ಇಂದು RCB vs PBKS ಪಂದ್ಯ.. ಈ ಹೈವೋಲ್ಟೇಜ್​ ಮ್ಯಾಚ್​ ಎಷ್ಟು ಗಂಟೆಗೆ, ಎಲ್ಲಿ ನಡೆಯುತ್ತೆ?

author-image
Bheemappa
Updated On
RCB vs PBKS ನಡುವಿನ ಜಿದ್ದಾಜಿದ್ದಿ ಹೇಗಿದೆ.. ಹೆಚ್ಚು ಬಾರಿ ಮ್ಯಾಚ್​ ಗೆದ್ದವರು ಯಾರು?
Advertisment
  • ಪಂಜಾಬ್​ ವಿರುದ್ಧದ ಸೇಡಿಗೆ ಸಿದ್ಧವಾಗಿರುವ ಬೆಂಗಳೂರು ತಂಡ
  • ತವರಲ್ಲಿ ಅನುಭವಿಸಿದ ಅವಮಾನಕ್ಕೆ ಪ್ರತ್ಯುತ್ತರ ಇಂದು ಕೊಡುತ್ತಾ?
  • RCB-ಪಂಜಾಬ್​ ಈ ತಂಡಗಳಲ್ಲಿ ಹೆಚ್ಚು ಬಾರಿ ಗೆದ್ದಿರುವ ಟೀಮ್?

ರಾಯಲ್ ಚಾಲೆಂಜರ್ಸ್​ ಬೆಂಗಳೂರು ಹಾಗೂ ಪಂಜಾಬ್​ ಕಿಂಗ್ಸ್​ ನಡುವೆ ಮತ್ತೊಂದು ಹೈವೋಲ್ಟೇಜ್​ ಮ್ಯಾಚ್ ಇಂದು ನಡೆಯಲಿದೆ. ಈ ಪಂದ್ಯ ಎಲ್ಲಿ, ಎಷ್ಟು ಗಂಟೆಗೆ ನಡೆಯುತ್ತದೆ ಎನ್ನುವ ಮಾಹಿತಿ ಈ ಕಳೆಗೆ ಇದೆ. ಪಂಜಾಬ್​ ವಿರುದ್ಧ ಈಗಾಗಲೇ ತವರಿನಲ್ಲಿ ಅವಮಾನಕ್ಕೆ ಒಳಗಾದ ಆರ್​ಸಿಬಿ ಸೇಡಿಗಾಗಿ ಬುಸುಗುಟ್ಟುತ್ತಿದೆ.

publive-image

ಪಂಜಾಬ್ ವಿರುದ್ಧದ ಇನ್ನೊಂದು ಪಂದ್ಯ ಚಂಡೀಗಢದ ಮುಲ್ಲನ್ಪುರ್​ನ ಮಹಾರಾಜ ಯಾದವೀಂದ್ರ ಸಿಂಗ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಇಂದು ಭಾನುವಾರ ಆಗಿದ್ದರಿಂದ ಡಬಲ್​ ಹೆಡ್ಡರ್​ ಪಂದ್ಯದಲ್ಲಿ ಆರ್​ಸಿಬಿ ಹಾಗೂ ಪಂಜಾಬ್​​ ನಡುವಿನ ಪಂದ್ಯವೇ ಮೊದಲು ಆರಂಭವಾಗುತ್ತದೆ. ಅಂದರೆ ಮಧ್ಯಾಹ್ನ 3:30ಕ್ಕೆ ಎರಡು ತಂಡಗಳ ಕಾದಾಟ ಶುರುವಾಗಲಿದೆ.

ಪಂಜಾಬ್ ಹಾಗೂ ಆರ್​ಸಿಬಿ ನಡುವಿನ ಸೋಲು, ಗೆಲುವುಗಳನ್ನು ನೋಡುವುದಾದ್ರೆ ಈ ವರೆಗೆ ಈ ಎರಡು ತಂಡಗಳು ಒಟ್ಟು 34 ಬಾರಿ ಪೈಪೋಟಿಗೆ ಬಿದ್ದಿವೆ. ಇದರಲ್ಲಿ ಆರ್​ಸಿಬಿ 16 ಪಂದ್ಯಗಳಲ್ಲಿ ಗೆಲುವು ಪಡೆದಿದ್ರೆ ಪಂಜಾಬ್ ತಂಡದ ಕೊನೆಯ ಗೆಲುವು ಸೇರಿ 18 ಬಾರಿ ವಿಜಯ ಪತಾಕೆ ಹಾರಿಸಿದೆ. ಆದ್ರೆ ಇಂದಿನ ಪಂದ್ಯ ಆರ್​ಸಿಬಿಯ ಪ್ರತಿಷ್ಠೆ ಆಗಿದೆ. ಸೋಲಿಗೆ ಸೇಡು ತೀರಿಸಿಕೊಳ್ಳಬೇಕಿದೆ.

ಇದನ್ನೂ ಓದಿ:ಬ್ಯಾಟಿಂಗ್​ನಲ್ಲಿ ಮತ್ತೆ ಕೈಕೊಟ್ಟ ರಿಷಭ್​ ಪಂತ್​.. ಸಾಧಾರಣ ಮೊತ್ತದ ಗುರಿ ನೀಡಿದ ಲಕ್ನೋ

publive-image

ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಳೆ ಕಾರಣದಿಂದ 14 ಓವರ್​ಗಳಿಗೆ ಪಂದ್ಯದಲ್ಲಿ ನಿಗಧಿ ಮಾಡಲಾಗಿತ್ತು. ಈ ಪಂದ್ಯದಲ್ಲೂ ಟಾಸ್ ಸೋತ ಆರ್​ಸಿಬಿ ಮೊದಲ ಬ್ಯಾಟಿಂಗ್ ಮಾಡಿ ಕೈಸುಟ್ಟುಕೊಂಡಿತ್ತು. ಬ್ಯಾಕ್​ ಟು ಬ್ಯಾಕ್​ ವಿಕೆಟ್​ ಹೋಗಿ ಕೇವಲ 95 ರನ್​ಗಳ ಟಾರ್ಗೆಟ್ ನೀಡಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಪಂಜಾಬ್​ 98 ರನ್​ ಗಳಿಸುವ ಮೂಲಕ ಗೆಲುವು ಪಡೆದಿತ್ತು. ಈ ಸೋಲಿನ ಸೇಡು ತೀರಿಸಿಕೊಳ್ಳಲು ಆರ್​ಸಿಬಿ ರೆಡಿಯಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment