/newsfirstlive-kannada/media/post_attachments/wp-content/uploads/2024/03/KOHLI_RCB.jpg)
ಈ ಸೀಸನ್​ನ ಮೊದಲ ಪಂದ್ಯದಲ್ಲೇ ಸೋತ್ರೂ ಆರ್​​ಸಿಬಿ ಫ್ಯಾನ್ಸ್​​ ಮನಸಲ್ಲಿ ಮಾತ್ರ ಕಪ್​ ನಮ್ದೇ ಅನ್ನೋ ಆತ್ಮವಿಶ್ವಾಸ ಕರಗಿಲ್ಲ. ಮೊದಲ ಪಂದ್ಯ ಸೋತ್ರೆ ಏನಂತೆ ಉಳಿದ ಪಂದ್ಯಗಳಲ್ಲಿ ಗೆಲುವು ನಮ್ದೇ ಅನ್ನೋದು ಅಭಿಮಾನಿಗಳ ಆತ್ಮವಿಶ್ವಾಸ. ಆ ಅಭಿಮಾನದ ಹಿಂದಿನ ಸೀಕ್ರೆಟ್​​ ಕೆಜಿಎಫ್​ ಜೋಡಿ.
ಚೆಪಾಕ್​​ನ ಸೋಲು.. ಈಗ ಮುಗಿದ ಅಧ್ಯಾಯ.. ಆದ್ರೆ, ಇವತ್ತು ಹೊಸ ಅಧ್ಯಾಯ ಬರೆಯೋಕೆ ಆರ್​​ಸಿಬಿ ಸಜ್ಜಾಗಿದೆ. ಹೋಮ್​​ಗ್ರೌಂಡ್​​ನಲ್ಲಿ ಹೋಮ್​​ಕ್ರೌಡ್​ ಎದುರು ಮೊದಲ ಪಂದ್ಯವನ್ನಾಡಲು ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ಆರ್ಮಿ ರೆಡಿಯಾಗಿದೆ. ಆರ್​​ಸಿಬಿ ಲಾಯಲ್​ ಫ್ಯಾನ್ಸ್ ಕೂಡ​ ಪವರ್​ ಫುಲ್​ ಆಟ ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ.
/newsfirstlive-kannada/media/post_attachments/wp-content/uploads/2024/03/KOHLI_RCB_1-1.jpg)
ಒಂದಲ್ಲ.. ಎರಡಲ್ಲ.. ಬರೋಬ್ಬರಿ 16 ವರ್ಷಗಳ ಕನಸು. ಪ್ರತಿ ಬಾರಿ ಐಪಿಎಲ್​ ಬಂದಾಗಲೂ ಚಿನ್ನಸ್ವಾಮಿ ಮೈದಾನ ಕಿಕ್ಕಿರಿದು ತುಂಬುತ್ತೆ. ಈ ಸಲ ಕಪ್​​ ನಮ್ದೇ ಅನ್ನೋ ಘೋಷವಾಕ್ಯ ಮುಗಿಲುಮುಟ್ಟುತ್ತೆ. ಆರ್​​ಸಿಬಿ.. ಆರ್​​ಸಿಬಿ.. ಎಂದು ಫ್ಯಾನ್ಸ್​ ಕೂಗಿದ್ದೇ ಬಂತು ಕಪ್​ ಕನಸಾಗೇ ಉಳಿದಿದೆ. ಆದ್ರೂ ಈ ಬಾರಿ ಕಪ್​​ ನಮ್ದಾಗುತ್ತೆ ಅನ್ನೋ ನಿರೀಕ್ಷೆ ಚಿಗುರೊಡೆದಿದೆ. ಅದಕ್ಕೆ ಕಾರಣ ಕೆ.ಜಿ.ಎಫ್​ ಜೋಡಿ.
ಕಿಂಗ್​​ಡಮ್​​ನಲ್ಲಿ ಕೊಹ್ಲಿ ಕಣ್ತುಂಬಿಕೊಳ್ಳಲು ಫ್ಯಾನ್ಸ್​ ಕಾತರ.!
ಡೆಲ್ಲಿಯಲ್ಲಿ ಹುಟ್ಟಿದ ವಿರಾಟ್​ ಕೊಹ್ಲಿಗೆ ಬೆಂಗಳೂರೆ ಎಲ್ಲ. ಚಿನ್ನಸ್ವಾಮಿ ಮೈದಾನದಲ್ಲಿ ಕೊಹ್ಲಿ ಕಣಕ್ಕಿಳಿದ್ರೆ ಸಾಕು ಕೇಳೋದು ಎರಡೇ ಎರಡು ಸದ್ದು. ಒಂದು ಆರ್​​ಸಿಬಿ ಆರ್​​ಸಿಬಿ, ಇನ್ನೊಂದು ಕೊಹ್ಲಿ.. ಕೊಹ್ಲಿ.. ಆರಂಭದಿಂದ ಅಂತ್ಯವರೆಗೆ ಈ ಚಾಂಟ್ಸ್​​ ಮುಗಿಲು ಮುಟ್ಟುತ್ತೆ. ಇವತ್ತು ಕಿಂಗ್​ ಕೊಹ್ಲಿ ತನ್ನ ಕಿಂಗ್​​ಡಂಮ್​ಗೆ ವಾಪಾಸ್ಸಾಗ್ತಿದ್ದಾರೆ. ಕೊಹ್ಲಿ ಕಣ್ತುಂಬಿಕೊಳ್ಳಲು ಫ್ಯಾನ್ಸ್​ ಕಿಕ್ಕಿರಿದು ನೆರೆಯೋದ್ರಲ್ಲಿ ಡೌಟೇ​ ಬೇಡ.
ಕ್ಯಾಪ್ಟನ್​​ ಡುಪ್ಲೆಸಿ ಮೇಲಿದೆ ನಿರೀಕ್ಷೆಯ ಭಾರ.!
ಕಳೆದ ಸೀಸನ್​ನಲ್ಲಿ ಆರ್​​ಸಿಬಿ ಕ್ಯಾಪ್ಟನ್​ ಬ್ಯಾಟಿಂಗ್​ ನೆಕ್ಸ್ಟ್​ ಲೆವೆಲ್​ನಲ್ಲಿತ್ತು. ಆದ್ರೆ, ಈ ಸೀಸನ್​ನ ಮೊದಲ ಪಂದ್ಯದಲ್ಲಿ ಅಂತಾ ಪರ್ಫಾಮೆನ್ಸ್​ ಬರಲ್ಲ. ಇಂದು ನಡೆಯೋ 2ನೇ ಪಂದ್ಯದಲ್ಲಿ ನಾಯಕನಿಂದ ಖತರ್ನಾಕ್​ ಆಟ ಬರಲೇ ಬೇಕು. ಕಳೆದ ಸೀಸನ್​ನಂತೆ ಫಾರ್ಮ್​​​ ಕಂಡು ಕೊಂಡು ಫಾಫ್​ ಫೆಂಟಾಸ್ಟಿಕ್​ ಆಟವಾಡಿದ್ರೆ, ಪಂಜಾಬ್​ ಖೇಲ್​ ಖತಃ ಆಗೋದ್ರಲ್ಲಿ ಅನುಮಾನ ಇಲ್ಲ.
ಚಿನ್ನಸ್ವಾಮಿಯಲ್ಲಿ ಮ್ಯಾಜಿಕ್​ ಮಾಡ್ತಾರಾ ಮ್ಯಾಕ್ಸಿ.?
ಗ್ಲೇನ್​​ ಮ್ಯಾಕ್ಸ್​ವೆಲ್​.. ಆರ್​​ಸಿಬಿ ಪಾಳೆಯದ ಸಿಡಿಗುಂಡು.. ಬ್ಯಾಟಿಂಗ್​, ಬೌಲಿಂಗ್​ ಎರಡರಲ್ಲೂ ಮ್ಯಾಚ್​​ ಗೆಲ್ಲಿಸಿಕೊಡೋದ್ರಲ್ಲಿ ನಿಸ್ಸೀಮ. ಈ ಮ್ಯಾಕ್ಸ್​​ವೆಲ್​ ಕೂಡ ಚೆಪಾಕ್​ನಲ್ಲಿ ಮುಗ್ಗರಿಸಿದ್ದಾರೆ. ಫಸ್ಟ್​ ಮ್ಯಾಚ್​ನಲ್ಲಿ​​ ಫೇಲ್​ ಆಗಿರೋ ಮ್ಯಾಕ್ಸಿ, ಚಿನ್ನಸ್ವಾಮಿಯಲ್ಲಿ ಸಿಡಿದೇಳಲಿ ಅನ್ನೋದು ಫ್ಯಾನ್ಸ್​ ಪ್ರಾರ್ಥನೆ.
ಇದನ್ನೂ ಓದಿ: ಮರಳಿ ಗೂಡಿಗೆ ಬಂದ ಗಾಲಿ.. ಜನಾರ್ದನ ರೆಡ್ಡಿ, ಪತ್ನಿ ಅರುಣಾ ಲಕ್ಷ್ಮಿ ಬಿಜೆಪಿ ಪಕ್ಷಕ್ಕೆ ಅಧಿಕೃತ ಸೇರ್ಪಡೆ
/newsfirstlive-kannada/media/post_attachments/wp-content/uploads/2024/03/RCB-15.jpg)
ಬೌಲಿಂಗ್​ನ ಭರವಸೆ ಮಿಯಾನ್ ಸಿರಾಜ್​.!
ಕೆಜಿಎಫ್​.. ಕೊಹ್ಲಿ, ಡುಪ್ಲೆಸಿ, ಮ್ಯಾಕ್ಸ್​ವೆಲ್​.. ಈ ಮೂವರ ಮೇಲೆ ಬ್ಯಾಟಿಂಗ್​ನಲ್ಲಿ ಆರ್​​ಸಿಬಿ ಫ್ಯಾನ್ಸ್ ಭರವಸೆಯಿದ್ರೆ, ಬೌಲಿಂಗ್​ನಲ್ಲಿ 100% ನಂಬಿರೋದು ಮೊಹಮ್ಮದ್​ ಸಿರಾಜ್​ರನ್ನ. ಈ ಸಿರಾಜ್​​ ಕೂಡ ಮೊದಲ ಪಂದ್ಯದಲ್ಲಿ ವಿಕೆಟ್​​ಲೆಸ್​ ಆಗಿ, ಫ್ಲಾಫ್​ ಆಗಿದ್ದಾರೆ. 2ನೇ ಪಂದ್ಯದಲ್ಲಿ ಸಿರಾಜ್​ ಧಮ್​ದಾರ್​​ ಪರ್ಫಾಮೆನ್ಸ್​ ನೀಡ್ತಾರೆ ಅನ್ನೋದು ಎಲ್ಲರ ನಿರೀಕ್ಷೆ.
ಮೈದಾನದಲ್ಲಿ ಕಣಕ್ಕಿಳಿದು ಆಡೋದು 11 ಮಂದಿ ಆಟಗಾರರಾದ್ರೂ, ಆರ್​​ಸಿಬಿ ಫ್ಯಾನ್ಸ್​ ನಂಬಿರೋದು ಮಾತ್ರ ಈ ನಾಲ್ವರನ್ನ ಮಾತ್ರ. ಹೋಮ್​​ಗ್ರೌಂಡ್​ನ ಮೊದಲ ಫೈಟ್​ನಲ್ಲಿ ಈ ನಾಲ್ವರು ಆರ್ಭಟಿಸ್ತಾರಾ.? ಆರ್​​ಸಿಬಿ ವಿಜಯಪತಾಕೆ ಹಾರಿಸುತ್ತಾ ಕಾದು ನೋಡೋಣ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us