/newsfirstlive-kannada/media/post_attachments/wp-content/uploads/2023/09/RAKSHIT_SHETTY_1.jpg)
ಸ್ಯಾಂಡಲ್​ವುಡ್​ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತವಾದ ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ಇಂದು ರಾಜ್ಯಾದ್ಯಂತ ತೆರೆಗೆ ಅಪ್ಪಳಿಸಲಿದೆ. ಸಿನಿಮಾ 2 ಭಾಗಗಳಲ್ಲಿ ತಯಾರಾಗಿದ್ದು, ಮೊದಲ ಭಾಗಕ್ಕೆ ಸೈಡ್-ಎ, 2ನೇ ಭಾಗಕ್ಕೆ ಸೈಡ್-ಬಿ ಎಂದು ಹೆಸರು ನೀಡಲಾಗಿದೆ. ಇಂದು ಸೈಡ್-ಎ ಥಿಯೇಟರ್​​ಗಳಿಗೆ ಸಾಗರದಂತೆ ಸಿನಿಮಾ ಮುನ್ನುಗ್ಗಲಿದೆ.
ಈಗಾಗಲೇ ಪ್ರೀಮಿಯರ್ ಶೋನಲ್ಲಿ ಚಿತ್ರ ನೋಡಿದವರಿಂದ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದ್ದು, ಕರ್ನಾಟಕ ಮಾತ್ರವಲ್ಲದೆ, ಹೊರ ರಾಜ್ಯಗಳಲ್ಲಿಯು ಬೇಡಿಕೆ ಹೆಚ್ಚಾಗಿದೆ. ವಿದೇಶದ ಹಲವೆಡೆ ಸಪ್ತಸಾಗರದಾಚೆ ಎಲ್ಲೋ ತೆರೆಗೆ ಬರುತ್ತಿದ್ದು, ಎಲ್ಲ ಕಡೆಯು ಕನ್ನಡದಲ್ಲಿಯೇ ಬಿಡುಗಡೆ ಆಗುತ್ತಿರುವುದು ವಿಶೇಷ.
[caption id="attachment_15950" align="aligncenter" width="800"]
ರಕ್ಷಿತ್ ಶೆಟ್ಟಿಗೆ ಜೋಡಿಯಾಗಿ ರುಕ್ಮಿಣಿ ವಸಂತ್[/caption]
ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರ ನಿರ್ದೇಶಿಸಿದ್ದ ಹೇಮಂತ್ ಕುಮಾರ್ ಈಗ ಸಪ್ತ ಸಾಗರದಾಚೆ ಎಲ್ಲೋ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಹೀಗಾಗಿ ರಕ್ಷಿತ್ ಹಾಗೂ ಹೇಮಂತ್ ರಾವ್ ಮ್ಯಾಜಿಕ್ ಮಾಡುವ ಭರವಸೆ ಪಕ್ಕಾ ಇದೆ. ಚರಣ್ ರಾಜ್ ಮ್ಯೂಸಿಕ್ ಕಂಪೋಸ್ ಮಾಡಿದ್ದು ಹಾಡುಗಳು ಹಿಟ್ ಆಗಿವೆ. ಹಾಗಾಗಿ ಸಿನಿಮಾ ಕೂಡ ಮ್ಯೂಸಿಕಲಿ ಹಿಟ್​ ಆಗುವ ನಿರೀಕ್ಷೆ ಡಬಲ್​ ಇದೆ.
ಇನ್ನು ರಕ್ಷಿತ್ ಶೆಟ್ಟಿಗೆ ಜೋಡಿಯಾಗಿ ರುಕ್ಮಿಣಿ ವಸಂತ್ ಕಾಣಿಸಿಕೊಂಡಿದ್ದು, ಚೈತ್ರ.ಜೆ ಆಚಾರ್, ಅವಿನಾಶ್, ಶರತ್ ಲೋಹಿತಾಶ್ವ, ಅಚ್ಯುತ್ ಕುಮಾರ್, ಪವಿತ್ರ ಲೋಕೇಶ್, ರಮೇಶ್ ಇಂದಿರಾ, ಗೋಪಾಲ್ ಕೃಷ್ಣ ದೇಶಪಾಂಡೆ ಸೇರಿ ಪ್ರತಿಭಾನ್ವಿತ ಕಲಾವಿದರು ಸಿನಿಮಾದಲ್ಲಿ ನಟನೆ ಮಾಡಿದ್ದಾರೆ. ದೊಡ್ಡ ತಾರಾಬಳಗವೇ ಇರೋ ಕಾರಣ ಸಾಕಷ್ಟು ನಿರೀಕ್ಷೆಗಳೂ ಸಪ್ತಸಾಗರದಚೆಯೆಲ್ಲೋ ಮೂಡಿದೆ.
ಚಾರ್ಲಿ 777 ನಂತರ ರಕ್ಷಿತ್ ಶೆಟ್ಟಿ ಸಿನಿಮಾ ಪ್ರೇಕ್ಷಕರೆದರು ಬರುತ್ತಿದ್ದು ಎಮೋಷನಲಿ ಈ ಸಿನಿಮಾ ಬಗ್ಗೆ ಎಕ್ಸ್​ಪೆಕ್ಟೇಶನ್ ಜಾಸ್ತಿ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us