿ
- ಸಮಯ ಚೆನ್ನಾಗಿದೆ ಸದ್ವಿನಿಯೋಗವಾಗಲಿ
- ಈಶ್ವರನ ಆರಾಧನೆ ಮಾಡಿ
ಸಿಂಹ
- ಧನಲಾಭದಿಂದ ಸಂತೋಷ ಆಗಲಿದೆ
- ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತೀರಿ
- ಬಂಧುಗಳಲ್ಲಿ ಸಂತಸ ಆಗಲಿದೆ
- ಭೂಮಿ ಖರೀದಿಗೆ ಯೋಗವಿದೆ
- ವಿದ್ಯಾರ್ಥಿಗಳಿಗೆ ಕೆಲವು ಸವಾಲುಗಳು ಇರಲಿದೆ
- ಪ್ರಯಾಣ ಮಾಡುವುದರಿಂದ ಶುಭವಿದೆ
- ಸಾಯಿಬಾಬರನ್ನು ಪ್ರಾರ್ಥನೆ ಮಾಡಿ
ಕನ್ಯಾ
- ವಿದ್ಯಾರ್ಥಿಗಳಿಗೆ ಹಲವಾರು ಸವಾಲುಗಳು ಸಮಸ್ಯೆಯಾಗಬಹುದು
- ಹಳೆಯ ಆಸ್ತಿಯ ವಿಚಾರದಲ್ಲಿ ಗೊಂದಲ ಆಗಬಹುದು
- ಅಧಿಕವಾದ ಪ್ರಯಾಣಕ್ಕೆ ಅವಕಾಶವಿದೆ ಆದರೆ ಅಶುಭ
- ಕೆಲಸದ ಒತ್ತಡದಿಂದ ಆಯಾಸ, ಬೇಸರ ಆಗಲಿದೆ
- ಹೊಂದಾಣಿಕೆ ಇರಲಿ ಒಳ್ಳೆಯದಾಗಲಿದೆ
- ಮಕ್ಕಳ ಜೊತೆಯಲ್ಲಿ ವಿಶ್ವಾಸವಿರಲಿ
- ಚಂಡಿಕಾ ಪರಮೇಶ್ವರಿಯನ್ನು ಸ್ತುತಿ ಮಾಡಿ
ತುಲಾ
- ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಖರ್ಚು ಮಾಡುವುದರಿಂದ ತೃಪ್ತಿ ಸಿಗಲಿದೆ
- ಸ್ನೇಹಿತರ ಮಧ್ಯೆ ವಾದ-ವಿವಾದಗಳು ಏರ್ಪಡುತ್ತದೆ
- ಸಾಲ ಮರುಪಾವತಿಗೆ ಅವಕಾಶವಿದೆ
- ಇಂದು ಆಸ್ತಿ ಖರೀದಿಗೆ ಮುಂದಾಗಬಹುದು
- ಮನೆಯಲ್ಲಿ ಸಣ್ಣಪುಟ್ಟ ವಿಚಾರಗಳಿಗೆ ಹೊಂದಾಣಿಕೆ ಇರಲಿ
- ಸಾಂಸಾರಿಕವಾಗಿ ಕೆಲವು ಮಾತು ಬರಬಹುದು
- ಗೋ ಸೇವೆಯನ್ನು ಮಾಡಿ
ವೃಶ್ಚಿಕ
- ವ್ಯವಹಾರದಲ್ಲಿ ದೊಡ್ಡ ಗೊಂದಲ ಆಗಲಿದೆ
- ಮಾನಸಿಕವಾಗಿ ಕಿರಿಕಿರಿ ಆಗಲಿದೆ
- ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ
- ಅಂದುಕೊಂಡ ಕೆಲಸವಾಗದೆ ಕೋಪ ಬರಬಹುದು
- ನಿರುದ್ಯೋಗಿಗಳಿಗೆ ಮಾನಸಿಕ ಹಿಂಸೆಯಾಗಲಿದೆ
- ಸ್ವಯಂ ಉದ್ಯೋಗ ಮಾಡಲು ಮಾನಸಿಕವಾದ ನಿರ್ಧಾರವನ್ನು ಮಾಡುತ್ತೀರಿ
- ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
ಧನಸ್ಸು
- ಪ್ರವಾಸದಿಂದ ಆನಂದ ಪಡುತ್ತೀರಿ
- ಸಹೋದರರಿಂದ ಶುಭವಾರ್ತೆ ಬರಲಿದೆ
- ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸ ಆಗಬಹುದು
- ಆಸ್ತಿ ವಿಚಾರದಲ್ಲಿರುವ ಸಮಸ್ಯೆ ಬಗೆ ಹರಿಯುವುದಿಲ್ಲ
- ಮನೋರೋಗದಿಂದ ಹೊರಬರಬೇಕು
- ಮಕ್ಕಳಿಗೆ ಅನುಕೂಲ ಮಾಡುತ್ತೀರಿ
- ಭೂವರಾಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಮಕರ
- ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಬಹುದು
- ತಾಯಿಯವರ ಹಣ ದುರುಪಯೋಗ ಆಗಲಿದೆ
- ವ್ಯಾವಹಾರಿಕವಾಗಿ ಬೆಳವಣಿಗೆ ಆಗಬಹುದು
- ಇಂದು ತಂದೆಯವರಿಗೆ ಆಘಾತವಾಗಬಹುದು
- ಮಕ್ಕಳಿಂದ ಉತ್ತಮವಾದ ವಾರ್ತೆ ಸಿಗಲಿದೆ
- ರಿಯಲ್ ಎಸ್ಟೇಟ್ ಏಜೆಂಟ್ಸ್ ಗಳಿಗೆ ಶುಭವಿದೆ
- ನವಗ್ರಹರ ಆರಾಧನೆ ಮಾಡಿ ಅದರಲ್ಲೂ ಸೂರ್ಯ ಗ್ರಹನನ್ನು ಪ್ರಾರ್ಥನೆ ಮಾಡಿ
ಕುಂಭ
- ಬುದ್ಧಿವಂತಿಕೆಯನ್ನು ಪ್ರದರ್ಶಿಸಲು ಮುಂದಾಗುತ್ತೀರಿ
- ವ್ಯವಹಾರದಲ್ಲಿ ಮುನ್ನಡೆಯನ್ನು ಸಾಧಿಸುತ್ತೀರಿ
- ಮಾತು ಮೃದುವಾಗಿರಲಿ ಹೊರಟುತನ ಬೇಡ
- ಸ್ನೇಹಿತರ ಜೊತೆ ವ್ಯಾವಹಾರಿಕ ಭಿನ್ನಾಭಿಪ್ರಾಯ ಇರಲಿದೆ
- ಸಾಂಸಾರಿಕವಾಗಿ ಹೊಂದಾಣಿಕೆ ಇರಲಿ
- ಪಿತ್ರಾರ್ಜಿತವಾದ ಆಸ್ತಿ ಲಭ್ಯವಿದೆ ಅದರ ಸೂಚನೆ ಇದೆ
- ಗಣಪತಿಯನ್ನು ಪ್ರಾರ್ಥನೆ ಮಾಡಿ
ಮೀನ
- ಸರ್ಕಾರಿ ಕೆಲಸಗಳಲ್ಲಿ ಅನುಕೂಲವಿದೆ
- ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅವಕಾಶಗಳಿರಲಿದೆ
- ಭೂ ಸಂಬಂಧಿ ವ್ಯವಹಾರಕ್ಕೆ ಮನಸ್ಸು ಮಾಡುತ್ತೀರಿ
- ಬಂಧುಗಳಿಂದ ಕೆಲವು ಸಮಸ್ಯೆಗಳು ಆಗಲಿದೆ
- ಯಾವುದೇ ರೀತಿಯ ನಕಾರಾತ್ಮಕ ಚಿಂತನೆಗಳು ಬೇಡ
- ಸಾರ್ವಜನಿಕವಾಗಿ ಮನ್ನಣೆ ಸಿಗಬಹುದು
- ಶಿವರಾಧನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ