/newsfirstlive-kannada/media/post_attachments/wp-content/uploads/2025/04/RAJAT-PATIDAR.jpg)
ಗುಜರಾತ್ ಟೈಟನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru vs Gujarat Titans) ತಂಡಗಳ ನಡುವೆ ಇಂದು ಸಂಜೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ಐಪಿಎಲ್ ಪಂದ್ಯ ನಡೆಯಲಿದೆ. 18ನೇ ಆವೃತ್ತಿಯ 14ನೇ ಪಂದ್ಯ ಇಂದು ನಡೆಯುತ್ತಿದ್ದು, ಗೆಲುವಿಗಾಗಿ ಎರಡೂ ತಂಡಗಳು ಸಿದ್ಧತೆ ಮಾಡಿಕೊಂಡಿವೆ.
ಹೇಗಿದೆ ಪಿಚ್ ರಿಪೋರ್ಟ್..?
ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ತವರಿನಲ್ಲಿ ಮೊದಲ ಪಂದ್ಯವನ್ನು ಆಡುತ್ತಿದೆ. ಚಿನ್ನಸ್ವಾಮಿ ಮೈದಾನ ಬ್ಯಾಟರ್ ಹಾಗೂ ಸ್ಪಿನ್ನರ್‌ಗಳಿಗೆ ಅನುಕೂಲರವಾಗಿದೆ. ಈ ಪಿಚ್ನಲ್ಲಿ ಅನೇಕ ಬಾರಿ ಹೈ-ಸ್ಕೋರ್ ದಾಖಲಾಗಿದೆ. ಫಾಸ್ಟ್ ಬೌಲರ್ಸ್ಗೆ ಹೊಸ ಬಾಲ್ ಸಹಾಯಕ್ಕೆ ಬರಬಹುದು. ಮಧ್ಯಮ ಓವರ್‌ಗಳಲ್ಲಿ ಸ್ಪಿನ್ನರ್‌ಗಳಿಗೆ ಅನುಕೂಲಕರವಾಗಿದೆ. ಮೈದಾನದ ಮೊದಲ ಇನ್ನಿಂಗ್ಸ್‌ನ ಸರಾಸರಿ ಸ್ಕೋರ್ 167 ಆಗಿದೆ. ಟಾಸ್ ಗೆದ್ದ ನಾಯಕ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರೆ ಒಳ್ಳೆಯದು.
ಇದನ್ನೂ ಓದಿ: ಆರ್ಸಿಬಿಯ ಇಬ್ಬರು ಸ್ಟಾರ್ಗಳಿಂದ ರನ್ ಬಂದೇ ಇಲ್ಲ.. ಇಂದು ಬಿಗ್ ಸ್ಕೋರ್ ನಿರೀಕ್ಷೆ..!
ಇಂದು ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಪಂದ್ಯಕ್ಕೆ ಮಳೆಯ ಆತಂಕ ಇಲ್ಲ. weather.com ಪ್ರಕಾರ, ಪಂದ್ಯದ ವೇಳೆ ಗಾಳಿಯ ವೇಗ ಗಂಟೆಗೆ 14-17 ಕಿ.ಮೀ ಇರಲಿದೆ. ತಾಪಮಾನವು 21 ಡಿಗ್ರಿ ಸೆಲ್ಸಿಯಸ್‌ನಿಂದ 32 ಡಿಗ್ರಿ ಸೆಲ್ಸಿಯಸ್ ವರೆಗೆ ಇರಲಿದೆ ಎಂದು ತಿಳಿಸಿದೆ.
ಇದನ್ನೂ ಓದಿ:ಪ್ರೀತಿಯ ಶ್ವಾನದ ಜೊತೆ ಮತ್ತೆ ಒಂದಾದ ಸುನಿತಾ ವಿಲಿಯಮ್ಸ್.. 9 ತಿಂಗಳ ಬಳಿಕ ಆಸೆ ಈಡೇರಿದ ಅದ್ಭುತ ಕ್ಷಣ!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್