/newsfirstlive-kannada/media/post_attachments/wp-content/uploads/2024/03/Virat-Kohli_RCB.jpg)
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮ್ಯಾಚ್ ಅಂದ್ರೆ ಸಾಕು, ಇಡೀ ಚಿನ್ನಸ್ವಾಮಿ ಸ್ಟೇಡಿಯಂ ಫುಲ್ ಪ್ಯಾಕ್ಡ್ ಆಗಿರುತ್ತೆ. ಆರ್ಸಿಬಿ.. ಆರ್ಸಿಬಿ ಜಯಘೋಷಗಳು ಮುಗಿಲು ಮುಟ್ಟಿರುತ್ತೆ. ಬೌಂಡರಿ, ಸಿಕ್ಸರ್ ಸಿಡಿಸಿದಾಗ ಹುಚ್ಚೆದ್ದು ಕುಣಿಯುವ ಫ್ಯಾನ್ಸ್, ಆಟಗಾರರ ಎನರ್ಜಿಯನ್ನ ಡಬಲ್ ಮಾಡ್ತಾರೆ. ಫ್ಯಾನ್ಸ್ ಸಂಭ್ರಮಾಚಣೆ ನೋಡುಗರ ಮೈರೋಮಾಂಚಗೊಳಿಸುತ್ತೆ. ಕಣ್ಣಾಯಿಸಿದಷ್ಟು ಆರ್ಸಿಬಿ ಜೆರ್ಸಿಯಿಂದ ಸ್ಟೇಡಿಯಂ ಕೆಂಪು ಸಮುದ್ರವಾಗಿರುತ್ತೆ. ಚಿನ್ನಸ್ವಾಮಿಯ ಈ ಕೆಂಪು ಸಮುದ್ರವನ್ನು ನೋಡೋದೆ ಚೆಂದ. ಆದ್ರೆ ಇವತ್ತು ಕೆಂಪು ಸಮುದ್ರದ ಬಣ್ಣ ಬದಲಾಗಲಿದೆ..
ಇದನ್ನೂ ಓದಿ: IPL ಟೀಮ್ ಓನರ್ ಇಂದ ತಿಮ್ಮಪ್ಪನಿಗೆ ಭಾರೀ ಮೌಲ್ಯದ ಚಿನ್ನ, ವಜ್ರ ಖಚಿತ ಆಭರಣಗಳು ದಾನ
ಕೊಹ್ಲಿಗೆ ಸಪ್ರೈಸ್ ನೀಡಲು ಅಭಿಮಾನಿಗಳ ಪ್ಲ್ಯಾನ್
ಚಿನ್ನಸ್ವಾಮಿ ಎಂದಾಕ್ಷಣ ನೆನಪಾಗುವುದು ರೆಡ್ ಜೆರ್ಸಿ. ಇವತ್ತು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಸಂಪೂರ್ಣ ಬಿಳಿಮಯವಾಗಲಿದೆ. ಇದಕ್ಕೆ ಕಾರಣ ವಿರಾಟ್ ಕೊಹ್ಲಿ ಮೇಲಿನ ಅಭಿಮಾನಿಗಳ ಪ್ರೀತಿ, ಪ್ರೇಮ. ಕೆಲವು ದಿನಗಳ ಹಿಂದಷ್ಟೇ ವಿರಾಟ್, ವಿದಾಯ ಪಂದ್ಯವನ್ನಾಡದೆ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಹೇಳಿ ಅಚ್ಚರಿ ಮೂಡಿಸಿದ್ದರು. ಇದರಿಂದ ಬೇಸರಗೊಂಡಿರುವ ಅಭಿಮಾನಿಗಳು, ಇವತ್ತು ಚಿನ್ನಸ್ವಾಮಿಯಲ್ಲಿ ಮರೆಯಲಾಗದ ನೆನಪೊಂದನ್ನ ನೀಡಲು ಮುಂದಾಗಿದ್ದಾರೆ. ಇವತ್ತಿನ ಕೆಕೆಆರ್ ಪಂದ್ಯಕ್ಕೆ ಕೆಂಪು ಜೆರ್ಸಿ ಬದಲಿಗೆ ಬಿಳಿ ಬಣ್ಣದ ಜೆರ್ಸಿ ಧರಿಸುವಂತೆ ಕರೆ ನೀಡಿದ್ದಾರೆ. ಆ ಮೂಲಕ ವಿರಾಟ್ಗೆ ವಿಶೇಷ ಗೌರವ ಸಲ್ಲಿಸುವ ಮಹತ್ವದ ಹೆಜ್ಜೆ ಇಟ್ಟಿದ್ದಾರೆ.
IPL ಇತಿಹಾಸದಲ್ಲೇ ಮೊದಲು..!
2008ರಲ್ಲಿ ಉದಯವಾಗಿದ್ದ ಐಪಿಎಲ್, ಇದುವರೆಗೆ 18 ಸೀಸನ್ಗಳನ್ನು ಕಂಡಿದೆ. ಈ 18 ವರ್ಷಗಳಲ್ಲಿ ಅದೆಷ್ಟೋ ಲೆಜೆಂಡರಿ ಆಟಗಾರರ ನಿವೃತ್ತಿ ಕೈಗೊಂಡಿದ್ದಿದೆ. ಸಚಿನ್ ತೆಂಡುಲ್ಕರ್, ಮಹೇಂದ್ರ ಸಿಂಗ್ ಧೋನಿಯವರಂತ ಆಟಗಾರರು ಮೂರು ಫಾರ್ಮೆಟ್ನಿಂದ ಹೊರ ನಡೆದಾಗಲೂ, ಅಭಿಮಾನಿಗಳು ವಿಶೇಷ ಗೌರವ ನೀಡಿದಿಲ್ಲ. ಆದ್ರೀಗ ಇಂಥಹ ಅಪರೂಪದ ಕ್ಷಣಗಳಿಗೆ ಚಿನ್ನಸ್ವಾಮಿ ಸಾಕ್ಷಿಯಾಗ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕನ್ನಡಿಗರ ನಿಷ್ಠೆಗೆ ಹಿಡಿದ ಕೈಗನ್ನಡಿಯೂ ಆಗಿದೆ.
ಫ್ಯಾನ್ಸ್ ಬಹುಮಾನಕ್ಕೆ ಕೊಹ್ಲಿ ನೀಡ್ತಾರಾ ರಿಟರ್ನ್ ಗಿಫ್ಟ್?
ಬಿಸಿಸಿಐ ನಿವೃತ್ತಿಯ ಪಂದ್ಯವನ್ನು ಆಯೋಜಿಸಲಿಲ್ಲ. ಸದ್ಯ ಈ ಟ್ರೆಂಡ್ ಕೂಡ ಭಾರತೀಯ ಕ್ರಿಕೆಟ್ನಲ್ಲಿ ಇಲ್ಲ. ಇದೇ ಕಾರಣಕ್ಕೆ ಆರ್ಸಿಬಿ ಫ್ಯಾನ್ಸ್, ಬಿಸಿಸಿಐ ಟಕ್ಕರ್ ನೀಡಲು ಮುಂದಾಗಿದ್ದಾರೆ. ಹೀಗೆಲ್ಲಾ ಆರಾಧಿಸುವ, ಪ್ರೀತಿಸುವ ಅಭಿಮಾನಿಗಳಿಗೆ ಸಾಲಿಡ್ ಫಾರ್ಮ್ನಲ್ಲಿರುವ ವಿರಾಟ್, ಶತಕದ ರಿಟರ್ನ್ ಗಿಫ್ಟ್ ನೀಡಿದರು ಅಚ್ಚರಿ ಇಲ್ಲ. ಮಳೆರಾಯ ಅವಕೃಪೆಗೆ ಒಳದಾಗದಿದ್ರೆ ಸಾಕಷ್ಟೇ.
ಇದನ್ನೂ ಓದಿ: ಆರ್ಸಿಬಿಯಲ್ಲಿ ಈಗ ಮತ್ತೊಬ್ಬ ಕನ್ನಡಿಗ.. ಬ್ಯಾಟಿಂಗ್ ವಿಭಾಗಕ್ಕೆ ಬಂದಿದೆ ಸೂಪರ್ ಪವರ್..!
ಕೊಹ್ಲಿ ಮೇಲಿನ ಪ್ರೀತಿ ಬ್ಯಾಟರ್ಗಳಿಗೆ ಸಂಕಷ್ಟ
ಆರ್ಸಿಬಿ ಅಭಿಮಾನಿಗಳು ಕೊಹ್ಲಿ ಮೇಲಿನ ಪ್ರೀತಿಗೆ, ಗೌರವ ಸಲ್ಲಿಕೆಗೆ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ ನಿಜ. ಆ ಪ್ರೀತಿಯೇ ಬ್ಯಾಟರ್ಗಳಿಗೆ ಬಿಸಿತುಪ್ಪವಾಗಿ ಪರಿಣಮಿಸುವ ಸಾಧ್ಯತೆ ಇದೆ. ಯಾಕಂದ್ರೆ ವೈಟ್ಬಾಲ್ ಕ್ರಿಕೆಟ್ನಲ್ಲಿ ಇಡೀ ಸ್ಟೇಡಿಯಂ ವೈಟ್ ಮಯವಾದಲ್ಲಿ, ಬಾಲ್ ಪಿಕ್ ಮಾಡೋದು ನಿಜಕ್ಕೂ ಬಿಗೆಸ್ಟ್ ಚಾಲೆಂಜ್.
ಚೆಂಡು ಪಿಕ್ ಮಾಡೋದು ಕಷ್ಟ!
ಆರ್ಸಿಬಿ ಅಭಿಮಾನಿಗಳೇ 17ನೇ ತಾರೀಖಿನ ಪಂದ್ಯಕ್ಕೆ ನೀವು ಬಿಳಿ ಜೆರ್ಸಿಯಲ್ಲಿ ಬರಲು ಯೋಚಿಸುತ್ತಿದ್ದೀರಾ? ಇದು ನಿಜವಾಗಿದ್ದರೆ, ನೀವು ಅದನ್ನ ಮಾಡಲು ಸಾಧ್ಯವಾದರೆ, ಅದ್ಭುತ ಮತ್ತು ಯುಗಯುಗಕ್ಕೊಂದು ನೋಡಲು ಸಿಗುವ ದೃಶ್ಯ. ಆದರೆ ವೈಟ್ ಬಾಕ್ ಡ್ರಾಪ್ನಲ್ಲಿ ಚೆಂಡನ್ನ ಪಿಕ್ ಮಾಡುವುದು ಕಷ್ಟಕರವಾಗುತ್ತೆ ಎಂದು ಕಾಮೆಂಟೇಟರ್ ಹರ್ಷಬೋಗ್ಲೆ ಅಭಿಪ್ರಾಯಪಟ್ಟಿದ್ದಾರೆ. ಕ್ರಿಕೆಟ್ ಪಂಡಿತ ಹರ್ಷ ಬೋಗ್ಲೆ ಹೇಳಿರುವುದು ನೂರಕ್ಕೆ ನೂರು ಸತ್ಯ. ಈ ಸವಾಲಿನ ನಡುವೆಯೂ ಮ್ಯಾಚ್ ಹೇಗೆ ನಡೆಯುತ್ತೆ ಅನ್ನೋ ಕ್ಯೂರಿಯಾಸಿಟಿ ಹುಟ್ಟಿಹಾಕಿರುವುದು ಸುಳ್ಳಲ್ಲ.
ಇದನ್ನೂ ಓದಿ: ಮಯಾಂಕ್ರನ್ನೇ ಆರ್ಸಿಬಿ ಸೆಲೆಕ್ಟ್ ಮಾಡಿದ್ದು ಯಾಕೆ..? ಅಸಲಿ ಕಾರಣ ಇಲ್ಲಿದೆ..
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್