RCB ಗೆಲ್ಲಲು ಈ ಫಾರ್ಮುಲಾ ಬೇಕೇಬೇಕು.. ಇವತ್ತು ಯಾರ ಕೊಡುಗೆ ತುಂಬಾನೇ ಮುಖ್ಯ ಗೊತ್ತಾ..?

author-image
Ganesh
Updated On
ನಾಳೆ ಆರ್​ಸಿಬಿಗೆ ಬಿಗ್​ ಡೇ.. ಲುಂಗಿ, ಬೆಥೆಲ್ ಇಲ್ಲ, ಬಲಿಷ್ಠ ತಂಡದಲ್ಲಿ ಯಾರೆಲ್ಲ ಇರಬಹುದು..?
Advertisment
  • ಲಕ್ನೋ ವಿರುದ್ಧ ಆರ್​ಸಿಬಿ ಗೆದ್ದರೆ ಅದೃಷ್ಟವೇ ಬದಲಾಗುತ್ತದೆ
  • ಟಾಸ್ ಗೆದ್ದು ಬ್ಯಾಟಿಂಗ್.. ಬಿಗ್ ಸ್ಕೋರ್​ ಚಾಲೆಂಜರ್ಸ್​ ಗುರಿ
  • ಸ್ಕೋರ್​ಬೋರ್ಡ್​​ ಮೇಲೆ ಬಿಗ್ ಟಾರ್ಗೆಟ್ ಸೆಟ್ ಆಗಲೇಬೇಕು

ಇವತ್ತಿನ ಪಂದ್ಯದಲ್ಲಿ ಲಕ್ನೋ ವಿರುದ್ಧ ಆರ್​ಸಿಬಿ ಗೆದ್ದರೆ ಅದೃಷ್ಟವೇ ಬದಲಾಗುತ್ತದೆ. ಬೆಂಗಳೂರು ತಂಡಕ್ಕೆ ಪಾಯಿಂಟ್ ಟೇಬಲ್​ನಲ್ಲಿ ನಂಬರ್.1 ಸ್ಥಾನಕ್ಕೇರೋ ಗೋಲ್ಡನ್ ಚಾನ್ಸ್​ ಸಿಗುತ್ತೆ. ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಈ ಒಂದು ಪಂದ್ಯ ಗೆದ್ರೆ ಅರ್ಧ ಕಪ್ ಗೆದ್ದಂತೆ. ಹಾಗಾಗಿ ಆರ್​ಸಿಬಿಯ ಈ ಒಂದು ಪಂದ್ಯದ ಗೆಲುವಿಗಾಗಿ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

ಟಾಸ್ ಗೆದ್ದು ಬ್ಯಾಟಿಂಗ್..! ಬಿಗ್ ಸ್ಕೋರ್​ ಚಾಲೆಂಜರ್ಸ್​ ಗುರಿ..!

ಆರ್​ಸಿಬಿ ಇವತ್ತಿನ ಪಂದ್ಯ ಗೆಲ್ಲಬೇಕು ಅಂದ್ರೆ ಅದಕ್ಕೂ ಮುಂಚೆ ಮೊದಲು ಟಾಸ್ ಗೆಲ್ಲಲೇಬೇಕು. ಆರ್​ಸಿಬಿ ಟಾಸ್ ಗೆದ್ರೆ ಅರ್ಧ ಪಂದ್ಯ ಗೆದ್ದಂತೆ. ಟಾಸ್ ಗೆದ್ದು ಆರ್​ಸಿಬಿ ಮೊದಲು ಬ್ಯಾಟಿಂಗ್ ಮಾಡಿದ್ರೆ, ಅಡ್ವಾಂಟೇಜ್ ಇರುತ್ತದೆ. ಯಾವುದೇ ಒತ್ತಡವಿಲ್ಲದೇ ಆರ್​ಸಿಬಿ ಬ್ಯಾಟರ್ಸ್​, ರನ್​ ಸ್ಕೋರ್ ಮಾಡಬಹುದು.

ಇದನ್ನೂ ಓದಿ: ಮುಂಬೈಗೆ ಮಣ್ಣು ಮುಕ್ಕಿಸಿದ ಪಂಜಾಬ್ ಕಿಂಗ್ಸ್​, ಜಯಭೇರಿ.. IPL ಪಾಯಿಂಟ್​ ಟೇಬಲ್​ನಲ್ಲಿ ಬದಲಾವಣೆ!

ಸ್ಕೋರ್​ಬೋರ್ಡ್​​ ಮೇಲೆ ಬಿಗ್ ಟಾರ್ಗೆಟ್ ಸೆಟ್ ಮಾಡಬಹುದು. ನಂತರ ಎದುರಾಳಿ ಬ್ಯಾಟರ್ಸ್​​ನ ಒತ್ತಡಕ್ಕೆ ಸಿಲುಕಿಸಬಹುದು. ಚೇಸಿಂಗ್ ಮಾಡುವಾಗ, ಎಂತಹ ಬಲಿಷ್ಠ ತಂಡಕ್ಕಾದ್ರೂ ಪ್ರೆಶರ್ ಇದ್ದೇ ಇರುತ್ತದೆ. ಪ್ರೆಶರ್ ಬಿಲ್ಡ್ ಮಾಡುವ ಫಾರ್ಮುಲಾವನ್ನ ಆರ್​ಸಿಬಿ ಅನುಸರಿಸಬೇಕು.

ಆರ್​ಸಿಬಿ ಬ್ಯಾಟ್ಸ್​ಮನ್​​ಗಳ ಕೈಯಲ್ಲಿದೆ ಕ್ವಾಲಿಫೈಯರ್-1 ಭವಿಷ್ಯ..!

ಲಕ್ನೋ ಗೆಲ್ಲೋಕೆ, ಆರ್​ಸಿಬಿ ಬ್ಯಾಟರ್ಸ್ ಕಾಣಿಕೆ ಮುಖ್ಯ. ಆರ್​ಸಿಬಿಯ ಟಾಪ್ ಮತ್ತು ಮಿಡಲ್ ಆರ್ಡರ್ ಬ್ಯಾಟರ್ಸ್ ಆರಂಭದಲ್ಲೇ ಫೈಯರ್ ಮಾಡಬೇಕು. ಪವರ್​ ಪ್ಲೇನಲ್ಲಿ ಪವರ್​ಫುಲ್ ಇನ್ನಿಂಗ್ಸ್​ ಆಡಬೇಕು. ಮಿಡಲ್ ಓವರ್ಸ್​​ನಲ್ಲೂ ಬ್ಯಾಟರ್ಸ್, ಲಕ್ನೋ ಬೌಲರ್​ಗಳನ್ನ ಟಾರ್ಗೆಟ್ ಮಾಡಿ​​ ವೇಗವಾಗಿ ರನ್​ಗಳಿಸಬೇಕು. ಕೆಳ ಕ್ರಮಾಂಕದಲ್ಲಿ ಆರ್​ಸಿಬಿ ಬ್ಯಾಟರ್ಸ್ ಡಲ್ ಆದ ಕಾರಣ, ಡೆತ್ ಓವರ್​ಗಳಲ್ಲಿ ನಿರೀಕ್ಷಿತ ರನ್​ ಬಂದಿಲ್ಲ. ಇದನ್ನ ಆರ್​ಸಿಬಿ ಸರಿ ಪಡಿಸಿಕೊಳ್ಳಬೇಕು. ಆರ್​ಸಿಬಿ ಬ್ಯಾಟರ್ಸ್​​ ಕ್ಲಿಕ್ ಆದ್ರೆ ಬಿಗ್ ಮಾರ್ಜಿನ್​ನಲ್ಲಿ ಗೆಲ್ಲೋ ಅವಕಾಶ ಇದೆ.​

ಇದನ್ನೂ ಓದಿ: ಲಕ್ನೋದಲ್ಲಿ ಇವತ್ತು ಆರ್​ಸಿಬಿಗೆ ಒಂದಲ್ಲ, ಎರಡು ಸವಾಲ್..! ಏನದು..?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment